/newsfirstlive-kannada/media/post_attachments/wp-content/uploads/2025/05/India-Pakistan-War.jpg)
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಶುರುವಾದ ಭಾರತ-ಪಾಕ್ ಸಂಘರ್ಷ ಮತ್ತೊಂದು ರೋಚಕ ಹಂತವನ್ನ ತಲುಪಿದೆ. ಭಾರತೀಯ ಸೇನೆ ಪಾಕಿಸ್ತಾನದ 9 ಉಗ್ರರ ಕ್ಯಾಂಪ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ, ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಮಿಸೈಲ್ ದಾಳಿ ಮಾಡುವ ಯತ್ನ ಮಾಡಿದೆ. ಇದು ಆಪರೇಷನ್ ಸಿಂಧೂರ ಚಾಪ್ಟರ್-2 ಆರಂಭವಾಗುವಂತೆ ಮಾಡಿದೆ.
ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ನಡೆಸಿದ್ದು, ಅದನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣವಾಗಿ ವಿಫಲಗೊಳಿಸಿದೆ. ಭಾರತದ ರಕ್ಷಣಾ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತವನ್ನ ರಕ್ಷಿಸಿದೆ.
ಪಾಕ್ ದಾಳಿಗೆ ಯತ್ನಿಸಿದ ಭಾರತದ 15 ನಗರಗಳು
01. ಅವಂತಿಪುರ
02. ಶ್ರೀನಗರ
03. ಜಮ್ಮು
04. ಪಠಾಣ್ಕೋಟ್
05. ಅಮೃತಸರ
06. ಕಪುರ್ತಲಾ
07. ಜಲಂಧರ್
08. ಲುಧಿಯಾನ
09. ಆದಂಪುರ
10. ಭಟಿಂಡಾ
11. ಚಂಡೀಗಢ
12. ನಲ್
13. ಫಲೋಡಿ
14. ಉತ್ತರಲೈ
15. ಭುಜ್
ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ನಲ್ಲಿರೋ ಏರ್ ಡಿಫೆನ್ಸ್ ಸಿಸ್ಟಮ್ ಅನ್ನೇ ನಾಶ ಮಾಡಿದೆ. HQ-9 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಪಾಕಿಸ್ತಾನಕ್ಕೆ ಚೀನಾ ಕೊಟ್ಟಿದ್ದು, ಭಾರತದ ದಾಳಿಯಿಂದ ಅದು ಪುಡಿ, ಪುಡಿಯಾಗಿದೆ.
ಇದನ್ನೂ ಓದಿ: ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕ್ ಮಿಸೈಲ್ ದಾಳಿ; ರಕ್ಷಿಸಿದ್ದು S-400 ಏರ್ ಡಿಫೆನ್ಸ್ ಸಿಸ್ಟಮ್!
ಭಾರತ ದಾಳಿ ನಡೆಸಿದ ಸ್ಥಳಗಳು
01. ಲಾಹೋರ್
02. ರಾವಲ್ಪಿಂಡಿ
03. ಗುಜ್ರಾನ್ವಾಲಾ
04. ಚಕ್ವಾಲ್
05. ಅಟ್ಟೋಕ್
06. ಬಹಾವಲ್ಪುರ್
07. ಮೈನ್ವಾಲ್
08. ಛೋರ್
09. ಕರಾಚಿ
ಭಾರತದ ಪ್ರತಿದಾಳಿಯಿಂದಾಗಿ ಪಾಕಿಸ್ತಾನದ ಏರ್ ಡಿಫೆನ್ಸ್ ರಾಡಾರ್ಗಳು ಸರ್ವನಾಶ ಆಗಿದ್ರೆ, ಸಿಯಾಕೋಟ್ನಲ್ಲಿನ ಸೇನಾ ನೆಲೆಯೂ ಉಡೀಸ್ ಆಗಿದೆ. ಲಾಹೋರ್, ರಾವಲ್ಪಿಂಡಿ, ಕರಾಚಿಯಲ್ಲಿ ಡ್ರೋನ್ ದಾಳಿಯಾಗಿದ್ದು, ಭಾರತದ ಸಿಂಧೂರ ಚಾಪ್ಟರ್ 2 ಸಮರಕ್ಕೆ ಪಾಕಿಸ್ತಾನ ದಿಕ್ಕೆಟ್ಟು ಹೋಗಿದೆ.
ಇಂದು ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆಯೇ ಭಾರತದಿಂದ ಏರ್‌ಸ್ಚ್ಪೈಕ್ ಆಗಿದೆ. ಇಂದು ಸಂಜೆ 5.30 ಕ್ಕೆ ಭಾರತದ ವಿದೇಶಾಂಗ ಇಲಾಖೆ ಸುದ್ದಿಗೋಷ್ಟಿ ನಡೆಸುತ್ತಿದ್ದು, ಪಾಕ್ ಮೇಲೆ ನಡೆಸಿದ ಡ್ರೋಣ್ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ