/newsfirstlive-kannada/media/post_attachments/wp-content/uploads/2025/04/NO-ATM-COUNTRY-1.jpg)
ಜಗತ್ತಿನ ಎಲ್ಲ ದೇಶಗಳಿಗೂ ಬ್ಯಾಂಕ್ ಎನ್ನುವುದು ಒಂದು ಅತ್ಯಗತ್ಯ ವಿಚಾರ. ನೀವು ಭಾರತದಿಂದ ಹಿಡಿದು ಯಾವುದೇ ದೇಶಗಳನ್ನು ತೆಗೆದುಕೊಳ್ಳಿ ಹಲವಾರು ಬ್ಯಾಂಕ್ಗಳು ದೇಶಾದ್ಯಂತ ಹಲವಾರು ಶಾಖೆಗಳನ್ನು ತೆರೆದು ವ್ಯವಹಾರ ನಡೆಸುತ್ತವೆ. ಪ್ರತಿ ಬ್ರ್ಯಾಂಚ್ ಕೂಡ ತನ್ನ ಬ್ಯಾಂಕ್ ಪಕ್ಕವೇ ಒಂದು ಎಟಿಎಂ ಕೂಡ ಹೊಂದಿರುತ್ತವೆ. ಕೇವಲ ನಗರ ಮತ್ತು ಪಟ್ಟಣಗಳಲ್ಲಿ ಮಾತ್ರವಲ್ಲ, ಇತ್ತೀಚೆಗೆ ಬ್ಯಾಂಕ್ಗಳು ತಮ್ಮ ಎಟಿಎಂಗಳ ವಿಸ್ತರಣೆಯನ್ನು ಹಳ್ಳಿಗಳಿಗೂ ಕೂಡ ವಿಸ್ತರಿಸಿವೆ.
ಇದನ್ನೂ ಓದಿ:ಅಮೆರಿಕಾಗೇ ತಿರುಗುಬಾಣ ಆಯ್ತು ಟ್ರಂಪ್ ಸುಂಕ.. ಅಗ್ರ 500 ಶ್ರೀಮಂತರ ಜೇಬಿಗೆ ಕತ್ತರಿ..!
ಇಂತಹ ಕಾಲಮಾದನದಲ್ಲಿ ಜಗತ್ತಿನಲ್ಲಿ ಒಂದು ರಾಷ್ಟ್ರವಿದೆ. ಆ ರಾಷ್ಟ್ರದಲ್ಲಿ ಇರೋದು ಕೇವಲ ಒಂದೇ ಒಂದು ಬ್ಯಾಂಕ್. ಈ ಬ್ಯಾಂಕ್ ಹಲವು ಬ್ರ್ಯಾಂಚ್ಗಳನ್ನು ಹೊಂದಿದೆ. ಆದ್ರೆ, ಇಡೀ ದೇಶ ಹುಡುಕಿದರೂ ಕೂಡ ಆ ಬ್ಯಾಂಕ್ನ ಒಂದೇ ಒಂದು ಎಟಿಎಂ ಕೇಂದ್ರ ನಿಮಗೆ ಕಾಣಲು ಸಿಗುವುದಿಲ್ಲ. ಇಲ್ಲಿ ಪ್ರತಿ ವ್ಯವಹಾರವು ನಡೆಯುವುದು ಕೇವಲ ಕ್ಯಾಶ್ನಲ್ಲಿಯೇ. ಯಾವುದು ಆ ದೇಶ ಅಂತ ನಿಮಗೆ ಆಶ್ಚರ್ಯವಾಗಬಹುದು.
ಈ ಬ್ಯಾಂಕ್ನ ಹೆಸರು ನ್ಯಾಷನಲ್ ಬ್ಯಾಂಕ್ ಆಫ್ ತುವಾಲು. ತುವಾಲು ವಿಶ್ವದ ಅತ್ಯಂತ ಪುಟ್ಟ ರಾಷ್ಟ್ರಗಳಲ್ಲಿ 4ನೇ ಸ್ಥಾನದಲ್ಲಿದೆ. ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಈ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಇರೋದು ಕೇವಲ 11 ರಿಂದ 12 ಸಾವಿರದಷ್ಟು ಜನಸಂಖ್ಯೆ. ಇಡೀ ದೇಶಕ್ಕೆ ಇರೋದು ಒಂದೇ ಒಂದು ಬ್ಯಾಂಕ್, ಅದು ನ್ಯಾಷನಲ್ ಬ್ಯಾಂಕ್ ಆವಲ್ ತುವಾಲು. ಇನ್ನೂ ಒಂದು ಆಸಕ್ತಿದಾಯಕ ಮಾಹಿತಿ ಅಂದ್ರೆ ತುವಾಲುವಿನ ಇಂಟರ್ನೆಟ್ ಡೊಮೈನ್ ಟಿವಿಗೆ ವಿಶ್ವದಲ್ಲಿಯೇ ಅತಿಹೆಚ್ಚು ಬೇಡಿಕೆ ಇದೆ. ಇದರ ಮಾರಾಟದಿಂದಲೇ ತುವಾಲು ಅತಿಹೆಚ್ಚು ಆದಾಯ ಗಳಿಸುತ್ತದೆ.
ತುವಾಲು ಒಟ್ಟು 9 ಸಣ್ಣ ಹವಳದ ದ್ವೀಪಗಳನ್ನು ಒಳಗೊಂಡಿದೆ. ಇದರ ಉತ್ತರರ ಭಾಗ ಹವಾಯಿ ದ್ವೀಪಕ್ಕೆ ಮತ್ತು ದಕ್ಷಿಣ ಭಾಗ ಆಸ್ಟ್ರೇಲಿಯಾದ ನೈರುತ್ಯ ಭಾಗಕ್ಕೆ ತಾಗುತ್ತದೆ. ಈ ತುವಾಲು ದ್ವೀಪದ ಒಟ್ಟು ವಿಸ್ತಾರ 26 ಸ್ಕ್ವೇರ್ ಕಿಲೋ ಮೀಟರ್ ಎಂದು ಹೇಳಲಾಗುತ್ತದೆ. ಇಲ್ಲಿಯ ಜನರ ಪ್ರಮುಖ ಆದಾಯ ಮೀನುಗಾರಿಗೆ, ವಿದೇಶಿಗಳೊಂದಿಗಿರುವ ವ್ಯಾಪಾರ ಒಪ್ಪಂದ ಮತ್ತು ಇಂಟರ್ನೆಟ್ ಡೊಮೈನ್ ಟಿವಿಯ ರಫ್ತಿನಿಂದ ಗಳಿಸುತ್ತದೆ.
ಇದನ್ನೂ ಓದಿ:ವಿಶ್ವದಲ್ಲಿ ಅತ್ಯಂತ ದುಬಾರಿ ಏರ್‌ಲೈನ್ಸ್.. ಏನಿದರ ವಿಶೇಷ? ಒಂದು ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಈ ದೇಶ ಈಗಾಗಲೇ ಹೇಳಿದಂತೆ ಕೇವಲ ಒಂದೇ ಒಂದು ಬ್ಯಾಂಕ್ ಹೊಂದಿದೆ. ನ್ಯಾಷನಲ್ ಬ್ಯಾಂಕ್ ಆಫ್ ತುವಾಲು 1980ರಲ್ಲಿ ಸ್ಥಾಪನೆಯಾಗಿದೆ. ಇದು ದ್ವೀಪರಾಷ್ಟ್ರದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಆಸ್ಟ್ರೇಲಿಯನ್ ಡಾಲರ್ಗಳು ಈ ರಾಷ್ಟ್ರದ ಪ್ರಮುಖ ಕರೆನ್ಸಿ. ತುವಾಲು ತನ್ನದೇ ದೇಶದ ನಾಣ್ಯಗಳನ್ನು ಕೂಡ ಬಿಡಗಡೆ ಮಾಡುತ್ತದೆ. ಆದರೆ ಏಕೈಕ ಬ್ಯಾಂಕ್ನ ಎಲ್ಲಾ ಶಾಖೆಗಳಲ್ಲೂ ಕೇವಲ ಕ್ಯಾಶ್ನಲ್ಲಿ ವ್ಯವಹಾರ ನಡೆಯುತ್ತದೆ. ಯಾವುದೇ ಎಟಿಎಂ, ಡಿಜಿಟಲ್ ವ್ಯವಹಾರಗಳ, ನಮ್ಮ ದೇಶದಲ್ಲಿರುವಂತ ಯುಪಿಐ ವ್ಯವಸ್ಥೆ ಇದ್ಯಾವುದು ಕೂಡ ಇಲ್ಲ. ಜಗತ್ತಿನಲ್ಲಿ ಎಟಿಎಂ ಕೇಂದ್ರಗಳಿಲ್ಲದೇ ಕೇವಲ ಕ್ಯಾಶ್ನಲ್ಲಿ ವ್ಯವಹರಿಸುವ ಏಕೈಕ ಬ್ಯಾಂಕ್ ಅಂದ್ರೆ ಅದು ತುವಾಲುದ ನ್ಯಾಷನಲ್ ಬ್ಯಾಂಕ್ ಆಫ್ ತುವಾಲು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ