ಆನ್‌ಲೈನ್ ಚಿಟ್ಟೆ ಚಾಲೆಂಜ್‌: ನರಳಿ, ನರಳಿ ಪ್ರಾಣ ಬಿಟ್ಟ 14 ವರ್ಷದ ಬಾಲಕ; ಏನಿದರ ಮಾಯೆ?

author-image
admin
Updated On
ಆನ್‌ಲೈನ್ ಚಿಟ್ಟೆ ಚಾಲೆಂಜ್‌: ನರಳಿ, ನರಳಿ ಪ್ರಾಣ ಬಿಟ್ಟ 14 ವರ್ಷದ ಬಾಲಕ; ಏನಿದರ ಮಾಯೆ?
Advertisment
  • ಆನ್‌ಲೈನ್‌ನಲ್ಲಿ ತೆಗೆದುಕೊಂಡ ಒಂದು ಚಾಲೆಂಜ್‌ಗೆ ಮೃತ್ಯುಕೂಪ!
  • ಸತತ 7 ದಿನಗಳ ಕಾಲ ನರಳಿ, ನರಳಿ ಕೊನೆಗೆ ಪ್ರಾಣ ಬಿಟ್ಟ
  • ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೇ ನಡೆದ ವಿಲಕ್ಷಣ ಘಟನೆ

ಆನ್‌ಲೈನ್‌ನಲ್ಲಿ ಮುಳುಗಿ ಹೋಗುವ ಮಕ್ಕಳು ಯಾವುದಕ್ಕೆ ಅಡಿಕ್ಟ್ ಆಗಿರುತ್ತಾರೆ ಅಂತ ಕಂಡು ಹಿಡಿಯೋದು ಬಹಳ ಕಷ್ಟ. ಕೆಲವೊಮ್ಮೆ ಸತ್ಯ ಗೊತ್ತಾಗುವಷ್ಟರಲ್ಲಿ ಘೋರ ಅನಾಹುತ ನಡೆದು ಹೋಗಿರುತ್ತೆ. ಈ ಬಾಲಕನ ಜೀವದ ಜೊತೆ ಚಿಟ್ಟೆಯೊಂದು ಚೆಲ್ಲಾಟವಾಡಿದೆ. ಆಶ್ಚರ್ಯವಾದ್ರೂ ಇದು ಘನಘೋರವಾದ ದುರಂತ ಕಥನ.

ಈ ಬಾಲಕನ ಹೆಸರು ಡೇವಿ ನ್ಯೂನ್ಸ್ ಮೊರೆರಾ. ಇವನಿಗೆ ಇನ್ನೂ 14 ವರ್ಷ ವಯಸ್ಸು. ಇವನು ಆನ್‌ಲೈನ್‌ನಲ್ಲಿ ತೆಗೆದುಕೊಂಡ ಒಂದು ಚಾಲೆಂಜ್ ಈತನ ಮೃತ್ಯುಕೂಪಕ್ಕೆ ತಳ್ಳಿದೆ. ಚಿಟ್ಟೆ (Butterfly) ಸವಾಲು ಸ್ವೀಕರಿಸಿದ ಡೇವಿ ಬ್ರೆಜಿಲ್‌ನಲ್ಲಿ ಸತತ 7 ದಿನಗಳ ಕಾಲ ನರಳಿ, ನರಳಿ ಕೊನೆಗೆ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ಜಸ್ಟ್ 27 ಸೆಕೆಂಡ್.. ನದಿಗೆ ಹಾರಿದ ಡಾ. ಅನನ್ಯ ಸಾವಿನ ಸುತ್ತಾ ಅನುಮಾನ? ಸ್ವಿಮ್ಮರ್‌ ಎಕ್ಸ್‌ಪರ್ಟ್‌ಗೆ ಆಗಿದ್ದೇನು? 

ಏನಿದು ಚಿಟ್ಟೆ ಚಾಲೆಂಜ್‌?
ಚಿಟ್ಟೆ (Butterfly) ಸವಾಲು ಆನ್‌ಲೈನ್‌ನಲ್ಲಿರುವ ಒಂದು ವಿಲಕ್ಷಣ ಸವಾಲು. ಚಿಟ್ಟೆಯನ್ನ ನೀರಿನಲ್ಲಿ ಮುಳುಗಿಸಿ ಆ ನೀರನ್ನು ಇಂಜೆಕ್ಷನ್ ಮೂಲಕ ದೇಹದೊಳಕ್ಕೆ ಸೇರಿಸಿಕೊಂಡು ಪ್ರಾಣ ಬಿಡುವುದು.

ಡೇವಿ ನ್ಯೂನ್ಸ್ ಮೊರೆರಾ ಕೂಡ ಈ ಚಿಟ್ಟೆ ಸವಾಲಿಗೆ ಮಾರು ಹೋಗಿದ್ದಾನೆ. ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೇ ಚಿಟ್ಟೆ ಮುಳುಗಿದ ನೀರಿನಲ್ಲಿ ತನ್ನ ಕಾಲಿಗೆ ಇಂಜೆಕ್ಟ್ ಮಾಡಿಕೊಂಡಿದ್ದಾನೆ. ನಂತರ ದಿಢೀರ್‌ ಅಸ್ವಸ್ಥನಾಗಿದನ್ನು ನೋಡಿ ಮನೆಯವರು ಏನಾಯ್ತು ಎಂದು ಕೇಳಿದ್ದಾರೆ.

publive-image

ಡೇವಿ ತನ್ನ ತಂದೆಗೆ ಆಟವಾಗ ಪೆಟ್ಟಾಯ್ತು ಎಂದು ಸುಳ್ಳು ಹೇಳಿದ್ದಾನೆ. ಕೊನೆಗೆ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಪರಿಶೀಲನೆ ನಡೆಸಲಾಗಿದೆ. ದಿನ ಕಳೆದಂತೆ ಬಾಲಕನ ಸ್ಥಿತಿ ಬಿಗಡಾಯಿಸಿದ್ದು, ಇಂಜೆಕ್ಟ್ ಮಾಡಿಕೊಂಡಿದ್ದ ಕಾಲಿನಲ್ಲಿ ಗಾಯ ಕಾಣಿಸಿದೆ. ಆಗ ವೈದ್ಯರು ಕೇಳಿದಾಗ ಇಂಜೆಕ್ಟ್ ಮಾಡಿಕೊಂಡಿದ್ದ ಸತ್ಯ ಬಾಯ್ಬಿಟ್ಟಿದ್ದಾನೆ.

ಚಿಟ್ಟೆ ಸವಾಲಿನಿಂದ ಈ ಬಾಲಕ ಸಾವನ್ನಪ್ಪಿದ ಸುದ್ದಿ ಬ್ರೆಜಿಲ್ ದೇಶಾದ್ಯಂತ ಸಖತ್ ಸುದ್ದಿಯಾಗಿದೆ. ಈ ಕುರಿತು ಉನ್ನತ ತನಿಖೆಗೆ ಆದೇಶಿಸಲಾಗಿದ್ದು, ಚಿಟ್ಟೆಯಲ್ಲಿ ವಿಷದ ಅಂಶ ಇರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ. ಬಾಲಕ ಪೋಸ್ಟ್ ಮಾರ್ಟಂ ವರದಿ ಮೂಲಕ ಸಾವಿಗೆ ಕಾರಣವೇನು ಎಂದು ಹುಡುಕಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment