Advertisment

ರಾಹುಲ್ ಗಾಂಧಿಗೆ ಶಾಕಿಂಗ್ ನ್ಯೂಸ್.. ವಿಪಕ್ಷ ನಾಯಕನ ಮೇಲೆ ಇ.ಡಿ ರೇಡ್ ಆಗುತ್ತಾ? ಏನಿದು ಹೊಸ ಟ್ವಿಸ್ಟ್‌?

author-image
Gopal Kulkarni
Updated On
ರಾಹುಲ್ ಗಾಂಧಿಗೆ ಶಾಕಿಂಗ್ ನ್ಯೂಸ್.. ವಿಪಕ್ಷ ನಾಯಕನ ಮೇಲೆ ಇ.ಡಿ ರೇಡ್ ಆಗುತ್ತಾ? ಏನಿದು ಹೊಸ ಟ್ವಿಸ್ಟ್‌?
Advertisment
  • ಮತ್ತೆ ಮುನ್ನೆಲೆಗೆ ಬಂದ ನ್ಯಾಷನಲ್ ಹೆರಾಲ್ಡ್ ಅಕ್ರಮ ಪ್ರಕರಣ
  • ರಾಹುಲ್ ಗಾಂಧಿಗೆ ಸದ್ಯದಲ್ಲಿಯೇ ಕಾದಿದೆ ವಿಚಾರಣೆಯ ಸಂಕಷ್ಟ
  • ಇದೇ ತಿಂಗಳೊಳಗೆ ED ನಡೆಸಲಿದೆ ವಿಪಕ್ಷ ನಾಯಕನ ವಿಚಾರಣೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್​ನಲ್ಲಿ ಇದೇ ತಿಂಗಳಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿಚಾರಣೆಗೆ ಜಾರಿ ನಿರ್ದೇಶನಾಲಯ ವೇದಿಕೆ ಸಿದ್ಧಮಾಡಿಕೊಂಡಿದೆ. ನ್ಯಾಷನಲ್ ಹೆರಾಲ್ಡ್​ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಂತಿಮ ಹಂತದ ತನಿಖೆಗೆ ಜಾರಿ ನಿರ್ದೇಶನಾಲಯ ಸಜ್ಜಾಗಿದೆ.

Advertisment

ಇದನ್ನೂ ಓದಿ: ಸತತ 6ನೇ ಬಾರಿಯೂ ಮದ್ರಾಸ್ IITಗೆ ಅಗ್ರಸ್ಥಾನ.. ಟಾಪ್ 10ರಲ್ಲಿ ಬೆಂಗಳೂರು IIScಗೆ ಎಷ್ಟನೇ ಸ್ಥಾನ?

ಈ ಹಿಂದೆ 2022ರಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಇದೇ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯವರ ವಿಚಾರಣೆ ನಡೆಸಿತ್ತು. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್​ನಲ್ಲಿ ಶೇಕಡಾ 76 ರಷ್ಟು ಷೇರು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆಸರಲ್ಲಿ ಇದೆ. ಉಳಿದ ಶೇಕಡಾ 24 ರಷ್ಟು ಷೇರುಗಳು ದಿವಂಗತ ಮೋತಿಲಾಲ್ ವೋರಾವರ ಬಳಿ ಇವೆ. ಯಂಗ್ ಇಂಡಿಯಾ ಲಿಮಿಟೆಡ್ ಕಂಪನಿ ಅಸೋಸಿಯೇಟ್​ ಜನರಲ್ಸ್ ಲಿಮಿಟೆಡ್ ಷೇರುಗಳನ್ನು ಖರೀದಿಯ ಮಾಡುವಲ್ಲಿ ಅಕ್ರಮವಾಗಿದೆ ಅನ್ನೋ ಆರೋಪವನ್ನು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ಮಾಡಿದ್ದರು.

publive-image

ಇದನ್ನೂ ಓದಿ:VIDEO: ಲೋಕಾರ್ನೊ ಫಿಲ್ಮ್​ ಫೆಸ್ಟಿವಲ್​ನಲ್ಲಿ ಶಾರುಖ್ ಖಾನ್ ಮಹಾ ಎಡವಟ್ಟು; ಭಾರೀ ಆಕ್ರೋಶ!

Advertisment

ಈಗ ಅದೇ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ವರ್ಷವಷ್ಟೇ ನ್ಯಾಷನಲ್ ಹೆರಾಲ್ಡ್​​ಗೆ ಸೇರಿದ್ದ 751 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು . ಪವನ್ ಬನ್ಸಲ್​ರನ್ನು ವಿಚಾರಣೆಯನ್ನು ಮಾಡಿತ್ತು. ಈ ವೇಳೆ ಹಲವು ಮಾಹಿತಿಗಳನ್ನು ಬನ್ಸಲ್ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಬನ್ಸಲ್ ಹೇಳಿಕೆಯ ಬಗ್ಗೆ ಸ್ಪಷ್ಟನೆ ಪಡೆಯಲು ಜಾರಿ ನಿರ್ದೇಶನಾಲಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿದೆ. ಇದೇ ತಿಂಗಳೊಳಗಾಗಿ ರಾಹುಲ್ ವಿಚಾರಣೆ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

2024ರ ಲೋಕಸಭಾ ಚುನಾವಣೆ ನಡೆದ ಬಳಿಕ ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರು. ಈ ವೇಳೆ ಶೀಘ್ರದಲ್ಲೇ ನನ್ನ ಮೇಲೂ ಇ.ಡಿ ದಾಳಿಯಾಗುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು. ಇದೀಗ ನ್ಯಾಷನಲ್ಡ್‌ ಹೆರಾಲ್ಡ್‌ ಪ್ರಕರಣದಲ್ಲಿ ಇ.ಡಿ ರಾಹುಲ್ ಗಾಂಧಿ ಅವರ ವಿಚಾರಣೆಗೆ ಮುಂದಾಗಿರೋದು ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment