/newsfirstlive-kannada/media/post_attachments/wp-content/uploads/2024/10/Oppo.jpg)
ಚೀನಾ ಮೂಲದ ಒಪ್ಪೋ ಇದೀಗ ಭಾರತೀಯರಿಗಾಗಿ ಫೆಸ್ಟೀವ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್ ಮೂಲಕ ವಿವಿಧ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ.
ಒಪ್ಪೋ ಈಗಾಗಲೇ ರೆನೋ 12 ಸರಣಿ ಮತ್ತು ಒಪ್ಪೋ ಎಫ್27 ಪ್ರೊ+ 5ಜಿ ಸ್ಮಾರ್ಟ್ಫೋನ್ಗಳ ಮೇಲೆ ಆಫರ್ ಘೋಷಿಸಿದೆ. ಜೊತೆಗೆ ನೋ-ಕಾಸ್ಟ್ ಇಎಮ್ಐ ಮೂಲಕ ಕೊಡುಗೆ ನೀಡುತ್ತಿದೆ. ನವೆಂಬರ್ 7ರವರೆಗೆ ಈ ಸೇಲನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: iPhone 17: ಬಿಡುಗಡೆಗೂ ಮುನ್ನವೇ ಐಫೋನ್ 17 ಮಾಹಿತಿ ಸೋರಿಕೆ! ಈ ಬಣ್ಣದಲ್ಲಿ ಬರೋದು ಪಕ್ಕನಾ?
ಗ್ರಾಹಕರಿಗಾಗಿ ಒಪ್ಪೋ ನಗದು ಬಹುಮಾನವನ್ನು ಘೋಷಿಸಿದೆ. ಮಾತ್ರವಲ್ಲದೆ ಒಪ್ಪೋ ಫೈಂಡ್ ಎನ್3 ಫ್ಲಿಪ್ ಮತ್ತು ಇತರೆ ಉತ್ಪನ್ನಗಳ ಮೇಲೆ ಗೆಲ್ಲುವ ಅವಕಾಶ ತೆರೆದಿಟ್ಟಿದೆ.
ಒಪ್ಪೋ ಫೆಸ್ಟೀವ್ ಕೊಡುಗೆಗಳು
ಒಪ್ಪೋ ತನ್ನ ಗ್ರಾಹಕರಿಗಾಗಿ ‘ಪೇ 0, ವರಿ 0, ವಿನ್ 10 ಲಕ್ಷ ರೂಪಾಯಿ’ ಆಫರನ್ನು ತೆರೆದಿಟ್ಟಿದೆ. ಇದರ ಮೂಲಕ ಯಾವುದೇ ವೆಚ್ಚದ ಇಎಮ್ಐಗಳು, ಶೂನ್ಯ ಡೌನ್ ಪೇಮೆಂಟ್, ಕ್ಯಾಶ್ಬ್ಯಾಕ್ ಆಫರ್ ತೆರೆದಿಟ್ಟಿದೆ. ಆದರೆ ಒಪ್ಪೊ ರೆನೋ 12 ಪ್ರೊ 5ಜಿ ಮತ್ತು ಒಪ್ಪೊ ಎಫ್27 ಪ್ರೊ+5ಜಿಯಂತಹ ಜನಪ್ರಿಯ ಮಾದರಿ ಮೇಲೆ 12 ತಿಂಗಳವರೆಗೆ ಯಾವುದೇ ಇಎಮ್ಐ ಇರುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ನಂಬಿದ್ರೆ ನಂಬಿ! ಬರೀ 2499 ರೂಪಾಯಿಗೆ ಫ್ಲಿಪ್ ಫೋನ್! ಒಂದು ಬಾರಿ ಚಾರ್ಜ್ ಮಾಡಿದ್ರೆ 7 ದಿನ ಬರುತ್ತೆ!
ನವೆಂಬರ್ 7ರ ಮೊದಲು ಗ್ರಾಹಕರು ಬಹುಮಾನ ಗೆಲ್ಲುವ ಅವಕಾಶ ತೆರೆದಿಟ್ಟಿದೆ. ಒಂದು ಲಕ್ಷದವರೆಗೆ ಆಫರ್ ಇದೆ. ಇದಲ್ಲದೆ ಒಪ್ಪೋ ಕೇರ್+ ಚಂದಾದಾರಿಕೆ, ರಿವಾರ್ಡ್ ಪಾಯಿಂಟ್ ಜೊತೆಗೆ ನಗದು ಬಹುಮಾನ ಘೋಷಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ