/newsfirstlive-kannada/media/post_attachments/wp-content/uploads/2025/05/Miss-world-2025.jpg)
ವಿಶ್ವ ಸುಂದರಿ 2025 ಕಿರೀಟವನ್ನ ಮಿಸ್ ಥಾಯ್ಲೆಂಡ್ ಬ್ಯೂಟಿ ಓಪಲ್ ಸುಚಾಟಾ ಚುವಾಂಗ್ಸ್ರಿ ಅವರು ಮುಡಿಗೇರಿಸಿಕೊಂಡಿದ್ದಾರೆ.
ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 72ನೇ ವಿಶ್ವ ಸುಂದರಿ ಗ್ರ್ಯಾಂಡ್ ಫಿನಾಲೆ ಇಂದು ನಡೆದಿದೆ. 2025ರ ಬಹು ನಿರೀಕ್ಷಿತ ಮಿಸ್ ವರ್ಲ್ಡ್ ಪಟ್ಟವನ್ನು ಅಂತಿಮ ಸುತ್ತಿನಲ್ಲಿ ಮಿಸ್ ಥಾಯ್ಲೆಂಡ್ ಓಪಲ್ ಸುಚಾಟಾ ಅವರು ಅಲಂಕರಿಸಿದ್ದಾರೆ.
ಗ್ರ್ಯಾಂಡ್ ಫಿನಾಲೆಯಲ್ಲಿ ಹಾಲಿ ವಿಶ್ವ ಸುಂದರಿ ಜೆಕ್ ಗಣರಾಜ್ಯದ ಕ್ವೀನ್ ಕ್ರಿಸ್ಟಿನಾ ಪಿಸ್ಜ್ಕೋವಾ ತಮ್ಮ ಕಿರೀಟವನ್ನು ಓಪಲ್ ಸುಚಾಟಾ ಅವರ ಮುಡಿಗೇರಿಸಿದರು.
ಇದನ್ನೂ ಓದಿ: ನಾನು ಅಣ್ಣಾವ್ರ ಮಗ.. ಕಮಲ್ ಹಾಸನ್ ಹೇಳಿಕೆಯ ವಿವಾದಕ್ಕೆ ಶಿವಣ್ಣ ಸ್ಪಷ್ಟನೆ; ಏನಂದ್ರು?
ಓಪಲ್ ಸುಚಾಟಾ ಅವರು ಹೂಗಳಿಂದ ಅಲಂಕರಿಸಿದ್ದ ಬಿಳಿ ಗೌನ್‌ನಲ್ಲಿ ಕಂಗೊಳಿಸಿದರು.
ಭಾರತದ ನಂದಿನಿಗೆ ನಿರಾಸೆ!
2025ರ ಮಿಸ್ ವರ್ಲ್ಡ್ ಫೈನಲ್ ಕಾಂಪಿಟಿಷನ್ ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು. ಇದರಲ್ಲಿ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಅವರು ಒಬ್ಬರಾಗಿದ್ದರು. ಆದರೆ ಟಾಪ್ 8ರಲ್ಲಿ ನಂದಿನಿ ಗುಪ್ತಾ ಅವರು ಸ್ಥಾನ ಪಡೆಯುವಲ್ಲಿ ವಿಫಲವಾಗಿ ಭಾರತದ ವಿಶ್ವಸುಂದರಿ ಪಟ್ಟದ ಆಸೆ ನಿರಾಸೆಯಾಗುವಂತೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ