Operation Keller ಮೂಲಕ ಮೂವರು ಉಗ್ರರು ಉಡೀಸ್​.. ಏನಿದು ಆಪರೇಷನ್ ಕೆಲ್ಲರ್..?

author-image
Ganesh
Updated On
Operation Keller ಮೂಲಕ ಮೂವರು ಉಗ್ರರು ಉಡೀಸ್​.. ಏನಿದು ಆಪರೇಷನ್ ಕೆಲ್ಲರ್..?
Advertisment
  • ಸೇನೆಯಿಂದ ಇಂದು ಮತ್ತೊಂದು ಕಾರ್ಯಾಚರಣೆ
  • ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಸೇನೆ
  • ಮೂವರು ಉಗ್ರರ ಹೊಡೆದುರುಳಿಸಿದ್ದೇವೆ ಎಂದ ಸೇನೆ

ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ಸೇನೆಯು ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯು ಮುಂದುವರಿದಿದೆ. ಇಂದು ದಕ್ಷಿಣ ಕಾಶ್ಮೀರದ ಶೋಪಿಯಾನದ ಕೆಲ್ಲರ್ ಅರಣ್ಯದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ ಮೂವರು ಭಯೋತ್ಪಾದಕರನ್ನು ಹೊಡೆದು ಹಾಕಿದೆ.

ಇವತ್ತಿನ ಕಾರ್ಯಾಚರಣೆಯನ್ನು ಸೇನೆಯು ‘Operation Keller’ ಎಂದು ಕರೆದಿದೆ. ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಕೂಂಬಿಂಗ್ ನಡೆಸಿತು. ಕೆಲ್ಲರ್ ಅರಣ್ಯ ಪ್ರದೇಶದದಲ್ಲಿ ನಡೆದ ಕಾರ್ಯಾಚರಣೆಯನ್ನು ಆಪರೇಷನ್ ಕೆಲ್ಲರ್​ ಎಂದು ಕರೆಯಲಾಗಿದೆ. ಉಗ್ರರ ವಿರುದ್ಧ ನಡೆದ ದಾಳಿಯಲ್ಲಿ ಮೂವರನ್ನು ಹೊಡೆದು ಹಾಕಲಾಗಿದೆ ಎಂದು ಸೇನೆ ಹೇಳಿಕೊಂಡಿದೆ.

ಲಷ್ಕರ್​-ಇ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರರನ್ನು ಸೇನೆ ಹೊಡೆದು ಹಾಕಿದೆ. ಈ ಕಾರ್ಯಾಚರಣೆಯಲ್ಲಿ ಸೆಕ್ಯೂರಿಟಿ ಫೋರ್ಸ್​, ಆರ್ಮಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಉಗ್ರರ ಕ್ಯಾಂಪ್​ಗಳನ್ನು ಧ್ವಂಸ ಮಾಡಲಾಗಿದೆ. ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೀಜ್ ಮಾಡಲಾಗಿದೆ. ಹತರಾದವರು ಪಾಕಿಸ್ತಾನಿ ಮೂಲದ ಉಗ್ರರ ಎಂದು ವರದಿಯಾಗಿದೆ.

ಇದನ್ನೂ ಓದಿ: ಅದಂಪುರ ಏರ್ ಬೇಸ್‌ಗೆ ಪ್ರಧಾನಿ ಮೋದಿ ಭೇಟಿ ಕೊಟ್ಟಿದ್ದು ಯಾಕೆ? ಟಾಪ್‌ 10 ಕಾರಣಗಳು ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment