/newsfirstlive-kannada/media/post_attachments/wp-content/uploads/2024/12/Eclipses.jpg)
2025ರಲ್ಲಿ ಆಗಸದಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯ ಗ್ರಹಣ ಹಾಗೂ ಎರಡು ಚಂದ್ರಗ್ರಹಣಗಳು ಆಗಸದಲ್ಲಿ ನಡೆಯಲಿದ್ದು, ಈ ನಾಲ್ಕರಲ್ಲಿ ಒಂದನ್ನು ಮಾತ್ರ ನೋಡುವ ಭಾಗ್ಯ ಭಾರತೀಯರಿಗೆ ಇದೆ. ಉಳಿದ ಮೂರು ಗ್ರಹಣಗಳು ಭಾರತದಲ್ಲಿ ಗೋಚರವಾಗುವುದಿಲ್ಲ ಎಂದು ಉಜ್ಜೈನದ ಜೀವಾಜಿ ವೀಕ್ಷಣಾಲಯದ ಮೇಲ್ವಿಚಾರಕರಾದ ರಾಜೇಂದ್ರ ಪ್ರಕಾಶ ಗುಪ್ತಾ ಹೇಳಿದ್ದಾರೆ.
2025,ಮಾರ್ಚ್ 14 ರಂದು ವರ್ಷದ ಮೊಲದ ಚಂದ್ರಗ್ರಹಣ ಸಂಭವಿಸಲಿದ್ದು ದುರಾದೃಷ್ಟವಷಾತ ಈ ಒಂದು ಗ್ರಹಣ ಭಾರತದಲ್ಲಿ ಕಾಣ ಸಿಗುವುದಿಲ್ಲ, ಅಮೆರಿಕಾ, ಪಶ್ಚಿಮ ಯುರೋಪ್, ಪಶ್ಚಿಮ ಆಫ್ರಿಕಾ ಮತ್ತು ಉತ್ತರ ದಕ್ಷಿಣ ಅಂಟ್ಲಾಂಟಿಕ್ ಸಾಗರದಲ್ಲಿ ಗೋಚರಿಸಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಂಚಕನನ್ನೇ ಶ್ವಾನದ ಮೂಲಕ ವಂಚಿಸಿದ ಕಿಲಾಡಿ; ಡಿಜಿಟಲ್ ಅರೆಸ್ಟ್ ಮಾಡಲು ಬಂದವ ಮಂಗನಾಗಿದ್ದು ಹೇಗೆ?
ಇನ್ನು ಇದೇ ತಿಂಗಳು 29 ರಂದು ಖಗ್ರಾಸ್ ಸೂರ್ಯಗ್ರಹಣವಾಗಲಿದ್ದು ಇದು ಕೂಡ ಭಾರತೀಯರಿಗೆ ಆಗಸಲ್ಲಿ ನೋಡಲು ಕಾಣ ಸಿಗುವುದಿಲ್ಲ. ಈ ಒಂದು ಗ್ರಹಣ ಉತ್ತರ ಅಮೆರಿಕಾ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಉತ್ತರ ಅಂಟ್ಲಾಂಟಿಕ್ ಸಮುದ್ರ, ಯುರೋಪ್ ರಾಷ್ಟ್ರಗಳು ಹಾಗೂ ಉತ್ತರ ಮತ್ತು ಪಶ್ಚಿಮ ರಷ್ಯಾದಲ್ಲಿ ಕಾಣಸಿಗಲಿಲದೆ.
ಇದನ್ನೂ ಓದಿ: ಅಣ್ಣನನ್ನು ಮದುವೆಯಾದ್ರೆ ಎಲ್ಲಾ ತಮ್ಮಂದಿರು ಗಂಡಂದಿರು;ಇದು ವಿಚಿತ್ರ ಅಲ್ಲ ಸತ್ಯವಾದ ಘಟನೆ
ಇನ್ನು ಸೆಪ್ಟಂಬರ್ 7 ಮತ್ತು 8 ರಂದು ಸಂಪೂರ್ಣ ಚಂದ್ರಗ್ರಹಣವಾಗಲಿದ್ದು ಈ ಗ್ರಹಣ ಭಾರತದ ಆಗಸದಲ್ಲಿ ಗೋಚರವಾಗಲಿದೆ. ಸಂಪೂರ್ಣ ಚಂದ್ರಗ್ರಹಣ ಭಾರತ ಸೇರಿ, ಯುರೋಪ್, ಅಂಟಾರ್ಟಿಕಾ, ಪಶ್ಚಿಮ ಪೆಸಿಫಿಕ್ ಸಮುದ್ರ, ಆಸ್ಟ್ರೇಲಿಯಾ ಮತ್ತು ಭಾರತದ ಸಮುದ್ರ ಪ್ರದೇಶಗಳಲ್ಲಿ ಕಾಣ ಸಿಗಲಿದೆ ಎಂದು ಗುಪ್ತಾ ಹೇಳಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8-58 ರಿಂದ ರಾತ್ರಿ 2.25ರವರೆಗೆ ಗ್ರಹಣ ಕಾಲ ಎಂದು ಹೇಳಲಾಗಿದೆ. ಈ ಗ್ರಹಣದಲ್ಲಿ ಚಂದ್ರ ಸಂಪೂರ್ಣವಾಗಿ ಕೆಂಪಾಗಿ ಹೋಗಿರುತ್ತಾನೆ ಎಂದು ಹೇಳಲಾಗಿದೆ.
ಇನ್ನು ಇದೇ ತಿಂಗಳು 21-22ರಂದು ನಡೆಯಲಿರುವ ಸೂರ್ಯಗ್ರಹಣವೂ ಕೂಡ ಭಾರತದ ಆಗಸದಲ್ಲಿ ಗೋಚರಿಸುವುದಿಲ್ಲ. ಇದು ನ್ಯೂಜಿಲೆಂಡ್, ದಕ್ಷಿಣ ಪಾಲಿನೇಷಿಯಾ, ಪಶ್ಚಿಮ ಅಂಟಾರ್ಟಿಕಾದಲ್ಲಿ ಮಾತ್ರ ಗೋಚರವಾಗುತ್ತದೆ ಎಂದು ಗುಪ್ತಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ