ಬ್ರಿಟಿಷರಿಗೆ ಈ ಒಂದು ರಾಜ್ಯದ ಮೇಲೆ ರಾಜ್ಯಭಾರ ಮಾಡಲು ಎಂದಿಗೂ ಸಾಧ್ಯವಾಗಲಿಲ್ಲಾ! ಯಾವುದು ಆ ರಾಜ್ಯ?

author-image
Gopal Kulkarni
Updated On
ಬ್ರಿಟಿಷರಿಗೆ ಈ ಒಂದು ರಾಜ್ಯದ ಮೇಲೆ ರಾಜ್ಯಭಾರ ಮಾಡಲು ಎಂದಿಗೂ ಸಾಧ್ಯವಾಗಲಿಲ್ಲಾ! ಯಾವುದು ಆ ರಾಜ್ಯ?
Advertisment
  • ಇಡೀ ಭಾರತವನ್ನು ಆಳಿದ ಬ್ರಿಟಿಷರಿಗೆ ಆ ಒಂದು ರಾಜ್ಯ ಕೈವಶವಾಗಲಿಲ್ಲ
  • ಘಟಾಘಟಿ ರಾಜರುಗಳನ್ನೇ ಸೋಲಿಸಿದ ಆಂಗ್ಲರಿಗೆ ಆ ರಾಜ್ಯ ದಕ್ಕಲಿಲ್ಲ
  • ಭಾರತ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ಆ ರಾಜ್ಯಕ್ಕೆ 1961ರಲ್ಲಿ ಸ್ವತಂತ್ರ ದಕ್ಕಿತು

ಭಾರತೀಯರ ಪರಂಪರೆ ಹಾಗೂ ಅದರ ಸಂಸ್ಕೃತಿಯ ಶ್ರೀಮಂತಿಕೆಯೇ ಬೇರೆಯ ಎತ್ತರದ್ದು. ಇದನ್ನು ನೂರಾರು ಸಾಮ್ರಾಜ್ಯಗಳು ಆಳಿವೆ. ನೂರಾರು ದಬ್ಬಾಳಿಕೆಗಳು ನಡೆದಿವೆ. ಅದರಲ್ಲೂ ಬ್ರಿಟೀಷರು ಇಡೀ ದೇಶವನ್ನು ಒಟ್ಟು 200 ವರ್ಷಗಳ ಕಾಲ ಆಳಿದರು. ಮಾಡಬಾರದ ಶೋಷಣೆಯನ್ನೆಲ್ಲಾ ಮಾಡಿದರು. ದೋಚಬೇಕಾದನ್ನೆಲ್ಲಾ ದೋಚಿಸಿದರು. ಇಡೀ ಅಖಂಡ ಭಾರತವನ್ನಾಳಿದ ಬ್ರಿಟಿಷರಿಗೆ ಆ ಒಂದು ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಆಗಲೇ ಇಲ್ಲ.

ನಮಗೆಲ್ಲಾ ಗೊತ್ತು ಬ್ರಿಟೀಷರು ಇಡೀ ದೇಶವನ್ನೇ ಆವರಿಸಿಕೊಂಡು ವಸತಾಶಾಹಿ ಆಡಳಿತವನ್ನು 200 ವರ್ಷಗಳ ಕಾಲ ನಡೆಸಿದರು ಅಂತ ಅವರ ದುರಾಚಾರದಿಂದ ಮುಕ್ತಿಗಾಗಿ ಸಾವಿರಾರು ಜನ ಹೋರಾಡಿದರು ತ್ಯಾಗ ಬಲಿದಾನಗಳನ್ನು ಮಾಡಿದರು. ದೇಶದ ಮೂಲೆ ಮೂಲೆಯನ್ನು ತಮ್ಮ ಕೈವಶ ಮಾಡಿಕೊಳ್ಳಲು ಬ್ರಿಟಿಷರು ನೂರಾರು ತಂತ್ರಗಳನ್ನು ಹೂಡಿದರು. ಒಡೆದು ಆಳುವ ನೀತಿಯಿಂದಲೇ ತಮ್ಮ ಪ್ರಭುತ್ವ ಸಾಧಿಸಿದರು. ಆದರೆ ಆ ಒಂದು ರಾಜ್ಯದ ಮೇಲೆ ರಾಜ್ಯಭಾರ ಮಾಡಲು ಅವರಿಗೆ 200 ವರ್ಷಗಳಲ್ಲಿ ಎಂದಿಗೂ ಕೂಡ ಸಾಧ್ಯವಾಗಲೇ ಇಲ್ಲ.

ಅದು ಅತ್ಯಂತ ಸಂಪತ್ತನ್ನು ತಂದುಕೊಡುವ ರಾಜ್ಯವಲ್ಲ ಅನ್ನುವ ಹಾಗೆಯೂ ಇರಲಿಲ್ಲ. ಅದೊಂದು ಸುಂದರ ನಗರವಲ್ಲ ಬಿಡು ಎಂದು ತಾತ್ಸಾರ ಮಾಡುವಂತ ನಗರವೂ ಆಗಿರಲಿಲ್ಲ. ಇಡೀ ಜಗತ್ತನ್ನು ತನ್ನತ್ತ ಪ್ರವಾಸಕ್ಕೆ ಕೈ ಬೀಸಿ ಕರೆಯುವ ಗೋವಾ ಎಂದಿಗೂ ಕೂಡ ಬ್ರಿಟಿಷರ ಕೈವಶವಾಗಲಿಲ್ಲ. ಪೋರ್ಚುಗೀಸರು ಅದನ್ನೆಂದು ಬ್ರಟಿಷರ ಕೈವಾಗಲು ಬಿಡಲೇ ಇಲ್ಲ.

ಇದನ್ನೂ ಓದಿ:BREAKING ಕುಂಭ ಮೇಳದಲ್ಲಿ ಕರ್ನಾಟಕದ ಇಬ್ಬರು ನಿಧನ.. ಜೀವ ಚೆಲ್ಲಿದ ತಾಯಿ, ಮಗಳು

ವಾಸ್ಕೋಡಿಗಾಮಾ ಮೂಲಕ ಪೋರ್ಚುಗೀಸರು ಬ್ರಿಟಿಷರಿಗಿಂತ ಮುಂಚೆ ಅಂದ್ರೆ 1498ರಲ್ಲಿಯೇ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಮೊದಲ ಬಾರಿ ಸಮುದ್ರ ಮಾರ್ಗವನ್ನು ಕಂಡು ಹಿಡಿದವರೇ ಪೋರ್ಚುಗಲ್ ದೇಶದವರು. ಇಲ್ಲಿ ಬಂದವರು ಇಲ್ಲಿಯೇ ತಮ್ಮ ವ್ಯಾಪಾರವನ್ನು ಶುರು ಮಾಡಿಕೊಂಡು ನಿಧಾನಕ್ಕೆ ತಮ್ಮ ಆಡಳಿತವನ್ನು ಕೂಡ ನಡೆಸಲು ಆರಂಭಿಸಿದರು. ತದ ನಂತರ ಬಂದ ಭಾರತಕ್ಕೆ ಬಂದ ಬ್ರಿಟಿಷರ ಹಾಗೂ ಪೋರ್ಚಗೀಸರ ನಡುವೆ ಭಯಂಕರ ಯುದ್ಧಗಳು ನಡೆದವು. ಎಲ್ಲವನ್ನೂ ಕಳೆದುಕೊಂಡರೂ ಕೂಡ ಪೋರ್ಚಗೀಸರು ಗೋವಾವನ್ನು ಎಂದಿಗೂ ಬ್ರಿಟಿಷರ ಕೈಗೆ ಸಿಗದಂತೆ ಗಟ್ಟಿಯಾಗಿ ನಿಂತರು.

ಇದನ್ನೂ ಓದಿ:ಕಾರಿನಲ್ಲಿಯೇ ಕಿತ್ತಾಡಿಕೊಂಡರಾ ವಿರೇಂದ್ರ ಸೆಹ್ವಾಗ್ ಮತ್ತು ಆರತಿ; ವೈರಲ್ ಆದ ವಿಡಿಯೋ ಹೇಳ್ತಿರೋದೇನು?

1608ರಲ್ಲಿ ಬ್ರಿಟಿಷರು ಸೂರತ್ ಮೂಲಕ ಭಾರತವನ್ನು ಪ್ರವೇಶಿಸಿದರು. ಇಲ್ಲಿಯ ಸಂಪನ್ಮೂಲಗಳನ್ನೆಲ್ಲಾ ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರು. ನಂತರ ಅವರು ಕೂಡ ಇಲ್ಲಿ ರಾಜ್ಯಭಾರ ಮಾಡಲು ಆರಂಭಿಸಿದರು. ದೇಶದಲ್ಲೆಲ್ಲವೂ ತಮ್ಮದೇ ಆಡಳಿತ ಬರುವಂತೆ ನೋಡಿಕೊಂಡರು 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದರು
ಗೋವಾ ಬ್ರಿಟಿಷರ ಕೈವಶದಲ್ಲಿರಲಿಲ್ಲ. ಭಾರತ ಇನ್ನೂರು ವರ್ಷಗಳ ಬಳಿಕ ಸ್ವತಂತ್ರ ಪಡೆದರೆ ದೇಶದ ಈ ಏಕೈಕ ರಾಜ್ಯ ಮಾತ್ರ 600 ವರ್ಷಗಳ ಬಳಿಕ ಸ್ವತಂತ್ರಗೊಂಡಿತು. 1961ರಲ್ಲಿ ಪೋರ್ಚುಗೀಸರು ಗೋವಾವನ್ನು ತೊರೆದು ಹೋದ ಮೇಲೆ ಗೋವಾ ಪರಕೀಯರ ಆಡಳಿತದಿಂದ ಮುಕ್ತಗೊಂಡಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment