/newsfirstlive-kannada/media/post_attachments/wp-content/uploads/2025/03/CHEEP-RATE-GOLD.jpg)
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಹಳದಿ ಲೋಹದ ಮೇಲಿನ ಹೂಡಿಕೆ ಸರ್ವಕಾಲಕ್ಕೂ ಸೇಫ್. ಇದೇ ಕಾರಣಕ್ಕೋ ಏನೋ ಚಿನ್ನದ ದರ ಏಕಾಏಕಿ ಏರಿಕೆ ಕಂಡಿದೆ. ಇದೀಗ ಚಿನ್ನದ ಬೆಲೆ ಮತ್ತೊಮ್ಮೆ 1 ಲಕ್ಷ ರೂಪಾಯಿಗಳ ಗಡಿಯನ್ನ ದಾಟಿ ಮುನ್ನುಗುತ್ತಿದೆ.
ಇದನ್ನೂ ಓದಿ: ಪುಕ್ಕಲು ಪಾಕಿಸ್ತಾನಕ್ಕೆ ನಡುಕ.. ಅಣ್ವಸ್ತ್ರ ಹಾಕ್ತೀನಿ ಅಂತಾ ಹೆದರಿಸಿ ಈಗ ಬಣ್ಣ ಬದಲಿಸಿದ ರಕ್ಷಣಾ ಸಚಿವ
ಆಪರೇಷನ್ ಸಿಂಧೂರಕ್ಕೆ ಆಪರೇಷನ್ ಬಂಗಾರ!
ಪಹಲ್ಗಾಮ್ ಪೈಶಾಚಿಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೈಗೊಂಡಿದೆ. ಎರಡೂ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿದೆ, ಪ್ರಕ್ಷುಬ್ಧತೆ ಮನೆ ಮಾಡಿದೆ. ಹಾಗಾಗಿಯೇ ಹೂಡಿಕೆದಾರರು ಚಿನ್ನದ ಮೇಲೆ ಬಂಡವಾಳ ಹಾಕುತ್ತಿದ್ದಾರೆ. ಇದರ ಫಲವಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏಕಾಏಕಿ ಗಗನಕ್ಕೇರಿ ಕುಳಿತಿದೆ. ಇದೀಗ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ₹1 ಲಕ್ಷದ ಗಡಿಯನ್ನು ದಾಟಿದೆ.
ಒಂದೇ ದಿನಕ್ಕೆ ₹1000 ಹೆಚ್ಚಳ ಕಂಡ ಬಂಗಾರದ ಬೆಲೆ
ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ ₹99,750 ಗಳಿಂದ ಒಂದೇ ದಿನಕ್ಕೆ ₹1000 ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ ಪ್ರತೀ 10 ಗ್ರಾಮ್ಗೆ ₹1,00,350 ಆಗಿದೆ.
ಭಾರತ-ಪಾಕ್ ಯುದ್ಧದ ಕಾರ್ಮೋಡದ ಭಯದ ಮಧ್ಯೆ ಹೂಡಿಕೆದಾರರು ಹಳದಿ ಲೋಹದತ್ತ ಚಿತ್ತ ನೆಟ್ಟಿದ್ದಾರೆ. ಬಹುಮುಖ್ಯವಾಗಿ ಒಂದೇ ದಿನದಲ್ಲಿ ₹1000 ಹೆಚ್ಚಳ ಆಗೋದಕ್ಕೆ ಕಾರಣ ಆಪರೇಷನ್ ಸಿಂಧೂರ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ