/newsfirstlive-kannada/media/post_attachments/wp-content/uploads/2025/05/Operation-Sindoor.jpg)
ಭಾರತ, ಪಾಕ್ ಸಂಘರ್ಷದ ಮಧ್ಯೆ ನಿನ್ನೆ ಕದನ ವಿರಾಮ ಹೊಸ ತಿರುವು ನೀಡಿತ್ತು. ಆದರೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ ಬಳಿಕ ಭಾರತೀಯ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಈ ಬಗ್ಗೆ ಭಾರತೀಯ ವಾಯು ಸೇನೆ (IAF) ಅಧಿಕೃತ ಮಾಹಿತಿ ನೀಡಿದೆ.
ಇದನ್ನೂ ಓದಿ: ಕದನ ವಿರಾಮದ ಕಳ್ಳಾಟ.. ಪಾಕ್ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ
ವಾಯುಸೇನೆ ಹೇಳಿದ್ದೇನು? (Since the Operations)
ಭಾರತೀಯ ವಾಯುಪಡೆ ಆಪರೇಷನ್ ಸಿಂಧೂರ್‌ನಲ್ಲಿ ತನಗೆ ನಿಯೋಜಿಸಲಾದ ಕಾರ್ಯಗಳನ್ನು ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಭಾರತೀಯ ವಾಯುಸೇನೆ ನಡೆಸಿದ ಕಾರ್ಯಾಚರಣೆಗಳ ಉದ್ದೇಶಗಳು ವಿವೇಚನಾಪೂರ್ವಕವಾದ ರೀತಿಯಲ್ಲಿ ಇವೆ. ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ವಾಯುಸೇನೆ ಕಾರ್ಯಾಚರಣೆ ನಡೆಸಿದೆ. IAF ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿದೆ. ಹೀಗಾಗಿ ಮಾಹಿತಿಗಳನ್ನ ಪರಿಶೀಲಿಸದೇ ಊಹಾಪೋಹ ಸುದ್ದಿಗಳನ್ನ ಪ್ರಸಾರ ಮಾಡದಂತೆ IAF ಎಲ್ಲರನ್ನೂ ಒತ್ತಾಯಿಸುತ್ತದೆ.
- ಭಾರತೀಯ ವಾಯು ಸೇನೆ (IAF)
ಭಾರತೀಯ ವಾಯು ಸೇನೆ (IAF) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ನಿಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಂದುವರಿದಿದೆ ಅನ್ನೋ ಮೂಲಕ ಪಾಕಿಸ್ತಾನ ಪ್ರಚೋದಿಸಿದರೆ ಪ್ರತ್ಯುತ್ತರ ಫಿಕ್ಸ್ ಅನ್ನೋ ಕಠಿಣ ಸಂದೇಶ IAFನಿಂದ ರವಾನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ