/newsfirstlive-kannada/media/post_attachments/wp-content/uploads/2025/04/ONION-BAN.jpg)
ಭಾರತದಲ್ಲಿ ಈರುಳ್ಳಿಗೆ ಒಂದು ಬೇಡಿಕೆ ಇದೆ. ಹೆಚ್ಚು ಕಡಿಮೆ ಬಹುತೇಕ ಆಹಾರಗಳು ಈರುಳ್ಳಿ ಇಲ್ಲದೇ ತಯಾರಾಗುವುದೇ ಕಷ್ಟ. ಭಾರತದ ಬೃಹತ್ ಜನಸಂಖ್ಯೆ ಈರುಳ್ಳಿಯನ್ನು ಉಪಯೋಗ ಮಾಡುತ್ತದೆ. ಅದರಲ್ಲೂ ನಾನ್ ವೇಜ್ ಊಟಕ್ಕೆ ಊಟದಲ್ಲೂ ಈರುಳ್ಳಿ ಹಾಗೂ ಊಟ ಮಾಡುವಾಗಲೂ ಈರುಳ್ಳಿ ಲಿಂಬು ಬೇಕೇ ಬೇಕು. ಇನ್ನು ಉತ್ತರ ಕರ್ನಾಟಕದ ಕಡೆ ಖಡಕ್ ರೊಟ್ಟಿಗಳ ಜೊತೆ ಕಡಿದುಕೊಂಡು ತಿನ್ನಲು ಈರುಳ್ಳಿ ಕಡ್ಡಾಯ. ಯಾವುದೇ ಅಡುಗೆಯಿರಲಿ ಅದರಲ್ಲಿ ಈರುಳ್ಳಿ ಇರುವುದು ಕಡ್ಡಾಯ. ಆದ್ರೆ ಭಾರತದ ಈ ಒಂದು ಪ್ರದೇಶದಲ್ಲಿ ಈರುಳ್ಳಿ ಬ್ಯಾನ್ ಇದೆ. ಇಲ್ಲಿಯ ಜನರು ಈರುಳ್ಳಿಯ ಮುಖವನ್ನೇ ನೋಡಿಲ್ಲ.
ಭಾರತದ ಈ ಏಕೈಕ ಪ್ರದೇಶದಲ್ಲಿ ಈರುಳ್ಳಿಯನ್ನು ಜನರು ಸೇವಿಸುವುದಿಲ್ಲ. ಅದು ಮಾತ್ರವಲ್ಲ ಇಲ್ಲಿ ಯಾವುದೇ ಅಂಗಡಿಗಳಲ್ಲಿ ಈರುಳ್ಳಿ ಮಾರಾಟ ಬ್ಯಾನ್ ಮಾಡಲಾಗಿದೆ. ಈ ಒಂದು ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಈರುಳ್ಳಿಯನ್ನು ಸೇವಿಸುವುದಿಲ್ಲ. ಇಲ್ಲಿಗೆ ಬರುವವರಿಗೆ ಈರುಳ್ಳಿ ಹಾಕಿದ ಪದಾರ್ಥವನ್ನು ನೀಡುವುದೂ ಇಲ್ಲ. ಈ ಪ್ರದೇಶದ ಹೆಸರು ಜಮ್ಮುವಿನ ಕಟ್ರಾ ನಗರ. ಇಲ್ಲಿ ಸರ್ಕಾರ ಈರುಳ್ಳಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈರುಳ್ಳಿ ನಿಷೇಧಕ್ಕೆ ಕಾರಣವೇನು?
ಕಟ್ರಾ ಎಂಬುದು ಭಾರತದ ಒಂದು ಪವಿತ್ರ ಕ್ಷೇತ್ರದ ತೀರ್ಥಯಾತ್ರೆಯ ಆರಂಭಗೊಳ್ಳುವ ಸ್ಥಳವಾಗಿದೆ. ಮಾತಾ ವೈಷ್ಣೋದೇವಿಯ ದರ್ಶನದ ಯಾತ್ರೆಗೆ ಹೊರಡುವ ಜನರು ಇಲ್ಲಿಂದಲೇ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಹಿಂದೂಗಳ ಶ್ರದ್ಧೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮುವಿನ ಕಟ್ರಾದಲ್ಲಿ ಈರುಳ್ಳಿಯ ಬಳಕೆ, ಮಾರಾಟ ಹಾಗೂ ಖರೀದಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಟ್ರಾದ ಯಾವುದೇ ಹೋಟೆಲ್ನಲ್ಲಿ ನಿಮಗೆ ಈರುಳ್ಳಿ ಸೇರಿಸಿದ ಆಹಾರ ತಿನ್ನಲು ಸಿಗುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಈರುಳ್ಳಿ ಮಾರಾಟವಾಗುವುದಿಲ್ಲ. ಹೀಗಾಗಿ ಭಾರತದಲ್ಲಿ ಈರುಳ್ಳಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿರುವ ಏಕೈಕ ಪ್ರದೇಶ ಅಂದ್ರೆ ಅದು ಕಟ್ರಾ. ಕೇವಲ ಈರುಳ್ಳಿ ಮಾತ್ರವಲ್ಲ ಇಲ್ಲಿ ಮದ್ಯ ಮಾರಾಟ, ಮದ್ಯಸೇವನೆ ಮಾಂಸಾಹಾರ ಊಟ ತಯಾರಿಕೆ ಮತ್ತು ಊಟ ಸೇವೆನೆಯನ್ನು ಕೂಡ ಬ್ಯಾನ್ ಮಾಡಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ