/newsfirstlive-kannada/media/post_attachments/wp-content/uploads/2025/01/CANCER-1.jpg)
ಎಲ್ಲವೂ ಅಂದುಕೊಂಡಂತೆಯೇ ಸರಿಹೋದರೆ ಇನ್ಮುಂದೆ ಕ್ಯಾನ್ಸರ್ಗೆ (Cancer) ಹೆದರುವ ಅಗತ್ಯವೇ ಇಲ್ಲ. ಕೆಲವೇ ಕೆಲವು ಗಂಟೆಗಳಲ್ಲಿ ಕ್ಯಾನ್ಸರ್ ಪತ್ತೆ ಮಾಡಿ, ಕೆಲವೇ ಕೆಲವು ಗಂಟೆಯಲ್ಲಿ ಲಸಿಕೆ ಹಾಕುವ ದಿನವೂ ದೂರವಿಲ್ಲ. ಒರಾಕಲ್ ಸಿಇಒ ಲ್ಯಾರಿ ಎಲಿಸನ್ (Chief technology officer of Oracle) ಮಹತ್ವದ ಹೇಳಿಕೆ ಪ್ರಕಟಿಸಿದ್ದು, AI ಸಹಾಯದಿಂದ ಕ್ಯಾನ್ಸರ್ ಪತ್ತೆಹಚ್ಚಲು ಮತ್ತು ಕಸ್ಟಮ್ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಅನುಕೂಲ ಆಗಲಿದೆ ಎಂದಿದ್ದಾರೆ.
ಲ್ಯಾರಿ ಎಲಿಸನ್ ಏನ್ ಹೇಳಿದ್ದಾರೆ..?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಯಾನ್ಸರ್ ಪತ್ತೆ ಮಾಡುತ್ತದೆ. ಅಷ್ಟೇ ಅಲ್ಲ, ಲಸಿಕೆ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು 48 ಗಂಟೆಗಳಲ್ಲಿ ಆ ಲಸಿಕೆ ಪ್ರತಿಯೊಬ್ಬ ವ್ಯಕ್ತಿಗೆ ಲಭ್ಯವಾಗುವಂತೆ ಮಾಡುತ್ತದೆ ಎಂದು ಒರಾಕಲ್ ಅಧ್ಯಕ್ಷ ಲ್ಯಾರಿ ಎಲಿಸನ್ ಹೇಳಿದ್ದಾರೆ.
ಲ್ಯಾರಿ ಎಲಿಸನ್ ಕ್ಯಾನ್ಸರ್ಗೆ ಲಸಿಕೆ ತಯಾರಿಸಿದರೆ ಅಮೆರಿಕ ಎರಡನೇ ದೇಶವಾಗಲಿದೆ. ಕ್ಯಾನ್ಸರ್ಗೆ ವ್ಯಾಕ್ಸಿನ್ ಕಂಡು ಹಿಡಿಯಲಾಗಿದೆ ಎಂದು ಮೊದಲು ರಷ್ಯಾ ಹೇಳಿಕೊಂಡಿದೆ. ಅಂತೆಯೇ ರಷ್ಯಾದಲ್ಲಿ 2025 ರಿಂದ ವ್ಯಾಕ್ಸಿನ್ ಡ್ರೈ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸಣಕಲು ದೇಹದವರಲ್ಲೇ ಹೃದಯಾಘಾತದ ಪ್ರಮಾಣ ಹೆಚ್ಚು; ಬೆಚ್ಚಿ ಬೀಳಿಸಿದೆ ಸ್ಫೋಟಕ ವರದಿ
ಕ್ಯಾನ್ಸರ್ ಚಿಕಿತ್ಸೆಗೆ ಔಷಧಿ ಕಂಡು ಹಿಡಿಯಲು ಅಮೆರಿಕ ದೀರ್ಘಕಾಲದಿಂದ ಕೆಲಸ ಮಾಡುತ್ತಿದೆ. ಕಳೆದ ವರ್ಷ, ಮೇ 2024ರಲ್ಲಿ ಫ್ಲೋರಿಡಾ ವಿವಿ ವಿಜ್ಞಾನಿಗಳು ನಾಲ್ಕು ಕ್ಯಾನ್ಸರ್ ರೋಗಿಗಳ ಮೇಲೆ ಲಸಿಕೆಯನ್ನು ಪರೀಕ್ಷಿಸಿದ್ದರು. ಎರಡು ದಿನಗಳ ವ್ಯಾಕ್ಸಿನೇಷನ್ ನಂತರ, ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರೋದನ್ನು ಕಂಡುಕೊಂಡಿದ್ದಾರೆ. ರಷ್ಯಾ ನಂತರ ಅಮೆರಿಕದಲ್ಲಿ ಕ್ಯಾನ್ಸರ್ ಲಸಿಕೆ ತಯಾರಿಸಿದರೆ, ಇಡೀ ಜಗತ್ತಿಗೆ ಪ್ರಯೋಜನ ಆಗಲಿದೆ.
ಅಪಾಯಕಾರಿ ಕ್ಯಾನ್ಸರ್
ಕ್ಯಾನ್ಸರ್ ತುಂಬಾನೇ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್ನಿಂದ ಸಾಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಕ್ಯಾನ್ಸರ್ ವಿಶ್ವದ ಎರಡನೇ ಅತಿದೊಡ್ಡ ಸಾವಿಗೆ ಕಾರಣವಾಗಿದೆ. ಜಗತ್ತಿನ ಪ್ರತಿ ಆರು ಸಾವಿನಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾರಣವಾಗಿದೆ.
ಭಾರತದಲ್ಲಿ ಕ್ಯಾನ್ಸರ್ ಅಂಕಿ-ಅಂಶ
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿ ವರ್ಷ ಇದರ ಅಪಾಯ ಹೆಚ್ಚುತ್ತಿದೆ. 2025ರ ವೇಳೆಗೆ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 15 ಲಕ್ಷ ಮೀರುವ ನಿರೀಕ್ಷೆ ಇದೆ. 2019 ರಿಂದ 2023 ರವರೆಗೆ ದೇಶದಲ್ಲಿ 71 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿವೆ. 2023ರಲ್ಲೇ ಸುಮಾರು 15 ಲಕ್ಷ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳಲ್ಲಿ 40 ಲಕ್ಷ ಜನರು ಸಾವನ್ನಪ್ಪಿದ್ದಾರೆ. 2023ರಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.
ಇದನ್ನೂ ಓದಿ: ಒಂದು ವಾರ ವಿಪರೀತ ಚಳಿ.. ನಿಮ್ಮೂರಲ್ಲಿ ಎಷ್ಟಿದೆ? ರಾಜ್ಯ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ