ಮನೆ ಲೀಸ್‌ ಪಡೆಯೋ ಮುನ್ನ ಎಚ್ಚರ! 22 ಮಂದಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಕಳ್ಳರು

author-image
Ganesh Nachikethu
Updated On
ಮನೆ ಲೀಸ್‌ ಪಡೆಯೋ ಮುನ್ನ ಎಚ್ಚರ! 22 ಮಂದಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಕಳ್ಳರು
Advertisment
  • ಒಂದೇ ಮನೆ.. 22 ಜನ್ರಿಗೆ ಲೀಸ್ ಕೊಟ್ಟು ಮಹಾ ದೋಖಾ!
  • ಹಣ ಕೊಡಿ ಅಂದ್ರೆ ಕಣ್ಣೀರು ಸುರಿಸಿ ಮಾಡ್ತಾರಂತೆ ಡ್ರಾಮಾ!
  • ಮನೆಗಾಗಿ ಆನ್​ಲೈನ್​ನಲ್ಲಿ ಹುಡುಕುತ್ತಿದ್ದೀರಾ? ಬಿ ಅಲರ್ಟ್​!

ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ಮಾತನ್ನ ಈ ಫ್ಯಾಮಿಲಿ ಫುಲ್ ಸೀರಿಯಸ್​ ಆಗಿ ತೆಗೆದುಕೊಂಡಿತ್ತು ಎಂದು ಕಾಣುತ್ತೆ. ಈಗೆಷ್ಟೇ ಹೊಸದಾಗಿ ಕಷ್ಟ ಪಟ್ಟು ಬ್ಯೂಸಿನೆಸ್ ಶುರು ಮಾಡಿದ್ದ ಕುಟಂಬ, ವರ್ಷ ಮುಗಿಯೋ ಅಷ್ಟಲ್ಲೇ ಕೋಟಿ ಕೋಟಿ ಲಾಭ ಮಾಡಿತ್ತು. ಆದ್ರೆ, ಕೋಟಿ ಮಾಲೀಕರಾದ್ವಿ ಎಂದು ಕುಣಿದಾಡೋ ಮುನ್ನವೇ ಇವ್ರ ವಿರುದ್ಧ ಎಫ್​ಐಆರ್​ ಆಗಿತ್ತು.

ಒಂದೇ ಮನೆ.. 22 ಮಂದಿಗೆ ಲೀಸ್ ಕೊಟ್ಟು ದೋಖಾ..!

ಮನೆ ಲೀಸ್​ಗೆ ಇದೆ ಅಂತ ನೋ ಬ್ರೋಕರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಪ್ರತ್ಯೇಕವಾಗಿ ಒಟ್ಟು 22 ಜನರು ಗಿರೀಶ್ ಎಂಬಾತನನ್ನು ಸಂಪರ್ಕ ಮಾಡಿದ್ದಾರೆ. ಈ ವೇಳೆ ಎಲ್ಲರಿಗೂ ಮನೆ ಲೀಸ್ ಕೊಡ್ತೀವಿ ಎಂದು ಹಣ ವಸೂಲಿ ಮಾಡಿದ್ದಾರೆ. ಒಬ್ಬೊಬ್ಬರಿಂದ 8-13 ಲಕ್ಷದಂತೆ ಸುಮಾರು 2 ಕೋಟಿಗೂ ಅಧಿಕ ಹಣ ಮೋಸ ಮಾಡಿದ್ದಾರೆ. ಆದ್ರೆ, ಮನೆ ಕೊಡಿ ಎಂದರೆ ಒಂದೊಂದು ಕಥೆ ಹೇಳ್ಕೊಂಡು ಬರ್ತಿದ್ದ ಗಿರೀಶ್​, ಮನೆ ರಿನೋವೇಷನ್ ಆಗ್ತಿದೆ. ಬಾಡಿಗೆದಾರರ ಸಮಸ್ಯೆ ಎಂದು ಕಾಗೆ ಹಾರಿಸುತ್ತಲೇ ಇದ್ದ.

ಇನ್ನು, ಕಾದು ಕಾದು ಸುಸ್ತಾದ ಜನ ಹಣ ವಾಪಾಸ್ ಕೇಳಿದಾಗ ಬೇರೆಯವ್ರ ಹೆಸರಲ್ಲಿ ಚೆಕ್​ ನೀಡಿ ಗಿರೀಶ್​​ ವಂಚಿಸಿದ್ದಾನೆ. ಜತೆಗೆ ಬದುಕಿರುವ ತಂದೆಯನ್ನೇ ಸತ್ತಿದ್ದಾರೆ ಎಂದು ಕಣ್ಣೀರಿಟ್ಟು ಡ್ರಾಮಾ ಮಾಡಿದ್ದಾನೆ. ಈ ಗಿರೀಶ್ ಮಾಡ್ತಿದ್ದ ಕೆಲಸಕ್ಕೆ ಇಡೀ ಫ್ಯಾಮಿಲಿ ಸಪೋರ್ಟ್​ ಮಾಡಿದೆ. ಹಣ ನೀಡೋದಾಗಿ ಸರಿತಾ ಲೆಟರ್ ಬರೆದುಕೊಟ್ಟಿದ್ದಾಳೆ. ಸದ್ಯ ಹಣ ಕೊಟ್ಟ ಸಂತ್ರಸ್ತರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಲಕ್ಷ ಲಕ್ಷ ಕಳ್ಕೊಂಡಿರೋ ಸಂತ್ರಸ್ತರು ಇದೀಗ ಹಣಕ್ಕಾಗಿ ಠಾಣೆ ಮೆಟ್ಟಿಲೇರುವಂತಾಗಿದೆ. ಅತ್ತ, ಪೊಲೀಸರು ಪ್ರಕರಣದ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಜೊತೆಗೆ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕಾಗಿದೆ. ನೀವು ಅಷ್ಟೇ ಆನ್​ಲೈನ್​ನಲ್ಲಿ ಮನೆ ಹುಡುಕೋ ಮುನ್ನ ಅಲರ್ಟ್​.

ಇದನ್ನೂ ಓದಿ:ನ್ಯೂ ಇಯರ್​ ಸೆಲೆಬ್ರೇಷನ್​ ಮಾಡೋರಿಗೆ ಸರ್ಕಾರ ಬಿಗ್​ ಶಾಕ್​​; ಈ ರೂಲ್ಸ್​ ಫಾಲೋ ಮಾಡಲೇಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment