newsfirstkannada.com

ಅಯೋಧ್ಯೆಯಲ್ಲಿ ಸಡಗರ ಸಂಭ್ರಮ.. ರಾಮ ಮಂದಿರ ಲೋಕಾರ್ಪಣೆಗೆ ಕೇವಲ 5 ದಿನ ಬಾಕಿ

Share :

Published January 18, 2024 at 6:19am

  ಪ್ರಧಾನಿ ಮೋದಿಗಾಗಿ ನಿರ್ಮಾಣವಾಗಿದೆ ತೇಲುವ ವಿಶೇಷ ಕೊಠಡಿ

  ಪರಿಸ್ಥಿತಿ ಮತ್ತಷ್ಟು ಹದಗೆಡುವ ಬಗ್ಗೆ ಹವಾಮಾನ ಇಲಾಖೆ ಸೂಚನೆ

  ಪ್ರಧಾನಿ ಜನವರಿ 22ರಂದು ಹೊರಟರೆ ವಿಳಂಬವಾಗುವ ಆತಂಕ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಸಂಭ್ರಮ ಸಡಗರ ಜೋರಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನಾ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದು, 2ನೇ ದಿನವೂ ವಿವಿಧ, ಪೂಜೆಗಳು ನಡೆದ್ವು.. ಸರಯೂ ನದಿ ತೀರದಿಂದ ನಡೆದ ಜಲಯಾತ್ರೆ ಮನಮೋಹಕವಾಗಿತ್ತು. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ರಾಮಜನ್ಮಭೂಮಿಯಲ್ಲಿ ಪ್ರಾಣ ಪ್ರತಿಷ್ಠಾಪನೆಯ 2ನೇ ದಿನದ ಪೂಜಾಕೈಂಕರ್ಯಗಳು ಅದ್ಧೂರಿಯಾಗಿ ನೇರವೇರಿದೆ. ರಾಮ ಜನ್ಮಭೂಮಿಯಲ್ಲಿ ಬಾಲ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆಯ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ಮೊನ್ನೆಯಿಂದ ವಿಧಿ ವಿಧಾನಗಳು ಆರಂಭವಾಗಿದ್ದು, 2ನೇ ದಿನವಾದ ಇವತ್ತು ಹಲವು ಪೂಜೆಗಳು ನಡೆದಿವೆ.

ಸರಯೂ ನದಿಯ ತೀರದಲ್ಲಿ ರಾಮಜನ್ಮಭೂಮಿ ಟ್ರಸ್ಟಿನ ಯಜಮಾನ್ ಅನಿಲ್ ಮಿಶ್ರಾ ದಂಪತಿ ಸರಯೂ ನದಿ ತೀರದಲ್ಲಿ ವಿಷ್ಣುಪೂಜೆ, ದ್ವಾದಶ ದಾನ, ಗೋದಾನ ನೇರವೇರಿಸಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದರು. ಸರಯೂ ತೀರದಲ್ಲಿ ಪೂಜೆ ಬಳಿಕ ಅಯೋಧ್ಯೆಯಲ್ಲಿ ಕಳಸಯಾತ್ರೆ ನೆರವೇರಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಸರಯೂ ನದಿ ನೀರನ್ನು ಗರ್ಭಗೃಹಕ್ಕೆ ತಂದ್ರು. ಮೆರವಣಿಗೆಯುದ್ಧಕ್ಕೂ ರಾಮನ ನಾಮ ಜಪಿಸಲಾಯ್ತು.

ರಾಮ ಮಂದಿರ ಆವರಣ ತಲುಪಿದ ಬಾಲ ರಾಮಲಲ್ಲಾ

ಅಯೋಧ್ಯೆಯ ರಾಮಮಂದಿರದ ಗರ್ಭಗೃಹದಲ್ಲಿ ನಿರ್ಮೋಹಿ ಅಖಾಡದ ಮಹಂತ ಧೀರೇಂದ್ರ ದಾಸ್, ಅರ್ಚಕ ಸುನೀಲ್ ದಾಸ್​ರಿಂದ ವಿಶೇಷ ಪೂಜೆ ನೆರವೇರಿಸಲಾಯ್ತು. ಭವ್ಯ ರಾಮಮಂದಿರದೊಳಗೆ ಕರ್ನಾಟಕದ ಶಿಲ್ಪಿ ಅರುಣ್​ ಯೋಗಿರಾಜ್​ ಕೆತ್ತನೆ ಮಾಡಿರುವ ರಾಮಲಲ್ಲಾನ ಮೂರ್ತಿ ವಿರಾಜಮಾನ ಆಗಲಿದೆ. ಇದಕ್ಕಾಗಿ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಾಲರಾಮಲಲ್ಲಾನ ಮೂರ್ತಿ ಅಯೋಧ್ಯೆಯನ್ನು ತಲುಪಿದೆ. ಅಯೋಧ್ಯೆಯ ವಿವೇಕಾ ಸೃಷ್ಟಿಯಲ್ಲಿದ್ದ ಮೂರ್ತಿಯನ್ನು ಟ್ರಕ್​​ನಲ್ಲಿ ತೆಗೆದುಕೊಂಡು ಬರಲಾಯ್ತು. ರಾಮ ಮಂದಿರ ದೇಗುಲದ ಆವರಣ ತಲುಪುತ್ತಿದ್ದಂತೆ, ಜೈಶ್ರೀರಾಮ್​ ಘೋಷಣೆಗಳು ಮೊಳಗಿದವು.

ರಾಮಲಲ್ಲಾಗೆ ವಿಶೇಷ ಬಟ್ಟೆ ಹಸ್ತಾಂತರಿಸಿದ ಯೋಗಿ ಆದಿತ್ಯನಾಥ್​

ಅಯೋಧ್ಯೆಯ ಬಾಲರಾಮನ ವಿಗ್ರಹಕ್ಕಾಗಿ ವಿಶೇಷವಾಗಿ ತಯಾರಿಸಿರುವ ಬಟ್ಟೆಯನ್ನು ಸಿಎಂ ಯೋಗಿ ಆದಿತ್ಯನಾಥ್​ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರ ಮಾಡಿದ್ರು. ಪುಣೆ ಮೂಲದ ಹೆರಿಟೇಜ್ ಹ್ಯಾಂಡ್‌ವೇವಿಂಗ್ ರಿವೈವಲ್ ಚಾರಿಟೇಬಲ್ ಟ್ರಸ್ಟ್​ನಿಂದ ರಾಮಲಲ್ಲಾನಿಗಾಗಿ ವಿಶೇಷ ಧರಿಸು ತಯಾರಿಸಲಾಗಿದೆ. ಸುಮಾರು 12 ಲಕ್ಷ ಕರಕುಶಲಕರರ್ಮಿಗಳು ಕೈಮಗ್ಗದಲ್ಲಿ ನೇಯ್ಗೆ ಮಾಡಿದ್ದಾರೆ. ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆ ಕಣ್ತುಂಬಿಕೊಳ್ಳಲು ಇಡೀ ದೇಶದ ಜನರೇ ಅಯೋಧ್ಯೆಯತ್ತ ಮುಖ ಮಾಡಿದ್ದಾರೆ. ಹೀಗಾಗಿ ಪ್ರಾಣಪ್ರತಿಷ್ಠೆಯ ದಿನದಿಂದ ಅಯೋಧ್ಯೆಗೆ ಅಸ್ತಾ ವಿಶೇಷ ಟ್ರೇನ್ ಓಡಿಸಲು ರೈಲ್ವೇ ಇಲಾಖೆ ನಿರ್ಧಾರ ಮಾಡಿದೆ.

ದೇಶದ 66 ವಿವಿಧ ಭಾಗಗಳಿಂದ ಅಯೋಧ್ಯೆಯತ್ತ ವಿಶೇಷ ರೈಲುಗಳು ಸಂಚರಿಸಲಿವೆ. ಈ ವಿಶೇಷ ರೈಲುಗಳಿಗೆ ಐಆರ್‌ಸಿಟಿಸಿ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲು ಇಲಾಖೆ ಅವಕಾಶ ಕಲ್ಪಿಸಲಿದೆ. ಕರ್ನಾಟಕದ ಬೆಂಗಳೂರು, ಮೈಸೂರಿನಿಂದಲೂ ಕೂಡ ಅಸ್ತಾ ವಿಶೇಷ ರೈಲುಗಳು ಸಂಚರಿಸಲಿವೆ. ಪಬ್​ಜಿ ಪ್ರೀತಿಗಾಗಿ ತಮ್ಮ 4 ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ ಅಯೋಧ್ಯೆ ಯಾತ್ರೆ ಕೈಗೊಂಡಿದ್ದಾರೆ. ಜನವರಿ 22ರಂದು ರಾಮಜನ್ಮಭೂಮಿಯಲ್ಲಿ ಗತವೈಭವ ಮತ್ತೆ ಮರುಕಳಿಸಲಿದೆ. ಈ ಅಮೃತಘಳಿಗೆ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಎದುರು ನೋಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ಸಡಗರ ಸಂಭ್ರಮ.. ರಾಮ ಮಂದಿರ ಲೋಕಾರ್ಪಣೆಗೆ ಕೇವಲ 5 ದಿನ ಬಾಕಿ

https://newsfirstlive.com/wp-content/uploads/2024/01/rama-mandira-1.jpg

Load More