ಉಗ್ರ ಮಸೂದ್ ಅಜರ್ ಈಗ ಏಕಾಂಗಿ.. ಕುಟುಂಬದ 14 ಸದಸ್ಯರು ಸರ್ವನಾಶ..!

author-image
Veena Gangani
Updated On
ಆಪರೇಷನ್ ಸಿಂಧೂರ 2.O? ಪೀಸ್, ಪೀಸ್‌ ಆದ ಉಗ್ರರ 9 ಅಡಗುತಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
Advertisment
  • ಉಗ್ರಗಾಮಿ ಮಸೂದ್ ಅಜರ್ ಕುಟುಂಬದ 14 ಮಂದಿ ಸಾವು
  • ಪಾರ್ಲಿಮೆಂಟ್‌ ದಾಳಿಯ ಪ್ರಮುಖ ಆರೋಪಿ ಮಸೂದ್ ಅಜರ್
  • ಭವಾಲ್ ಪುರದ ಉಗ್ರ ಶಿಬಿರದ ಮೇಲಿನ ದಾಳಿಯಿಂದ ಮೃತ್ಯು

ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಆಪರೇಷನ್​ ಸಿಂಧೂರ್​ ಮೂಲಕ ಭಾರತ ನಡೆಸಿದ ದಾಳಿಯಲ್ಲಿ ಜೈಶ್ ಭಯೋತ್ಪಾದಕ ಹಫೀಜ್ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?

publive-image

ಈ ಬಗ್ಗೆ ಖುದ್ದು ಜೈಶ್​ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತನ್ನ ಕುಟುಂಬದ 14 ಮಂದಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಭಾರತ ನಡೆಸಿದ ಏರ್ ಸ್ಟ್ರೈಕ್​ನಲ್ಲಿ ಬಹಾವಲ್ಪುರ್ ಗುರಿಯಾಗಿಸಿಕೊಂಡ ಭಾರತ ನಡೆಸಿದ ದಾಳಿಯಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಬಾವ ಸೇರಿದಂತೆ 14 ಜನರು ಹತ್ಯೆಯಾಗಿದ್ದಾರೆ. ತನ್ನ ಕುಟುಂಬದ 14 ಮಂದಿ ಮೃತಪಟ್ಟಿದ್ದಾರೆ ಎಂದು ಮಸೂದ್ ಅಜರ್ ತಿಳಿಸಿದ್ದಾರೆ.

publive-image

ಪಾಕಿಸ್ತಾನ ಮಾಧ್ಯಮಗಳ ಪ್ರಕಾರ, ಮಸೂದ್ ಅಜರ್ ಮನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.
ಇಂದು ಸಂಜೆ ನಾಲ್ಕು ಗಂಟೆಗೆ ಭವಾಲಪುರದಲ್ಲಿ ಎಲ್ಲ 14 ಮಂದಿಯ ಅಂತ್ಯಸಂಸ್ಕಾರ ಮಾಡಲಾಗಿದೆಯಂತೆ. ಮಸೂದ್ ಅಜರ್ 2001ರ ಭಾರತದ ಪಾರ್ಲಿಮೆಂಟ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಕಂದಹಾರ್ ವಿಮಾನ ಹೈಜಾಕ್ ವೇಳೆ ಮಸೂದ್ ಅಜರ್ ಬಿಡುಗಡೆಯಾಗಿದ್ದ. ಬಳಿಕ ಪಾಕ್‌ಗೆ ಹೋಗಿ ಜೈಷ್ ಇ ಮೊಹಮ್ಮದ್ ಸಂಘಟನೆ ಕಟ್ಟಿದ್ದ. ಇದೇ ಸಂಘಟನೆಯ ಉಗ್ರರು 2001ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ರು. ಭಾರತದ ಮೋಸ್ಚ್ ವಾಂಟೆಂಡ್ ಉಗ್ರಗಾಮಿಗಳಲ್ಲಿ ಮಸೂದ್ ಅಜರ್ ಪ್ರಮುಖನಾಗಿದ್ದ. ಈಗ ಮಸೂದ್ ಅಜರ್ ಕುಟುಂಬವನ್ನು ಭಾರತದ ಪಡೆಗಳು ಹೊಡೆದುರುಳಿಸಿವೆ.

publive-image

ಏಪ್ರಿಲ್ 22ರಂದು ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತದ ಹಿಂದೂ ನಾಗರಿಕರೂ ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಎರಡರಲ್ಲೂ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment