/newsfirstlive-kannada/media/post_attachments/wp-content/uploads/2025/03/HOLI-7.jpg)
ಇಂದು ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ಯುವಕ, ಯುವತಿಯರು, ಮಕ್ಕಳು, ವೃದ್ಧರು ಬಣ್ಣಗಳನ್ನು ಎರೆಚಿಕೊಂಡು ಸಂಭ್ರಮಿಸ್ತಾರೆ. ಆದರೆ ರಾಜಸ್ಥಾನದಲ್ಲಿ ಟೋಂಕ್ ಎಂಬ ಜಿಲ್ಲೆ ಇದೆ. ಇಲ್ಲಿ ನಗರ ಎಂಬ ಗ್ರಾಮ ಇದೆ. ಈ ನಗರ ಗ್ರಾಮದಲ್ಲಿ ಹೋಳಿ ಸ್ವಲ್ಪ ಭಿನ್ನವಾಗಿದೆ.
ಪುರುಷರು ಕಣ್ಣಿಗೆ ಕಂಡ್ರೆ ಬೀಳುತ್ತೆ ಬಾಸುಂಡೆ..!
ಹೋಳಿ ಹಬ್ಬದ ದಿನ ಪುರುಷರೆಲ್ಲರೂ ಪೇಚು ಮುಖ ಹಾಕಿಕೊಂಡು ಊರು ಬಿಡುತ್ತಾರೆ. ಮಹಿಳೆಯರು ಬಣ್ಣಗಳನ್ನು ಎರೆಚಿಕೊಂಡು ಗ್ರಾಮದಲ್ಲಿ ದರ್ಬಾರ್ ಮಾಡ್ತಾರೆ. ಮಹಿಳೆಯರು ಮುಕ್ತವಾಗಿ ಹೋಳಿ ಆಚರಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಪುರುಷರು ಈ ದಿನ ಮನೆ ಬಿಡುತ್ತಾರೆ. ಒಂದು ವೇಳೆ ಅಪ್ಪಿತಪ್ಪಿ ಗ್ರಾಮದಲ್ಲಿ ಪುರುಷರು ಕಾಣಿಸಿಕೊಂಡರೆ ಮಹಿಳೆಯರು ಒದೆ ಕೊಟ್ಟು, ಊರಿನಿಂದ ಆಚೆ ಹಾಕ್ತಾರೆ.
ಈ ವಿಶಿಷ್ಟ ಹೋಳಿಯು ರಾಜರ ಕಾಲದಿಂದಲೂ ಇದೆ. ಸುಮಾರು 200 ವರ್ಷಗಳ ಹಿಂದೆ ಆಗಿನ ಜಾಗಿರ್ದಾರ್ ಈ ಆಚರಣೆಯನ್ನು ಜಾರಿಗೆ ತಂದ. ಅದರ ಪ್ರಕಾರ, ವರ್ಷದಲ್ಲಿ ಒಂದು ದಿನ ಮಹಿಳೆಯರಿಂದ ಗ್ರಾಮದಲ್ಲಿ ಆಡಳಿತ ನಡೆಸಬೇಕು. ಆ ದಿನವನ್ನು ಆತ ‘ಧುಲಂಡಿ’ ಎಂದು ನಿಗದಿಪಡಿಸಿದ್ದ.
ಇದನ್ನೂ ಓದಿ: Holi: ಮುಖಕ್ಕೆ ಅಂಟಿದ ಬಣ್ಣ ಸುಲಭವಾಗಿ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್!
ಅಂತೆಯೇ ಹೋಳಿ ಹಬ್ಬದ ದಿನ ಇಲ್ಲಿನ ಮಹಿಳೆಯರು ಯಾವುದೇ ಆತಂಕ ಇಲ್ಲದೇ ಹೋಳಿ ಆಡಿ ಆನಂದಿಸಬೇಕು. ಸಂಭ್ರಮದ ವೇಳೆ ಯಾವುದೇ ಪುರುಷರು ಎಂಟ್ರಿಯಾದರೆ ಬಣ್ಣ ತುಂಬಿದ ಪಾತ್ರೆಗೆ ಆತನನ್ನು ಎಸೆಸುತ್ತಾರೆ. ಮನಸೋ ಇಚ್ಛೆ ಹಲ್ಲೆ ನಡೆಸುತ್ತಾರೆ. ನಂತರ ಅಲ್ಲಿಂದ ಓಡಿಸುತ್ತಾರೆ.
ಹೀಗಾಗಿ ಅಲ್ಲಿನ ಪುರುಷರು ಬೆಳಗ್ಗೆ ಬೇಗ ಎದ್ದು ಮನೆ ಖಾಲಿ ಮಾಡುತ್ತಾರೆ. ಹಳ್ಳಿಯ ಹೊರಗೆ ದೇವಸ್ಥಾನ ಇದೆ. ಆ ದೇವಸ್ಥಾನದಲ್ಲಿ ಕೂತು, ಬೆಳಗ್ಗೆಯಿಂದ ಸಂಜೆವರೆಗೆ ಭಜನೆ ಮಾಡುತ್ತಾರೆ. ಗ್ರಾಮದ ಹಿರಿಯರು ಮತ್ತು ಯುವಕರು ಪಚೇವಾರ್ ರಸ್ತೆಯಲ್ಲಿರುವ ಚಾಮುಂಡಿ ಸನ್ನಿಧಿಯಲ್ಲಿ ಕೂತು ಕಾಲ ಕಳೆಯುತ್ತಾರೆ. ಸಂಜೆಯಾದ ಮೇಲೆ ಮನೆಗೆ ವಾಪಸ್ ಆಗುತ್ತಾರೆ.
ಇದನ್ನೂ ಓದಿ: ಡಿಕೆಶಿ ಔತಣ ಕೂಟಕ್ಕೆ ಬಿಜೆಪಿ ಶಾಸಕರೂ ಬಂದಿದ್ದರು, ಆದರೆ ನಾಲ್ವರು ಸಚಿವರು ಗೈರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ