ಆಪರೇಷನ್ ಸಿಂಧೂರ ಸಕ್ಸಸ್ ಹಿಂದೆ ಇಸ್ರೋ ಪ್ರಮುಖ‌ ಪಾತ್ರ; ವಿಜ್ಞಾನಿಗಳು ನೆರವಾಗಿದ್ದು ಹೇಗೆ?

author-image
admin
Updated On
ಆಪರೇಷನ್ ಸಿಂಧೂರ ಸಕ್ಸಸ್ ಹಿಂದೆ ಇಸ್ರೋ ಪ್ರಮುಖ‌ ಪಾತ್ರ; ವಿಜ್ಞಾನಿಗಳು ನೆರವಾಗಿದ್ದು ಹೇಗೆ?
Advertisment
  • ಭಾರತೀಯ ಸೇನೆಗೆ ಉಗ್ರರ ನೆಲೆಯನ್ನ ತೋರಿಸಿದ್ದೇ ಇಸ್ರೋ!
  • ಪಾಕ್‌ ಸೇನಾ ನೆಲೆ, ಉಗ್ರರ ಅಡಗು ತಾಣದ ಫೋಟೋ ಸೆರೆ
  • ನಿಖರ ಫೋಟೋ ಮೂಲಕ ಸೇನೆಗೆ ಮಾಹಿತಿ ನೀಡಿದ್ದೇ ಇಸ್ರೋ

ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಹಿಂದೆ ನಮ್ಮ ಹೆಮ್ಮೆಯ ಇಸ್ರೋ ಕೂಡ ಪ್ರಮುಖ‌ ಪಾತ್ರವಹಿಸಿದೆ. ಬದ್ಧವೈರಿಯನ್ನು ಸದೆಬಡಿಯಲು ಇಂಡಿಯನ್ ಆರ್ಮಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯೇ ನೆರವಾಗಿದೆ.

ಆಪರೇಷನ್ ಸಿಂಧೂರ ಕೈಗೊಂಡ ಭಾರತೀಯ ಸೇನೆಗೆ ಪಾಕಿಸ್ತಾನದ ಉಗ್ರರ ನೆಲೆ ತೋರಿಸಿದ್ದೇ ಇಸ್ರೋ ವಿಜ್ಞಾನಿಗಳು. ಪಾಕ್ ಸೇನೆಯ ಪ್ರಮುಖ ಘಟಕ, ಉಗ್ರರ ಲಾಂಚ್‌ ಪ್ಯಾಡ್‌ಗಳ ನಿಖರ ಚಿತ್ರದ ಮೂಲಕ ಇಸ್ರೋ ಮಾಹಿತಿ ನೀಡಿದೆ.

publive-image

ಪಾಕಿಸ್ತಾನದ ಸೇನೆ ಹಾಗೂ ಉಗ್ರರ ನೆಲೆಗಳು, ಉಗ್ರರ ಲಾಂಚ್‌ ಪ್ಯಾಡ್‌ಗಳನ್ನು ಇಸ್ರೋ ಅತ್ಯಂತ ಸ್ಪಷ್ಟವಾದ ಫೋಟೋಗಳನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ; ಭಾರತದ ದಾಳಿಗೆ ಜೀವ ಬಿಟ್ಟ 100ಕ್ಕೂ ಹೆಚ್ಚು ಉಗ್ರರು, 35- 40 ಪಾಕ್ ಯೋಧರು 

ಇಸ್ರೋ ಸೇನೆಗೆ ನೀಡಿರುವ ಫೋಟೋಗಳ ಆಧಾರದ ಮೇಲೆ ಭಾರತೀಯ ಸೇನೆ ಯಾವ ಸ್ಥಳಗಳ ಮೇಲೆ ದಾಳಿ ಮಾಡಬೇಕೆಂದು ನಿರ್ಧಾರ ಮಾಡಿದೆ.

ಪಾಕ್‌ ಸೇನಾ ನೆಲೆ ಮತ್ತು ಭಯೋತ್ಪಾದಕ ಅಡಗುತಾಣದ ಬಗ್ಗೆ 0.6 ಮೀ ನಿಂದ 0.35 ಮೀ. ರವರೆಗಿನ ಸ್ಪಷ್ಟತೆಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ತನ್ನ ಉಪಗ್ರಹಗಳ ಮೂಲಕ ಇಸ್ರೋ ಸೆರೆ ಹಿಡಿದು ಸೇನೆಗೆ ನೀಡಿದೆ.


">May 11, 2025

ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರ ಡಿಪೋಗಳು, ರಾಡಾರ್ ಕೇಂದ್ರ, ಪಾಕಿಸ್ತಾನಿ ಪಡೆಗಳ ಯುದ್ಧತಂತ್ರದ ಚಲನವಲನಗಳ ಮೇಲೆ ಕಣ್ಗಾವಲು ಇಡಲಾಗಿದೆ. ಈ ಪ್ರಮುಖ ಮಾಹಿತಿಯನ್ನು ಒದಗಿಸಿ ಮಿಲಿಟರಿ ಕಾರ್ಯಾಚರಣೆಗಳಿಗೆ ಸಹಾಯ ಮಾಡುವಲ್ಲಿ ಇಸ್ರೋ ಪ್ರಮುಖ ಪಾತ್ರವಹಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment