ಟಾರ್ಗೆಟ್​ 9! ಆಪರೇಷನ್ ಸಿಂಧೂರ ರೋಚಕ ವಿಡಿಯೋ ರಿಲೀಸ್ ಮಾಡಿದ ಸೇನೆ VIDEO

author-image
Ganesh
Updated On
ಆಪರೇಷನ್ ಸಿಂಧೂರ 2.O? ಪೀಸ್, ಪೀಸ್‌ ಆದ ಉಗ್ರರ 9 ಅಡಗುತಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
Advertisment
  • ಭಾರತೀಯ ಸೇನೆಯಿಂದ ಪಾಕ್ ಉಗ್ರರ ಮೇಲೆ ಅಟ್ಯಾಕ್
  • 9 ಅಡಗುತಾಣಗಳ ಮೇಲೆ ದಾಳಿ ಮಾಡಿದ ಭಾರತ
  • ದಾಳಿಗೆ ಸಂಬಂಧಿಸಿ ಎಲ್ಲಾ ಮಾಹಿತಿ ನೀಡಿದ ಸೇನೆ

‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಚರಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳ ನೇತೃತ್ವದಲ್ಲಿ ಸುದ್ದಿಗೊಷ್ಟಿ ನಡೆಸಲಾಗಿದೆ. ವಿಂಗ್​ ಕಮಾಂಡರ್ ವ್ಯೋಮಿಕಾ ಸಿಂಗ್​ (Wing Commander Vyomika Singh) ಹಾಗೂ ಕರ್ನಲ್ ಸೋಫಿಯಾ ಖುರೇಷಿ ಸುದ್ದಿಗೋಷ್ಟಿಯ ನೇತೃತ್ವ ವಹಿಸಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಂ ಮೆಸ್ತ್ರಿ ಕೂಡ ಭಾಗಿಯಾಗಿದ್ದರು.

ಒಟ್ಟು 9 ಸ್ಥಳ ಟಾರ್ಗೆಟ್​..!

ಸುದ್ದಿಗೋಷ್ಟಿಯಲ್ಲಿ ನೀಡಿದ ಮಾಹಿತಿಯಂತೆ ಆಪರೇಷನ್ ಸಿಂಧೂರ್​​​ನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಒಟ್ಟು 9 ಸ್ಥಳಗಳ ಮೇಲೆ ದಾಳಿಯಾಗಿದೆ.

ದಾಳಿಯಾದ ಸ್ಥಳಗಳು ಹೀಗಿವೆ..

  1. ಮರ್ಕಝ್ ಸುಭಾನ್ ಅಲ್ಲಾ, ಬಹವಲ್ಪುರ್ - ಜೆಎಂ (Markaz Subhan Allah, Bahawalpur - JeM)
  2.  ಮರ್ಕಜ್ ತೈಬಾ, ಮುರಿಡ್ಕೆ - ಎಲ್‌ಇಟಿ (Markaz Taiba, Muridke - LeT)
  3.  ಸರ್ಜಲ್, ತೆಹ್ರಾ ಕಲಾನ್ - ಜೆಇಎಂ (Sarjal, Tehra Kalan - JeM)
  4.  ಮೆಹ್​ಮೂನಾ ಜೊಯಾ ಸೈಲ್​ಕೋಟ್​ ಹೆಚ್​ಎಂ (Mehmoona Joya Sailkot -HM)
  5.  ಮರ್ಕಜ್ ಅಬ್ಬಾಸ್ ಜೆಇಎಂ (Markaz Abbas, Kotli - JeM)
  6.  ಮಾರ್ಕಜ್ ಅಹ್ಲೆ ಹದೀಸ್, ಬರ್ನಾಲಾ - ಎಲ್‌ಇಟಿ (Markaz Ahle Hadith, Barnala - LeT)
  7.  ಮಸ್ಕರ್ ರಹೀಲ್ ಶಾಹಿದ್, ಕೊಟ್ಲಿ - ಎಚ್.ಎಂ (Maskar Raheel Shahid, Kotli - HM)
  8.  ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ - LeT (Shawai Nalla Camp, Muzaffarabad - LeT)
  9.  ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ - ಜೆಎಂ (Syedna Bilal Camp, Muzaffarabad - JeM)

ವಿಡಿಯೋ ರಿಲೀಸ್..!

ಇನ್ನು, ಭಾರತ ಟಾರ್ಗೆಟ್ ಮಾಡಿ ನಡೆಸಿದ ದಾಳಿಯ ವಿಡಿಯೋವನ್ನು ಸೇನೆ ಬಿಡುಗಡೆ ಮಾಡಿದೆ. 9 ಭಯೋತ್ಪಾದಕರ ನೆಲೆಯಲ್ಲಿ ನಡೆದ ದಾಳಿಗೆ ಸಂಬಂಧಿಸಿ ವಿಡಿಯೋಗಳು ಅವಾಗಿವೆ. ಅಲ್ಲದೇ ಪಾಕ್ ಮಿಲಿಟರಿ ಕ್ಯಾಂಪ್​​ ಮೇಲೆ ದಾಳಿ ಆಗಿಲ್ಲ. ಸಾಮಾನ್ಯ ನಾಗರಿಕರಿಗೂ ಯಾವುದೇ ಹಾನಿ ಮಾಡಿಲ್ಲ ಎಂದು ಸೇನೆ ಸ್ಪಷ್ಟವಾಗಿ ತಿಳಿಸಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​ಗೆ ಚೀನಾ ಪ್ರತಿಕ್ರಿಯೆ.. ಸ್ನೇಹಿತನ ಮೇಲೆ ನಡೆದ ದಾಳಿ ಬಗ್ಗೆ ಏನಂತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment