/newsfirstlive-kannada/media/post_attachments/wp-content/uploads/2025/01/BANGALORE-PALACE.jpg)
ಬೆಂಗಳೂರು ಅರಮನೆ ಮೈದಾನ ಜಾಗವನ್ನು ಬಳಸಿಕೊಳ್ಳುವುದುನ್ನು ನಿಯಂತ್ರಿಸುವುದಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​​.ಕೆ ಪಾಟೀಲ್ ಹೇಳಿದ್ದಾರೆ.
1996ರಲ್ಲಿ ಅರಮನೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನು ಜಾರಿ ಮಾಡಲಾಗಿತ್ತು. ಅದನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿತ್ತು. ಅದು ಅಂಗೀಕಾರವೂ ಕೂಡ ಆಗಿತ್ತು. 472 ಎಕರೆ ಭೂಮಿಯನನ್ಉ ಅಂದಿನ ಮಾರುಕಟ್ಟೆ ಬೆಲೆಯಲ್ಲಿ 11 ಕೋಟಿ ರೂಪಾಯಿಗೆ ನಿರ್ಧರಿಸಲಾಗಿತ್ತು. 1996ರಲ್ಲಿ ಭೂಸ್ವಾಧೀನ ಕಾನೂನನ್ನು ಮೈಸೂರು ಮಹಾರಾಜರು ಪ್ರಶ್ನೆ ಮಾಡಿದ್ದರು. ಅವರ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್​ಗೆ ಸಿವಿಲ್ ಅಪೀಲ್​ ಹೋಗಿತ್ತು.
ಇದನ್ನೂ ಓದಿ:ಮನೆಯೊಂದು ಮೂರು ಬಾಗಿಲು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರೋದೇನು?
ಆದ್ರೆ ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ ಅಗಲೀಕರಣ ವೇಳೆ ಮತ್ತೆ ಪ್ರಕರಣ ಚರ್ಚೆಗೆ ಬರುತ್ತದೆ. ಪ್ರತಿ ಎಕರೆಗೆ 2.30 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಅಂತಾ ಆಗುತ್ತದೆ. ಇಷ್ಟು ವರ್ಷ ವ್ಯಾಜ್ಯ ನಡೀತಿದ್ರೂ ಕೂಡ ಆದೇಶಕ್ಕೆ ತಡೆ ಬಂದಿರಲಿಲ್ಲ. 2004ರಲ್ಲಿ ಸುಪ್ರೀಂಕೋರ್ಟ್​​ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಅಧಿಕಾರಿಗಳ ಮೇಲೆ ಬರುತ್ತದೆ.
/newsfirstlive-kannada/media/post_attachments/wp-content/uploads/2025/01/BANGALORE-PALACE-1.jpg)
ಅರಮನೆ ಮೈದಾನವನ್ನ ಅಗಲೀಕರಣ ಉದ್ದೇಶಕ್ಕೆ ಮೌಲ್ಯೀಕರಿಸಿ ವರ್ಗಾವಣೆ ಮಾಡಲು ಕೋರ್ಟ್ ಆದೇಶ ನೀಡುತ್ತದೆ. 15.36 ಎಕರೆ ಭೂಮಿ, ಪ್ರತಿ ಎಕರೆಗೆ ಎರಡನೂರು ಕೋಟಿಯಂತೆ 3014 ಕೋಟಿ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಎಕರೆಗೆ 2 ಲಕ್ಷ 30 ಸಾವಿರ ರೂಪಾಯಿ ಎಲ್ಲಿ, 3014 ಕೋಟಿ ರೂಪಾಯಿ ಎಲ್ಲಿ? ಇದರಿಂದ ಅಭಿವೃದ್ಧಿಗೆ ಗಂಡಾಂತರ ಹಾಗೂ ಪ್ರಗತಿ ವಿರೋಧಿ ಆಗುತ್ತದೆ ಎಂದು ಸಚಿವ ಹೆಚ್​​.ಕೆ.ಪಾಟೀಲ್ ಹೇಳಿದ್ದಾರೆ. ಅದು ಮಾತ್ರವಲ್ಲದೇ ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆಯ ವಿಚಾರದಲ್ಲಿ ಟಿಡಿಆರ್ ವಿಸ್ತರಣೆಗೆ ಸಂಪುಟ ನಕಾರ ವ್ಯಕ್ತಪಡಿಸಲಾಗಿದ್ದು, ವಾರಸುದಾರರಿಗೆ ಟಿಡಿಆರ್​ ನೀಡದಿರಲು ನಿರ್ಧರಿಸಲಾಗಿದೆ ಎಂದು ಹೆಚ್​.ಕೆ.ಪಾಟೀಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us