ಧರ್ಮಸ್ಥಳ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ -ಆರ್​.ಅಶೋಕ್

author-image
Ganesh
Updated On
ಧರ್ಮಸ್ಥಳ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ -ಆರ್​.ಅಶೋಕ್
Advertisment
  • ‘ಬುರುಡೆ ಕೊಡ್ತಾನೋ, ಬುರುಡೆ ಬಿಡ್ತಾನೋ ಕಾದು ನೋಡೋಣ’
  • ಧರ್ಮಸ್ಥಳದ ಸುದ್ದಿ ಅಲ್ಲಜ್ಮೀರಾ ಕೇರಳದಲ್ಲಿ ಚರ್ಚೆ ಆಗ್ತಿದೆ-ಅಶೋಕ್
  • ಸಿಎಂ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಆಗ್ರಹಿಸಿದ ಅಶೋಕ್

ಧರ್ಮಸ್ಥಳ ಕೇಸ್​​ಗೆ ಸಂಬಂಧಿಸಿ ವಿಪಕ್ಷ ನಾಯಕ ಆರ್​​.ಅಶೋಕ್ ಮೈಸೂರಲ್ಲಿ ಪ್ರತಿಕ್ರಿಯಿಸಿ.. ‘ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ. ಇಲ್ಲಿ ಯಾರಿಗೂ ಕಾಣದ ಕೈ ಕೆಲ್ಸ ಮಾಡ್ತಿದೆ. ಪ್ರಕರಣ ಜಟಿಲ ಆಗ್ತಿಲ್ಲ, ಜಟಿಲ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಆರೋಪ ಮಾಡುತ್ತಿರೋದು ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ. ಈ‌ ಕೇಸ್ ಬ್ಯಾಗ್ರೌಂಡ್ ಹಿಂದೆ ಇರೋದು ಕೇರಳ ಸರ್ಕಾರ. ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ? ಪ್ರಕರಣವನ್ನು ಎಸ್​ಐಟಿಗೆ ವರ್ಗಾವಣೆ ಮಾಡಿದ್ದಾರೆ, ಸ್ವಾಗತ ಮಾಡ್ತೀನಿ. ಧರ್ಮಸ್ಥಳದವರು ಕೂಡ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ ಬಿಗ್​​ ಅಪ್​ಡೇಟ್ಸ್​.. ಬುರುಡೆ ರಹಸ್ಯಕ್ಕಾಗಿ ದೂರುದಾರನ ಜೊತೆ ಕಾಡಿಗೆ ಎಂಟ್ರಿ..! ​

publive-image

ಈ ಪ್ರಗತಿಪರರ ಗ್ಯಾಂಗ್ ನಾಳೆ ಎಸ್ಐಟಿಯನ್ನು ಒಪ್ಪಲ್ಲ. ಅದು ಕೂಡ ಸರಿಯಾಗಿ ತನಿಖೆ ಮಾಡಿಲ್ಲ ಅಂತಾರೆ. ಅವರ ಪರ ರಿಪೋರ್ಟ್ ಕೊಟ್ರೆ ಸರಿ ಎಂದು ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಸಿಎಂ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ. ಬುರುಡೆ ಬಿಡ್ತಾನೋ ಕಾದು ನೋಡೋಣ. ಈ ಧರ್ಮಸ್ಥಳದ ಸುದ್ದಿ ಅಲ್ಲಜ್ಮೀರಾ ಕೇರಳದಲ್ಲಿ ಚರ್ಚೆ ಆಗ್ತಿದೆ. ಇದರ ಹಿಂದಿನ ಷಡ್ಯಂತ್ರ ತನಿಖೆಯಲ್ಲಿ ಹೊರ ಬರಲಿದೆ. ಬಳಿಕ ನಾನು ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಕೆಟ್ಟದಾಗಿ ಕಮೆಂಟ್ ಮಾಡಿದವ್ರಿಗೆ ಪುಕಪುಕ.. ರಮ್ಯಾ ಒಬ್ಬರಿಂದಲೇ ಅಲ್ಲ, ಬಿತ್ತು ಮತ್ತೊಂದು ಕೇಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment