/newsfirstlive-kannada/media/post_attachments/wp-content/uploads/2025/05/OPARATION-SINDOOR-1.jpg)
ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರೋ ಕಾರ್ಯಾಚರಣೆ ಮೈ ಜುಮ್ಮೆನ್ನುವಂತೆ ಮಾಡಿದೆ. ಭಾರತೀಯ ಸೇನೆಯ ಈ ಯಶಸ್ವಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಅನ್ನೋ ಹೆಸರಿಟ್ಟಿರೋದೇ ವಿಶೇಷವಾಗಿದೆ.
ಆಪರೇಷನ್ ಸಿಂಧೂರ ಪಹಲ್ಗಾಮ್‌ನಲ್ಲಿ ಸಿಂಧೂರ ಅಳಿಸಿದ ಉಗ್ರರ ಸಂಹಾರದ ಪ್ರತೀಕವಾಗಿದೆ. ಕಣ್ಣ ಮುಂದೆಯೇ ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ನ್ಯಾಯ ನೀಡುವ ಭಾರತದ ಹೋರಾಟವಾಗಿದೆ. ಭಯೋತ್ಪಾದಕರ ಬುಡಕ್ಕೆ ಬೆಂಕಿ ಇಟ್ಟಿರುವ ಅಪರೇಷನ್ ಸಿಂಧೂರ ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯೋದರಲ್ಲೂ ಅನುಮಾನವೇ ಇಲ್ಲ.
ಇದನ್ನೂ ಓದಿ: ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ; #justiceserved #Itoldmodi ವೈರಲ್!
ಆಪರೇಷನ್ ಸಿಂಧೂರದ ಬಗ್ಗೆ ಎಲ್ಲೆಲ್ಲೂ ಚರ್ಚೆಯಾಗುತ್ತಿರುವಾಗಲೇ ಆಪರೇಷನ್ ಸಿಂಧೂರ ಸಿನಿಮಾ ಆಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ಈ ಬಗ್ಗೆ ಮಾತನಾಡಿ ಇದು ಒಂದೊಳ್ಳೆ ರೋಚಕ ಕಥೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಸೈನೈಡ್, ಅಟ್ಟಹಾಸ ಅನ್ನೋ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ಮಾತನಾಡಿ ಇಂದು ನಿಜಕ್ಕೂ ರೋಮಾಂಚನವಾಗುತ್ತಿದೆ. ಭಯೋತ್ಪಾದಕರು ಸತ್ತಿದ್ರೆ, ನಿಜಕ್ಕೂ ಖುಷಿಯ ವಿಚಾರ. ಇಂತಹದೊಂದು ಪ್ರತೀಕಾರದ ದಾಳಿಯನ್ನ ನಾವು ಎದುರು ನೋಡುತ್ತಾ ಇದ್ವಿ. ಉಗ್ರರಿಗೆ ಭಾರತೀಯ ಸೇನೆ ತಕ್ಕದಾದ ಉತ್ತರ ಕೊಟ್ಟಿದೆ ಎಂದಿದ್ದಾರೆ.
ಆಪರೇಷನ್ ಸಿಂಧೂರ ಹೆಸರಲ್ಲೇ ಒಂದು ಎಮೋಷನ್ ಇದೆ. ಸಿನಿಮಾ ಮಾಡೋಕೆ ನಿಜಕ್ಕೂ ಒಂದೊಳ್ಳೆ ಘಟನೆ ಇದು. ಈ ಸ್ಕ್ರೈಕ್ ಹಿಂದಿನ ಕಥೆ ಹಿಡಿದ್ರೆ ಒಂದೊಳ್ಳೆ ರೋಚಕ ಕಥೆ ಆಗುತ್ತೆ. ಯಾರಾದ್ರೂ ಈ ಸಿನಿಮಾ ಮಾಡೋರಿಗೆ ಒಳ್ಳೆಯದಾಗಲಿ. ಈಗಾಗಲೇ ಬಹುಶಃ ಯಾರಾದರೂ ಟೈಟಲ್ ರಿಜಿಸ್ಟರ್ ಮಾಡಿಸಿದ್ರೂ ಮಾಡಿಸಿರುತ್ತಾರೆ ಎಂದು ಎ.ಎಂ.ಆರ್ ರಮೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ