/newsfirstlive-kannada/media/post_attachments/wp-content/uploads/2023/10/CHAMUNDI-2.jpg)
ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರುವ ಆಪರೇಷನ್ ಸಿಂಧೂರ ಭಾರತೀಯರ ಮೈ ಜುಮ್ಮೆನ್ನುವಂತೆ ಮಾಡಿದೆ. ಕೇವಲ 23 ನಿಮಿಷಗಳಲ್ಲೇ ಪಾಕಿಸ್ತಾನದ ರಕ್ತಪಿಪಾಸುಗಳ ‘ಉಗ್ರ’ ನೆಲೆ ನಾಮಾವಶೇಷವಾಗಿವೆ.
ಪಾಕಿಸ್ತಾನದ 9 ನೆಲೆಗಳನ್ನ ಟಾರ್ಗೆಟ್ ಮಾಡಿ 90ಕ್ಕೂ ಹೆಚ್ಚು ಉಗ್ರರನ್ನ ಭಾರತೀಯ ಸೇನೆ ಉಡಾಯಿಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿರುವ ಭಾರತೀಯ ಸೇನೆಗೆ ಇಡೀ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/05/Ramlinga-reddy.jpg)
ಆಪರೇಷನ್ ಸಿಂಧೂರ ಕಾರ್ಯಚರಣೆ ಹಿನ್ನೆಲೆಯಲ್ಲಿ ರಾಜ್ಯದ ಮುಜರಾಯಿ ಇಲಾಖಾ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶ ನೀಡಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಆಪರೇಷನ್ ಸಿಂಧೂರದ ಭಾಗವಾಗಿ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲು ಸೂಚನೆ ನೀಡಿದ್ದಾರೆ. ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಕಳೆದ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ ಉತ್ತರ ನೀಡಿದೆ. ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಇನ್ನಷ್ಟು ಸ್ಥೈರ್ಯ ತುಂಬಲು ದೇವರ ಬಳಿ ಪೂಜೆ ಸಲ್ಲಿಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/05/Operation-sindhoor-Celebration.jpg)
ರಾಜ್ಯಾದ್ಯಂತ ಸಂಭ್ರಮಾಚರಣೆ!
ಆಪರೇಷನ್ ಸಿಂಧೂರದ ಯಶಸ್ವಿ ಕಾರ್ಯಾಚರಣೆಗೆ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಬೆಂಗಳೂರಲ್ಲಿ ಸಾರ್ವಜನಿಕರು ಮತ್ತು ವೀರ ಕನ್ನಡಿಗರ ಘರ್ಜನೆ ಸೇನೆ, ತೆಂಗಿನ ಕಾಯಿ ಒಡೆದು ಭಾರತೀಯ ಸೇನೆಗೆ ಇನ್ನಷ್ಟು ಶಕ್ತಿ ಬರಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.
ಭಾರತೀಯ ಯೋಧರ ಫೋಟೋಗೆ ಕರ್ಪೂರದ ಆರತಿ ಮಾಡಿ ಬಗೆ, ಬಗೆಯ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us