ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?

author-image
Bheemappa
Updated On
ಇನ್ಮುಂದೆ Air India ವಿಮಾನದಲ್ಲಿ ಪ್ರಯಾಣ ಮಾಡೋದೇ ಇಲ್ಲ.. ಸ್ಟಾರ್ ಕ್ರಿಕೆಟರ್ ಹೇಳಿದ್ದು ಏನು?​
Advertisment
  • ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಸೂಚನೆ
  • ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ಸ್​ಗೆ ಆದೇಶ
  • 265 ಮಂದಿ ಕೊನೆಯುಸಿರೆಳೆದ ಬೆನ್ನಲ್ಲೇ ಡಿಜಿಸಿಎ ನಿರ್ದೇಶನ

ನವದೆಹಲಿ: ವಿಮಾನಯಾನ ಮೇಲ್ವಿಚಾರಣಾ ಸಂಸ್ಥೆಯಾದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ), ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳ ಸುರಕ್ಷತಾ ತಪಾಸಣೆ ಹೆಚ್ಚಿಸುವಂತೆ ಏರ್ ಇಂಡಿಯಾಗೆ ನಿರ್ದೇಶನ ನೀಡಿದೆ. ಅಹಮದಾಬಾದ್ ಬಳಿ ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಸೇರಿ ಒಟ್ಟು 265 ಮಂದಿ ಕೊನೆಯುಸಿರೆಳೆದ ಬೆನ್ನಲ್ಲೇ ಈ ಆದೇಶ ಹೊರ ಬಂದಿದೆ.

ಇದೇ ಭಾನುವಾರ ಅಂದರೆ ಜೂನ್ 15ರಿಂದ ಬೋಯಿಂಗ್ 787-8 ಹಾಗೂ 787-9 ವಿಮಾನಗಳ ಸುರಕ್ಷತೆ ತಪಾಸಣೆ ನಡೆಸುವಂತೆ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ. ಅಹಮದಾಬಾದ್​ನಿಂದ ಲಂಡನ್​ಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಅಪಘಾತದ ಬಳಿಕ 787 ಡ್ರೀಮ್‌ಲೈನರ್ ಹಾಗೂ ಅಮೆರಿಕನ್ ವಿಮಾನ ತಯಾರಕ ಬೋಯಿಂಗ್ ಪರಿಶೀಲನೆಗೆ ಒಳಪಡಲಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ವಿಮಾನ ಪ್ರಯಾಣಿಕನೂ ಅಲ್ಲ, ಹಾಸ್ಟೆಲ್ ವಿದ್ಯಾರ್ಥಿಯೂ ಅಲ್ಲ.. ಬಾಲಕ ಕಣ್ಮುಚ್ಚಿದ್ದು ಹೇಗೆ?

publive-image

ಜೆನ್‌ಎಕ್ಸ್ ಎಂಜಿನ್‌ಗಳನ್ನು ಹೊಂದಿರುವ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಆದೇಶದಲ್ಲಿ ಹೇಳಿರುವಂತೆ ಆ ತಪಾಸಣೆಗಳು ಯಾವುವು ಎಂಬುದು ಇಲ್ಲಿವೆ.

  • ಇಂಧನ ಹಾಗೂ ಇದಕ್ಕೆ ಸಂಬಂಧಿಸಿದ ವ್ಯವಸ್ಥೆಯ ಪರಿಶೀಲನೆ
  • ಕ್ಯಾಬಿನ್ ಏರ್ ಕಂಪ್ರೆಸರ್ ಮತ್ತು ಇದಕ್ಕೆ ಸಂಬಂಧ ಪಟ್ಟಂತಹವುಗಳ ಪರಿಶೀಲಿಸಬೇಕು
  • ಎಲೆಕ್ಟ್ರಾನಿಕ್​ ಇಂಜಿನ್​ ಕಂಟ್ರೋಲ್ ಸಿಸ್ಟಮ್​ ಟೆಸ್ಟಿಂಗ್​
  • ಇಂಜಿನಿನ ಇಂಧನ- ಚಾಲಿತ ಆಕ್ಟಿವೇಟರ್​-ಆಪರೇಷನಲ್ ಟೆಸ್ಟ್​ ಮತ್ತು ಆಯಿಲ್​ ಸಿಸ್ಟಮ್​ ಚೆಕ್ಕಿಂಗ್
  • ಹೈಡ್ರಾಲಿಕ್ ವ್ಯವಸ್ಥೆಯ ಪರಿಶೀಲನೆ ಮಾಡಲೇಬೇಕು
  • ಟೇಕ್​ಆಫ್ ಆಗುವ ಮೊದಲು ಎಲ್ಲ ಮುನ್ನೆಚ್ಚರಿಕೆಗಳು ಕೈಗೊಳ್ಳಬೇಕು

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment