/newsfirstlive-kannada/media/post_attachments/wp-content/uploads/2025/02/Coins-in-stomuch-operation-2.jpg)
ಯಾರಾದ್ರೂ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದ್ರೆ ಚೆಕ್ ಮಾಡೋ ವೈದ್ಯರು ಗ್ಯಾಸ್ಟಿಕ್ ಅಥವಾ ಫುಡ್ ಪಾಯ್ಸನ್ ಆಗಿರಬಹುದು ಅಂತ ಮೊದಲಿಗೆ ಊಹೆ ಮಾಡ್ತಾರೆ. ಆಮೇಲೆ ಟೆಸ್ಟ್ ಮಾಡಿ ಏನಾಗಿರಬಹುದು ಅಂತ ಚಿಕಿತ್ಸೆ ಕೊಡ್ತಾರೆ. ಆದ್ರೆ ಹಿಮಾಚಲ ಪ್ರದೇಶದಲ್ಲೊಬ್ಬ ವ್ಯಕ್ತಿ ಹೊಟ್ಟೆತುಂಬ ನಾಣ್ಯಗಳನ್ನೇ ನುಂಗಿ ಆಸ್ಪತ್ರೆಗೆ ಬಂದು ವೈದ್ಯರೇ ದಂಗಾಗುವಂತೆ ಮಾಡಿದ್ದಾನೆ. ಇದು ನಿಜಕ್ಕೂ ವೈದ್ಯಲೋಕವೇ ಬೆಚ್ಚಿ ಬೀಳುವ ವ್ಯಕ್ತಿಯ ಕಥೆ.
ಹಿಮಾಚಲ ಪ್ರದೇಶ ಬಿಲಾಸ್ಪುರ್ ಜಿಲ್ಲೆಯ ಘುಮರ್ವಿನ್ ನಗರದ ರೇನ್‌ಬೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಕಳೆದ ಜನವರಿ 31ರಂದು ಒಬ್ಬ ಯುವಕ ತನಗೆ ತುಂಬಾ ಹೊಟ್ಟೆನೋವು ಅಂತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುಟುಂಬಸ್ಥರು ಈ ವ್ಯಕ್ತಿಯನ್ನ ದಾಖಲಿಸಿ ಬದುಕಿಸುವಂತೆ ವೈದ್ಯರ ಬೇಡಿಕೊಳ್ಳುತ್ತಾರೆ.
/newsfirstlive-kannada/media/post_attachments/wp-content/uploads/2025/02/Coins-in-stomuch-operation-1.jpg)
ಡಾ. ಅಂಕುಶ್ ಅವರ ತಂಡ ಈ ಯುವಕನಿಗೆ ಎಂಡೋಸ್ಕೋಪಿ ಸೇರಿದಂತೆ ಸರಣಿ ಟೆಸ್ಟ್‌ಗಳನ್ನು ಮಾಡಿದಾಗ ಬೆಚ್ಚಿ ಬೀಳುವ ಸಂಗತಿ ಗೊತ್ತಾಗುತ್ತೆ. ಈತನ ಹೊಟ್ಟೆಯಲ್ಲಿ 247 ಗ್ರಾಂ ತೂಕದ ಬರೋಬ್ಬರಿ 33 ನಾಣ್ಯಗಳಿರೋದು ಪತ್ತೆಯಾಗುತ್ತದೆ.
/newsfirstlive-kannada/media/post_attachments/wp-content/uploads/2025/02/Coins-in-stomuch-operation.jpg)
ಈ ವ್ಯಕ್ತಿ ₹2, ₹10, ₹20 ಮುಖ ಬೆಲೆಯ 33 ನಾಣ್ಯಗಳನ್ನು ನುಂಗಿ ಬದುಕಿದ್ದಾನೆ. ಗಾಬರಿಯಾದ ವೈದ್ಯರು ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ 247 ಗ್ರಾಂ ನಾಣ್ಯಗಳನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. 33 ನಾಣ್ಯಗಳನ್ನು ಹೊಟ್ಟೆಯಿಂದ ತೆಗೆದು ಡಾಕ್ಟರ್ಸ್ ನಿಟ್ಟುಸಿರು ಬಿಟ್ರೆ ರೋಗಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
/newsfirstlive-kannada/media/post_attachments/wp-content/uploads/2025/02/Doctor.jpg)
ಇದು ಅಪರೂಪದ ಶಸ್ತ್ರ ಚಿಕಿತ್ಸೆ ಯಾಗಿದ್ದು, ಡಾ. ಅಂಕುಶ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ಸ್ಕಿಜೋಫ್ರೇನಿಯಾ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದ. ಇದೊಂದು ಮನೋವ್ಯಾಧಿ ಎನ್ನಲಾಗಿದೆ. ಆಪರೇಷನ್ ಮಾಡುವಾಗ ವೈದ್ಯರಿಗೆ ಹಲವು ಸವಾಲೇ ಎದುರಾಗಿತ್ತು. ರೋಗಿಯ ಹೊಟ್ಟೆ ಬಲೂನ್ ರೀತಿಯಲ್ಲಿ ದೊಡ್ಡದಾಗಿತ್ತು. ಹೊಟ್ಟೆಯಲ್ಲಿದ್ದ 33 ನಾಣ್ಯಗಳನ್ನು ಹೊರ ತೆಗೆಯಲು ಬರೋಬ್ಬರಿ 3 ಗಂಟೆಗಳ ಕಾಲ ವೈದ್ಯರು ಆಪರೇಷನ್ ಮಾಡಿದ್ದಾರೆ.
ಇದನ್ನೂ ಓದಿ: ಪುರುಷರೇ ಎಚ್ಚರ.. ಗಂಡ ಕಲರ್ ಕಲರ್ ಬಿಂದಿ ಕೊಡಿಸಲಿಲ್ಲ ಅಂತ ಮುದ್ದಾದ ಹೆಂಡತಿ ಮಾಡಿದ್ದೇನು?
3 ಗಂಟೆಯಲ್ಲಿ 300 ರೂಪಾಯಿ ಮೌಲ್ಯದ 33 ನಾಣ್ಯಗಳನ್ನು ವೈದ್ಯರು ರೋಗಿಯ ಹೊಟ್ಟೆಯಿಂದ ತೆಗೆದು ನಿಟ್ಟುಸಿರು ಬಿಟ್ಟಿದ್ದಾರೆ. ರೋಗಿಯ ಕುಟುಂಬಸ್ಥರು ವೈದ್ಯರ ಈ ಕಾರ್ಯಕ್ಕೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us