/newsfirstlive-kannada/media/post_attachments/wp-content/uploads/2025/04/GARIB-EXPRESS.jpg)
ಭಾರತೀಯ ರೈಲ್ವೆ ಇಲಾಖೆ ನಿತ್ಯವೂ ಅಗಣಿತ ಜನರಿಗೆ ಪ್ರಯಾಣದ ಸೇವೆ ಒದಗಿಸುತ್ತದೆ. ಕಡಿಮೆ ಖರ್ಚಿನಲ್ಲಿ ದೂರದ ಊರುಗಳಿಗೆ ಹೋಗಬೇಕಾದವರು ರೈಲು ಪ್ರಯಾಣವನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಅನೇಕ ರೈಲುಗಳು ತನ್ನ ವೇಗದ, ಐಷಾರಾಮಿಯ ಇಲ್ಲವೇ ಎಕ್ಸ್ಪ್ರೆಸ್ ಎನ್ನುವ ಕಾರಣದಿಂದ ಹೆಚ್ಚು ಟಿಕೆಟ್ ರೇಟ್ ಹೊಂದಿರುತ್ತವೆ. ಅದರಲ್ಲೂ ರಾಜಧಾನಿ ಎಕ್ಸ್ಪ್ರೆಸ್ನಂತಹ ರೈಲುಗಳ ಎಸಿ ಕೋಚ್ನಲ್ಲಿ ನೀವು ಪ್ರಯಾಣಿಸುವುದಾದ್ರೆ ಹೆಚ್ಚಿನ ದುಡ್ಡನ್ನು ನೀಡಿ ಪ್ರಯಾಣಿಸಬೇಕಾಗುತ್ತದೆ. ಇದು ಉಳ್ಳವರು ಪ್ರಯಾಣ ಮಾಡುವ ಬೋಗಿ. ಆದರೆ ಭಾರತದಲ್ಲಿ ಒಂದು ರೈಲು ಇದೆ. ಅದರಲ್ಲಿ ಅತ್ಯಂತ ಬಡವರು ಕೂಡ ಎಸಿ ಕೋಚ್ನಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಸಬಹುದು.
ಇದನ್ನೂ ಓದಿ:ರಾಮೇಶ್ವರಂನಲ್ಲಿ ವರ್ಟಿಕಲ್ ಲಿಫ್ಟ್ ಬ್ರಿಡ್ಜ್ ಲೋಕಾರ್ಪಣೆ; ಇದರ ಇತಿಹಾಸ ಏನು? ಏನೆಲ್ಲಾ ಪ್ರಯೋಜನ?
ಈ ರೈಲನ್ನು ಬಡವರ ರಾಜಧಾನಿ ಎಕ್ಸ್ಪ್ರೆಸ್ ಎಂದೇ ಕರೆಯುತ್ತಾರೆ. ಇದು ವಂದೇ ಭಾರತ್ ಎಕ್ಸ್ಪ್ರೆಸ್ಗೂ ಕೂಡ ಟಕ್ಕರ್ ಕೊಡುತ್ತದೆ. ಚೆನ್ನೈನಿಂದ ಹಜರತ್ ನಿಜಾಮುದ್ಧಿನ್ವರೆಗೂ ಚಲಿಸುವ ಈ ರೈಲು ಬಡವರ ರಥ ಎಂದೇ ಕರೆಯಲಾಗುತ್ತದೆ. ಈ ರೈಲಿನಲ್ಲಿ ಎಸಿ ಕೋಚ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರತಿ ಕಿಲೋ ಮೀಟರ್ಗೆ ಕೇವಲ 68 ಪೈಸೆ ಖರ್ಚು ಬರುತ್ತದೆ. ಈ ರೈಲು ಕೂಡ ಉಳಿದ ಎಕ್ಸ್ಪ್ರೆಸ್ ರೈಲಿನಷ್ಟೇ ವೇಗವಾಗಿ ಓಡುತ್ತದೆ. ಪ್ರತಿ ಗಂಟೆಗೆ 96 ಕಿ.ಮೀ ವೇಗದಲ್ಲಿ ಓಡುವ ಈ ರೈಲನ್ನು ಮಧ್ಯಮ ವರ್ಗ ಮತ್ತು ಬಡವರು ಪ್ರಯಾಣಿಸುವ ಉದ್ದೇಶದಿಂದಲೇ ಓಡಿಸಲಾಗುತ್ತದೆ. ಅದಕ್ಕಾಗಿಯೇ ಈ ರೈಲಿನ ಹೆಸರನ್ನು ಗರೀಬ್ ರಥ್ ಎಕ್ಸ್ಪ್ರೆಸ್ ಎಂದು ಇಡಲಾಗಿದೆ. ಈ ರೈಲಿನ ಇನ್ನೂ ಒಂದು ವಿಶೇಷವೆಂದರೆ ಅದು ಇಡೀ ಟ್ರೈನ್ ಎಸಿ ಕೋಚ್ಗಳಿಂದ ತುಂಬಿದೆ. ಇನ್ನು ಇದೇ ಹೆಸರಿನ ಮತ್ತೊಂದು ರೈಲು ರಾಂಚಿಯಿಂದ ದೆಹಲಿಯವರೆಗೂ ಪ್ರಯಾಣಿಕರಿಗೆ ಸೇವೆ ನೀಡುತ್ತದೆ.
ಇದನ್ನೂ ಓದಿ:ಮೆಟ್ರೋದಲ್ಲಿ ಎಣ್ಣೆ ಹೊಡೀಬಹುದಾ? ಪೆಗ್ ಮೇಲೆ ಪೆಗ್ ಕುಡಿದು ಮೊಟ್ಟೆ ತಿನ್ನುತ್ತಾ ಜಾಲಿ ಪ್ರಯಾಣ! VIDEO
ಎಸಿ ಕೋಚ್ನಲ್ಲಿ ಬಡವರು ಮಧ್ಯಮ ವರ್ಗದವರು ಆರಾಮಾಗಿ ಪ್ರಯಾಣ ಮಾಡಬಹುದು. ಇದರ ಟಿಕೆಟ್ ಬೆಲೆ ಉಳಿದ ರಾಜಧಾನಿ ಎಕ್ಸ್ಪ್ರೆಸ್ಗಳಿಗೆ ಹೋಲಿಸಿದರೆ ತುಂಬಾನೇ ಕಡಿಮೆ. ಬಡವರ ಕೈಗೆ ಎಟಕುವ ದರದಲ್ಲಿ ಈ ರೈಲಿನ ಟಿಕೆಟ್ ದರವಿದೆ ಈಗಾಗಲೇ ಹೇಳಿದಂತೆ ಒಂದು ಕಿಲೋ ಮೀಟರ್ ಪ್ರಯಾಣಕ್ಕೆ ನೀವು 1 ರೂಪಾಯಿಗಿಂತಲೂ ಕಡಿಮೆ ಖರ್ಚು ಮಾಡಬೇಕಾಗುತ್ತದೆ. ಉಳಿದ ರಾಜಧಾನಿ ಎಕ್ಸ್ಪ್ರೆಸ್ ಪ್ರತಿ ಕಿಲೋ ಮೀಟರ್ಗೆ 73 ಪೈಸೆಯಿಂದ 1.38 ಪೈಸೆ ರೂಪಾಯಿ ನೀಡಬೇಕಾಗುತ್ತದೆ. ವಂದೇ ಭಾರತ್ ಇದಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತದೆ. ಹೀಗಾಗಿ ಗರೀಬ್ ರಥ್ ಎಕ್ಸ್ಪ್ರೆಸ್ನಲ್ಲಿ ಬಡವರು ಆರಾಮವಾಗಿ ಎಸಿ ಕೋಚ್ನಲ್ಲಿ ಹೆಚ್ಚು ಹಣ ಖರ್ಚು ಮಾಡದೇ ಪ್ರಯಾಣಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ