Advertisment

ಕಮ್ಮಿ ಬೆಲೆಗೆ Oppo ಹೊಸ ಸ್ಮಾರ್ಟ್​​ಫೋನ್.. ಫೀಚರ್ಸ್ ಮಾತ್ರ ಅದ್ಭುತ..!

author-image
Ganesh
Updated On
ಕಮ್ಮಿ ಬೆಲೆಗೆ Oppo ಹೊಸ ಸ್ಮಾರ್ಟ್​​ಫೋನ್.. ಫೀಚರ್ಸ್ ಮಾತ್ರ ಅದ್ಭುತ..!
Advertisment
  • ಮಧ್ಯಮ ವರ್ಗದವರಿಗಾಗಿ ಹೊಸ Oppo ಫೋನ್
  • Oppo A5 Pro 5G ಫೋನ್​​ನಲ್ಲಿ ಏನುಂಟು, ಏನಿಲ್ಲ?
  • Oppoದ ಹೊಸ ಫೋನ್​ನ ಬೆಲೆ ಎಷ್ಟು ರೂಪಾಯಿ?

ಚೀನಾದ ಒಪ್ಪೋ (Oppo)ದ ಮೊಬೈಲ್​​ಗಳಿಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್ ಇದೆ. ಮಧ್ಯಮ ವರ್ಗದ ಮೊಬೈಲ್ ಪ್ರಿಯರಿಗಾಗಿ A5 ಪ್ರೊ ಫೋನ್ ಬಿಡುಗಡೆ ಮಾಡಿದೆ. ಇದು ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ Oppo 3ಪ್ರೊ 5G ಫೋನ್‌ನ ಮುಂದುವರಿದ ಭಾಗವಾಗಿದೆ.

Advertisment

Oppo A5 Pro 5G ಸ್ಮಾರ್ಟ್‌ಫೋನ್ 2 ಮಾದರಿಗಳಲ್ಲಿ ಲಭ್ಯವಿದೆ. ಒಂದು 8GB RAM, 128GB ಸ್ಟೋರೆಜ್, ಇನ್ನೊಂದು 8GB RAM, 256 ಸ್ಟೋರೇಜ್ ಹೊಂದಿರುವ ಸ್ಮಾರ್ಟ್​ಫೋನ್. ಮೋಚಾ ಬ್ರೌನ್ (Mocha brown) ಮತ್ತು ಫೀದರ್ ನೀಲಿ (Feather blue) ಕಲರ್​​ನಲ್ಲಿ ಫೋನ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಭಾರತಕ್ಕೆ ಮೊದಲ ಎಂಟ್ರಿ.. ಟೆಸ್ಲಾ ಟ್ರಕ್ ಖರೀದಿಸಿದ ಖ್ಯಾತ ಉದ್ಯಮಿ; ಏನಿದರ ವಿಶೇಷ?

ಫೀಚರ್ಸ್..

  • AI ಎರೇಸರ್ 2.0
  •  ಲೈವ್ ಫೋಟೋ
  •  AI ಪೋರ್ಟ್ರೇಟ್ ರಿಟಚಿಂಗ್
  •  AI ರಿಫ್ಲೆಕ್ಷನ್ ರಿಮೂವರ್
  •  AI ಸ್ಟುಡಿಯೋ
  • AI-ಆಧಾರಿತ ಫೀಚರ್ಸ್
  • 6.67-ಇಂಚಿನ IPS ಪ್ಯಾನೆಲ್
  •  HD ಪ್ಲಸ್ ರೆಸಲ್ಯೂಶನ್
  •  120Hz ರಿಫ್ರೆಶ್ ರೇಟ್
  •  ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC
  •  VC ಕೂಲಿಂಗ್ ಟೆಕ್ನಿಕ್
  •  ಆಂಡ್ರಾಯ್ಡ್ 15 ಆಧಾರಿತ ಕಲರ್ OS 15
  •  5800 mAh ಬ್ಯಾಟರಿ ಸ್ಟ್ರೆಂಥ್
  •  45W SuperVOOC ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್
  •  50MP ಫ್ರಂಟ್ ಕ್ಯಾಮರಾ
  •  ಸೆಲ್ಫಿ ಮತ್ತು ವೀಡಿಯೊಗಳಿಗಾಗಿ 8MP ಕ್ಯಾಮೆರಾ
Advertisment

ಬೆಲೆ ಎಷ್ಟು..?

8GB RAM ಮತ್ತು 128GB ಸ್ಟೋರೇಜ್ ಹೊಂದಿರುವ Oppo A5 Pro 5G ಫೋನಿನ ಮೂಲ ಬೆಲೆ 17,999 ರೂಪಾಯಿ ಆಗಿದೆ. 8 GB RAM ಮತ್ತು 256 GB ಸ್ಟೋರೇಜ್ ಹೊಂದಿರುವ ಹೈ-ಎಂಡ್ ಬೆಲೆ 19,999 ರೂಪಾಯಿ ಆಗಿದೆ. ಒಪ್ಪೋ ಇಂಡಿಯಾ ಇ-ಸ್ಟೋರ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ದೇಶದ ಪ್ರಮುಖ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ. SBI, IDFC ಫಸ್ಟ್ ಬ್ಯಾಂಕ್, BOB ಫೈನಾನ್ಷಿಯಲ್, ಫೆಡರಲ್ ಬ್ಯಾಂಕ್ ಮತ್ತು DBS ಕ್ರೆಡಿಟ್ ಕಾರ್ಡ್‌ಗಳು ಇದ್ದರೆ ವಿಶೇಷ ರಿಯಾಯಿತಿ ಇದೆ.

ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಜಾಮರ್ ಅಸ್ತ್ರ; ಇದರಿಂದ ಪುಕ್ಕಲು ಪಾಕ್ ಸೇನೆಗೆ ಹೇಗೆ ಕಷ್ಟ ಆಗ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment