/newsfirstlive-kannada/media/post_attachments/wp-content/uploads/2025/05/Virat-kohli-6.jpg)
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗೆಲುವಿಗಾಗಿ ಎಲ್ಲಾ ತಂಡಗಳು ಹೋರಾಟ ನಡೆಸ್ತಿವೆ. ನಾನಾ, ನೀನಾ? ಎಂಬಂತೆ ಜಿದ್ದಿಗೆ ಬಿದ್ದು ಪ್ಲೇ ಆಫ್ ಟಿಕೆಟ್ಗಾಗಿ ಬಡಿದಾಡ್ತಿವೆ. ಈ ತಂಡಗಳ ಫೈಟ್ನ ಜೊತೆ ಜೊತೆಗೆ ತಂಡದಲ್ಲಿರೋ ಆಟಗಾರರ ನಡುವೆ ರನ್ ವಾರ್ ಕೂಡ ಜೋರಾಗಿ ನಡೀತಿದೆ.
ಸೀಸನ್-18ರ ಐಪಿಎಲ್ ಅಂತ್ಯಕ್ಕೆ ಬಂದಾಗಿದೆ. ಪ್ಲೇ ಆಫ್ ಸ್ಥಾನ ಕನ್ಫರ್ಮ್ ಮಾಡಿಕೊಳ್ಳಲು ತಂಡಗಳು ಇನ್ನಿಲ್ಲದ ಹೋರಾಟ ನಡೆಸ್ತಿವೆ. ಟಿ20 ಅನ್ನೋ ಬ್ಯಾಟರ್ಗಳ ಗೇಮ್ನಲ್ಲಿ ರನ್ ಹೊಳೆಯನ್ನೇ ಹರಿಸ್ತಿರುವ ಬ್ಯಾಟ್ಸ್ಮನ್, ಬೌಲರ್ಗಳ ಮೇಲೆ ಕರುಣೆ ತೋರದೇ ಹಿಗ್ಗಾಮುಗ್ಗಾ ಬಾರಿಸ್ತಿದ್ದಾರೆ. ಒಂದೆಡೆ ತಂಡದ ಗೆಲುವಿಗೆ ಎದುರಾಳಿಗಳ ಜೊತೆ ಫೈಟ್ ನಡೆಸ್ತಿರೋ ಆಟಗಾರರು, ಇನ್ನೊಂದೆಡೆ ತಮ್ಮ ಗೆಲುವಿಗೆ ತಂಡದಲ್ಲಿರೋ ಆಟಗಾರರ ಜೊತೆಗೆ ಕಾಂಪಿಟೇಶನ್ ನಡೆಸ್ತಿದ್ದಾರೆ.
ಇದನ್ನೂ ಓದಿ: ಸತತ 6 ಎಸೆತದಲ್ಲಿ 6 ಸಿಕ್ಸರ್.. ಸ್ಟಾರ್ ಬೌಲರ್ನ ತೊಳೆದು ಹಾಕಿದ ರಿಯಾನ್ ಪರಾಗ್..!
ಒಂದೊಂದು ದಿನ ಒಬ್ಬೊಬ್ಬರ ಪಾಲು ಆರೆಂಜ್ ಕ್ಯಾಪ್
ಆರೆಂಜ್ ಕ್ಯಾಂಪ್ಗಾಗಿ ಸೀಸನ್-18ರ ಐಪಿಎಲ್ನಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ನಾನಾ ನೀನಾ ಅಂತಾ ಹೋರಾಡ್ತಿರುವ ಆಟಗಾರರು, ರನ್ಭೂಮಿಯಲ್ಲಿ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಗರಿಷ್ಠ ರನ್ ಸ್ಕೋರರ್ಗೆ ನೀಡುವ ಈ ಆರೆಂಜ್ ಕ್ಯಾಪ್, ದಿನಕ್ಕೊಬ್ಬರ ಪಾಲಾಗ್ತಿದೆ. ಈ ಆರೆಂಜ್ ಕಿರೀಟಕ್ಕಾಗಿ 5 ಮಂದಿಯ ನಡುವೆ ಟಫ್ ಕಾಂಪಿಟೇಷನ್ ನಡೀತಿದೆ. ದಿನಕ್ಕೊಬ್ಬರ ಪಾಲಾಗ್ತಿದೆ ಆರೆಂಜ್ ಕ್ಯಾಪ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಕಳೆದ 4 ದಿನಗಳಿಂದ ಮೂವರ ಪಾಲಾಗಿರುವುದು.
ಮತ್ತೆ ಕೊಹ್ಲಿ ಮುಕುಟಕ್ಕೇರಿದ ಆರೆಂಜ್ ಕ್ಯಾಪ್
ಐಪಿಎಲ್ನಲ್ಲಿ ಸಾಲಿಡ್ ಪ್ರದರ್ಶನ ನೀಡ್ತಿರುವ ವಿರಾಟ್, ಚೆನ್ನೈ ಎದುರು ಅಬ್ಬರಿಸಿ ಬೊಬ್ಬೆರೆದರು. 33 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಒಳಗೊಂಡ 62 ರನ್ ಗಳಿಸಿದ ಕೊಹ್ಲಿ, 505 ರನ್ ಕಲೆಹಾಕುವ ಮೂಲಕ ಸಾಯಿ ಸುದರ್ಶನ್ರನ್ನ ಹಿಂದಿಕ್ಕೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.
ಆರೆಂಜ್ ಕ್ಯಾಪ್ ಮೇಲೆ ಗುಜರಾತ್ ಟಾಪ್ ಆರ್ಡರ್ ಕಣ್ಣು
ಗುಜರಾತ್ ಟೈಟನ್ಸ್ ಐಪಿಎಲ್ನಲ್ಲಿ ಸಾಲಿಡ್ ಆಟವಾಡ್ತಿದೆ. ಗೆಲುವಿನ ನಾಗಲೋಟ ನಡೆಸ್ತಿರುವ ಗುಜರಾತ್, ಪ್ಲೇ ಆಫ್ ಅಂಚಿನಲ್ಲಿದೆ. ಗುಜರಾತ್ ಟೈಟನ್ಸ್ ತಂಡದ ಸಕ್ಸಸ್ಗೆ ಟಾಪ್ ಆರ್ಡರ್ನ ಆಟ ಪ್ರಮುಖ ಕಾರಣ. ಎದುರಾಳಿಗಳ ಮೇಲೆ ದಂಡಯಾತ್ರೆ ನಡೆಸ್ತಿರುವ ಸಾಯಿ ಸುದರ್ಶನ್, ಶುಭ್ಮನ್ ಗಿಲ್, ಜೋಸ್ ಬಟ್ಲರ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸ್ತಿದ್ದಾರೆ. ಅಬ್ಬರದ ಆಟದಿಂದ ತಂಡವನ್ನ ಗೆಲ್ಲಿಸ್ತಿರೋ, ಇವ್ರ ನಡುವೆ ಆರೆಂಜ್ ಕ್ಯಾಪ್ಗಾಗಿ ರೇಸ್ ಎರ್ಪಟ್ಟಿದೆ.
ಇದನ್ನೂ ಓದಿ: ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಏರಿಳಿತ.. ಪ್ಲೇ-ಆಫ್ಗಾಗಿ ಪೈಪೋಟಿ ಹೇಗಿದೆ..?
ಆಡಿರೋ 10 ಪಂದ್ಯಗಳಿಂದ ಸಾಯಿ ಸುದರ್ಶನ್, 50.40ರ ಬ್ಯಾಟಿಂಗ್ ಅವರೇಜ್ನಲ್ಲಿ 504 ರನ್ ಗಳಿಸಿದ್ದಾರೆ. 5 ಅರ್ಧಶತಕ ಸಿಡಿಸಿರುವ ಸುದರ್ಶನ್, 154.12ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಜೋಸ್ ಬಟ್ಲರ್ 78.33ರ ಬ್ಯಾಟಿಂಗ್ ಅವರೇಜ್ನಲ್ಲಿ 470 ರನ್ ಸಿಡಿಸಿದ್ದಾರೆ. 5 ಅರ್ಧಶತಕ ಗಳಿಸಿರುವ ಇಂಗ್ಲೆಂಡ್ ಬ್ಯಾಟರ್, 169.06ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಗುಜರಾತ್ ಟೈಟನ್ಸ್ ನಾಯಕ ಶುಭ್ಮನ್ ಗಿಲ್, 465 ರನ್ ಸಿಡಿಸಿದ್ದಾರೆ. ಈ ಪೈಕಿ 5 ಅರ್ಧಶತಕ ಸಿಡಿಸಿರುವ ಶುಭ್ಮನ್, 162.02ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಸೂರ್ಯ-ಜೈಸ್ವಾಲ್ ಪೈಪೋಟಿ.!
ಪಾಯಿಂಟ್ಸ್ ಟೇಬಲ್ನಂತೆ ಆರೆಂಜ್ ಕ್ಯಾಪ್ ಕೂಡ ಹಾವು ಏಣಿ ಆಟ ವಾಡ್ತಿದೆ. ಆರೆಂಜ್ ಕ್ಯಾಂಪ್ಗಾಗಿ ಸೂರ್ಯಕುಮಾರ್ ಯಾದವ್ ಪೈಪೋಟಿಗಿಳಿದಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಅದ್ಬುತ ಪ್ರದರ್ಶನ ನೀಡ್ತಿರುವ ಸೂರ್ಯ, 11 ಪಂದ್ಯಗಳಿಂದ 475 ರನ್ ಗಳಿಸಿದ್ದಾರೆ. 172.72ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸ್ತಿರುವ ಸೂರ್ಯ ಟಾಪ್ ಸ್ಕೋರರ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.
ಸೂರ್ಯ ಮಾತ್ರವಲ್ಲ.. ರಾಜಸ್ಥಾನ್ ರಾಯಲ್ಸ್ ತಂಡದ ಜೈಸ್ವಾಲ್ ಕೂಡ ರೇಸ್ನಲ್ಲಿದ್ದಾರೆ. ಟೂರ್ನಿಯಲ್ಲಿ ಉಳಿದೆರಡು ಪಂದ್ಯಗಳನ್ನು ಮಾತ್ರವೇ ಆಡಲಿರುವ ಜೈಸ್ವಾಲ್, ಈ ರೇಸ್ನಲ್ಲಿ ಉಳಿಯೋದು ಅನುಮಾನವೇ ಆಗಿದೆ. ಟೂರ್ನಿ ಆರಂಭದಲ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದ ಡೇಂಜರಸ್ ನಿಕೋಲಸ್ ಪೂರನ್ ಸಹ ರೇಸ್ನಲ್ಲಿದ್ದಾರೆ ಅನ್ನೋದನ್ನ ಮರೆಯುವಂತಿಲ್ಲ. ಟಿ20 ಬ್ಯಾಟಲ್ನಲ್ಲಿ ಹೋರಾಡುತ್ತ ತಂಡದ ಗೆಲುವುಗಳಲ್ಲಿ ಮಹತ್ವದ ಪಾತ್ರ ವಹಿಸ್ತಿರುವ ಇವರ ಪೈಕಿ ಯಾರಿಗೆ ಆರೆಂಜ್ ಕ್ಯಾಪ್ ದಕ್ಕುತ್ತೆ ಅನ್ನೋದನ್ನು ಕಾದು ನೋಡೋಣ.
ಇದನ್ನೂ ಓದಿ: ಕೊಹ್ಲಿಯ ಅದೊಂದು ನಿರ್ಧಾರದಿಂದ ಟೀಂ ಇಂಡಿಯಾಗೆ ಬಿಗ್ ಲಾಸ್.. ತಪ್ಪು ಮಾಡಿಬಿಟ್ರಾ ವಿರಾಟ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ