/newsfirstlive-kannada/media/post_attachments/wp-content/uploads/2025/03/NO-RAIN.jpg)
ಜಗತ್ತಿನ ಎಲ್ಲಾ ದೇಶಗಳು ವಿಭಿನ್ನವಾದ ಹವಾಮಾನ ಗುಣಗಳನ್ನು ಹೊಂದಿವೆ. ಒಂದು ಕಡೆ ವಿಪರೀತ ಚಳಿಗಟ್ಟಿ ಸೂರ್ಯ ಕಿರಣಗಳನ್ನೇ ಕಾಣದ ದೇಶಗಳಿದ್ದರೆ, ಇನ್ನೂ ಕೆಲವು ಉರಿ ಉರಿ ಬಿಸಿಲಿನಲ್ಲಿ ಕೆಂಡದಂತೆ ಸುಡುವ ದೇಶಗಳಿವೆ. ಆದ್ರೆ ದೇಶದ ಬಹುತೇಕ ಕಡೆ ಮಳೆ ಬೀಳುತ್ತದೆ. ಪ್ರವಾಹದಂತಹ ಅತಿವೃಷ್ಟಿಯಾಗುತ್ತದೆ. ಕೆಲವು ದೇಶಗಳು ಸಮಶೀತೋಷ್ಣವಲಯಗಳಾಗಿ ಗುರುತಿಸಿಕೊಂಡಿವೆ. ಎಂತಹ ಮರಳುಗಾಡಾದರೂ ಕೂಡ ವರ್ಷಕ್ಕೆ ಒಂದೆರೆಡು ಮಳೆಗಳನ್ನಾದರು ಕಂಡಿರುತ್ತವೆ. ಆದ್ರೆ ಜಗತ್ತಿನ ಈ ಒಂದು ಗ್ರಾಮ ಮಾತ್ರ ಹುಟ್ಟಿದಾರಭ್ಯದಿಂದಲೂ ಒಂದೇ ಒಂದು ಮಳೆಯನ್ನು ಕಂಡಿಲ್ಲ. ಮಳೆ ಹೇಗಿರುತ್ತೆ ಎಂದು ಈ ಗ್ರಾಮದ ಜನರಿಗೆ ಅರಿವು ಕೂಡ ಇಲ್ಲ
ಹೌದು, ಯೆಮೆನ್ ರಾಷ್ಟ್ರದ ಈ ಅಲ್ ಹುತೈಬ್ ಎಂಬ ಗ್ರಾಮದಲ್ಲಿ ಮಳೆಯೇ ಆಗುವುದಿಲ್ಲ. ಇದು ಯಮೆನ್​ನ ರಾಜಧಾನಿ ಸಾನಾದಿಂದ ಕೂಗಳತೆಯ ದೂರದಲ್ಲಿದೆ. ಸಾನಾದ ಪಶ್ಚಿಮ ದಿಕ್ಕಿನಲ್ಲಿರುವ ಈ ಗ್ರಾಮ ಅಲ್ ಹುತೈಬ್ ಇಂದಿನವರೆಗೂ ಮಳೆಯನ್ನೇ ನೋಡಿಲ್ಲ. ಆದ್ರೆ ಇಲ್ಲಿಯ ವಾತಾವರಣ ವಿಚಿತ್ರವಾಗಿದೆ.
/newsfirstlive-kannada/media/post_attachments/wp-content/uploads/2025/03/NO-RAIN-1.jpg)
ಈ ಗ್ರಾಮದಲ್ಲಿ ಬೆಳಗ್ಗೆ ಹಾಗೂ ರಾತ್ರಿ ಬೆನ್ನುಮೂಳೆಯಲ್ಲೂ ನಡುಕ ಹುಟ್ಟಿಸುವಷ್ಟು ಚಳಿ ಇರುತ್ತದೆ. ದಿನದಲ್ಲಿ ಮುಖವನ್ನೆಲ್ಲಾ ಕೆಂಪಾಗಿಸುವಂತ ರಣಭೀಕರ ಬಿಸಿಲು ಇರುತ್ತದೆ. ಇಲ್ಲಿಯ ಜನರು ರಾತ್ರಿಯಾದರೆ ಕಂಬಳಿಯಂತಹ ದಪ್ಪನೆಯ ಹೊದಿಕೆಯನ್ನು ಹೊದ್ದುಕೊಂಡು ಮಲಗಿದರೆ. ಹೇಗೆ ಸೂರ್ಯನು ನೆತ್ತಿಗೆ ಬರಲು ಶುರು ಮಾಡುತ್ತಾನೋ ಹಾಗೆ ದೇಹದಲ್ಲಿ ಬೆವರು ಎನ್ನುವುದು ನದಿಯ ನೀರಿನಂತೆ ಹರಿಯಲು ಆರಂಭವಾಗುತ್ತದೆ. ತನ್ನ ಈ ವಿಚಿತ್ರವಾದ ಹವಾಮಾನ ಗುಣದಿಂದಲೇ ಯೆಮೆನ್​ನ ಈ ಒಂದು ಹಳ್ಳಿ ವಿಶ್ವದಲ್ಲಿಯೇ ಚರ್ಚೆಗೆ ಗ್ರಾಸವಾಗಿ ನಿಂತಿದೆ.
ಯೆಮೆನ್​ನ ಈ ಗ್ರಾಮ ಟೂರಿಸ್ಟ್​ಗಳ ಲಿಸ್ಟ್​ನಲ್ಲಿ ಇದ್ದೇ ಇರುತ್ತದೆ. ಈ ಗ್ರಾಮದ ಸೌಂದರ್ಯವೂ ಕೂಡ ಅಷ್ಟೇ ಸೊಗಸಾಗಿದೆ. ಇಲ್ಲಿ ಬಂದ ಪ್ರವಾಸಿಗರು ಈ ಹಳ್ಳಿಯಲ್ಲಿರುವ ಬೆಟ್ಟಗುಡ್ಡಗಳಿಗೆ ಹೋಗಿ ವಿಡಿಯೋ ಮಾಡಿಕೊಂಡು ಬಂದು ಯುಟ್ಯೂಬ್​ಗಳಲ್ಲಿ ಹರಿಬಿಡುತ್ತಾರೆ.
ಇದನ್ನೂ ಓದಿ:ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?
ಇನ್ನು ಈ ಗ್ರಾಮದಲ್ಲಿ ಇಂದಿನವರೆಗೂ ಮಳೆ ಏಕೆ ಆಗಿಲ್ಲ ಎಂದು ನೋಡಿದರೆ ಅದಕ್ಕೆ ಅದರದೇ ಆದ ಭೌಗೋಳಿಕ ಅಂಶಗಳು ಕಾರಣ. ಇದು ಅತ್ಯಂತವಾದ ಎತ್ತರದಲ್ಲಿ ಪರ್ವತಗಳ ಮೇಲೆ ನೆಲೆಗೊಂಡಿದೆ. ಯೆಮೆನ್​ನ ರಾಜಧಾನಿ ಸಾನಾವೇ ಸಮುದ್ರದಿಂದ ಸುಮಾರು 3,200 ಮೀಟರ್ ಎತ್ತರದಲ್ಲಿದ್ದರೆ. ಈ ಗ್ರಾಮ ಅದಕ್ಕಿಂತಲೂ ಎತ್ತರದಲ್ಲಿ ನೆಲೆಸಿದೆ. ಹೀಗಾಗಿ ನೀರು ಕಟ್ಟಿಕೊಂಡ ಮೋಡಗಳು ಈ ಎತ್ತರವನ್ನು ಮುಟ್ಟಲು ಸಾಧ್ಯವಿಲ್ಲ ಹೀಗಾಗಿ ಈ ಗ್ರಾಮದಲ್ಲಿ ಇಂದಿಗೂ ಕೂಡ ಮಳೆಯಾಗಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us