/newsfirstlive-kannada/media/post_attachments/wp-content/uploads/2025/05/PAK-PM.jpg)
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ, ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಆಪರೇಷನ್ ಸಿಂಧೂರ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು.
ಭಯೋತ್ಪಾದಕರನ್ನು ಹೊಡೆದ ಬೆನ್ನಲ್ಲೇ ಉಗ್ರ ಪೋಷಕ ಪಾಕಿಸ್ತಾನ ಭಾರತ ಮೇಲೆ ದಾಳಿ ಮಾಡಿತು. ಗಡಿ ಭಾಗದಲ್ಲಿ ದಾಳಿ ಭಾರತದ ನಾಗರಿಕರ ಮೇಲೆ ಅಟ್ಯಾಕ್ ಮಾಡಿತು. ಆ ಮೂಲಕ ಪಾಕಿಸ್ತಾನ ಭಾರತವನ್ನು ಕೆರಳಿಸಿ, ಯುದ್ಧಕ್ಕೆ ರಣವಿಳ್ಯವನ್ನು ನೀಡಿತು. ಭಾರತ ತನ್ನ ರಕ್ಷಣೆಗಾಗಿ ಪಾಕಿಸ್ತಾನದ ಯಾವೆಲ್ಲ ಪ್ರದೇಶಗಳಿಂದ ದಾಳಿ ಆಗುತ್ತಿತ್ತೋ ಅಲ್ಲಿಗೆ ನುಗ್ಗಿ ಹೊಡೆಯಿತು.
ಇದನ್ನೂ ಓದಿ: IPL ಮ್ಯಾಚ್ ರದ್ದು.. ವಂದೇ ಭಾರತ್ ರೈಲಿನಲ್ಲಿ ಪಂಜಾಬ್, ಡೆಲ್ಲಿ ಆಟಗಾರರ ಸ್ಥಳಾಂತರ
ಎಲ್ಲೆಲ್ಲಿ ದಾಳಿ..?
ಇಸ್ಲಾಮಾಬಾದ್, ಲಾಹೋರ್, ಕರಾಚಿ, ಸಿಯಾಲ್‌ಕೋಟ್ ಮತ್ತು ಬಹಾವಲ್ಪುರದಂತಹ ನಗರಗಳನ್ನು ಗುರಿಯಾಗಿಸಿಕೊಂಡು ಭಾರತ ಪ್ರತ್ಯುತ್ತರ ನೀಡಿತು. ಇದಕ್ಕೆ ಪ್ರತಿಯಾಗಿ ನಿನ್ನೆ ರಾತ್ರಿ ಪಾಕಿಸ್ತಾನ ಭಾರತದ ಹಲವಾರು ನಗರಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಪಾಕ್ ದಾಳಿಯನ್ನು ವಿಫಲಗೊಳಿಸಿತು.
BLA ನಿಂದಲೂ ಪಾಕ್ಗೆ ಪೆಟ್ಟು
ಮತ್ತೊಂದೆಡೆ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಮೇಲೆ ದಾಳಿ ಆಗಿದೆ. ಬಲೂಚಿಸ್ತಾನದ ಹೆಚ್ಚಿನ ಭಾಗಗಳನ್ನು ವಶಪಡಿಸಿಕೊಂಡಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ. ಪಾಕಿಸ್ತಾನ ಸೂಪರ್ ಲೀಗ್ ಅನ್ನು ಸಹ ಸ್ಥಳಾಂತರಿಸಲಾಗಿದೆ. ಉಳಿದ ಪಂದ್ಯಗಳನ್ನು ದುಬೈನಲ್ಲಿ ಆಡಲಾಗುವುದು ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ: S-400 ಡಿಫೆನ್ಸ್ ಸಿಸ್ಟಮ್ ಬಗ್ಗೆ ಗೊತ್ತಾ..? 600 ಕಿಲೋ ಮೀಟರ್ವರೆಗೆ ಟಾರ್ಗೆಟ್ ಮಾಡೋ ಬಲಿಷ್ಠ ಸುದರ್ಶನ್ ಚಕ್ರ
ಕ್ವೆಟ್ಟಾದಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಸರಣಿ ದಾಳಿಗಳು ನಡೆದಿವೆ. ಪಾಕಿಸ್ತಾನ ಸೇನೆಯ ಫ್ರಂಟಿಯರ್ ಕಾರ್ಪ್ಸ್ ಪ್ರಧಾನ ಕಚೇರಿಯನ್ನು BLA ದಾಳಿ ಮಾಡಿದೆ. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದೆ.
ಜೈಶಂಕರ್ ವಾರ್ನಿಂಗ್..!
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಮೆರಿಕ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟದ ತಮ್ಮ ಸಹವರ್ತಿಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಯಾವುದೇ ಪ್ರಚೋದನಕಾರಿ ಪ್ರಯತ್ನಗಳನ್ನು ಬಲವಾಗಿ ಎದುರಿಸುವ ಭಾರತದ ದೃಢಸಂಕಲ್ಪ ಮಾಡಿರೋದನ್ನು ಒತ್ತಿ ಹೇಳಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತುಕತೆಯಲ್ಲಿ, ವಿದೇಶಾಂಗ ಸಚಿವ ಜೈಶಂಕರ್, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೆಲಸ ಮಾಡುವ ವಾಷಿಂಗ್ಟನ್‌ನ ಬದ್ಧತೆಯನ್ನು ಶ್ಲಾಘಿಸಿದರು.
ಇಟಲಿಯ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವ ಆಂಟೋನಿಯೊ ತಜಾನಿ ಜೊತೆಗೂ ಜೈಶಂಕರ್ ಮಾತನಾಡಿದರು. ಭಯೋತ್ಪಾದನೆಯನ್ನು ದೃಢವಾಗಿ ಎದುರಿಸಲು ಭಾರತದ ಗುರಿ ಮತ್ತು ನಿಯಂತ್ರಿತ ಪ್ರತಿಕ್ರಿಯೆ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ‘ಸಿಂಧೂರಿ’ ಜನನ.. ದೇಶಪ್ರೇಮಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಓದಲೇಬೇಕಾದ ಸ್ಟೋರಿ!
ಯುರೋಪಿಯನ್ ಒಕ್ಕೂಟದ ಉಪಾಧ್ಯಕ್ಷ ಎಸ್ಟೋನಿಯನ್ ರಾಜಕಾರಣಿ ಕಾಜಾ ಕಲ್ಲಾಸ್ ಜೊತೆಗೂ ಜೈಶಂಕರ್ ಮಾತನಾಡಿದರು. ಈ ವೇಳೆ ಭಾರತ ತನ್ನ ಕ್ರಮಗಳಲ್ಲಿ ಸಂಯಮವನ್ನು ಕಾಯ್ದುಕೊಂಡಿದೆ. ಯಾವುದೇ ಪ್ರಚೋದನಕಾರಿ ಕ್ರಮಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಮೆರಿಕ ಹೇಳಿದ್ದೇನು?
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೂ ನಮಗೂ ಸಂಬಂಧವಿಲ್ಲ ಅಂತಾ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ.
ಇದನ್ನೂ ಓದಿ: ಜೀವ ಉಳಿಸಿಕೊಳ್ಳಲು ಓಡಿ ಹೋದ ಪಾಕ್ ಸೇನೆ.. ಬಲೂಚಿಸ್ತಾನದ 3ನೇ ಒಂದು ಭಾಗ BLA ವಶಕ್ಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ