/newsfirstlive-kannada/media/post_attachments/wp-content/uploads/2025/01/SIDDARAMIAH_PRAMODA_DEVI.jpg)
ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾ ರದ ನಡುವಿನ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ. ಬೆಂಗಳೂರು ಅರಮನೆ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ತಿಕ್ಕಾಟ ನಡೆದಿದೆ. ಹೀಗಾಗಿ ಅರಮನೆ ಮತ್ತು ಸರ್ಕಾರದ ನಡುವಿನ ಕಾನೂನು ಸಮರ ಹಿನ್ನೆಲೆ ಬೀಸೋ ದೊಣ್ಣೆಯಿಂದ ಪಾರಾಗಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗಿಸಿದೆ.
/newsfirstlive-kannada/media/post_attachments/wp-content/uploads/2025/01/MYS_PRAMODA_DEVI.jpg)
ಅರಮನೆ ಮೈದಾನ ಭೂಮಿ ಬಳಕೆಗೆ ಟಿಡಿಆರ್ ನೀಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಗ್ರೀವಾಜ್ಞೆ ಜಾರಿಗೊಳಿಸುವುದರಿಂದ ಅಗತ್ಯವಿರುವಷ್ಟು ಜಾಗವನ್ನು ಬಳಸಿಕೊಳ್ಳಲು ಮತ್ತು ಉದ್ದೇಶಿತ ರಸ್ತೆ ಅಗಲೀಕರಣ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಅನುಕೂಲ ಆಗಲಿದೆ.
- ರಸ್ತೆ ಅಗಲೀಕರಣಕ್ಕೆ 15.36 ಎಕರೆ ಅರಮನೆ ಮೈದಾನ ಭೂಮಿ ಬೇಕು
- ಅದರ ಒಟ್ಟು ಬೆಲೆ 2,17,000 ರೂ. ಪ್ರತಿ ಚದರ ಮೀಟರ್ ಆಗುತ್ತದೆ
- ಪ್ರತಿ ಎಕರೆಗೆ 200 ಕೋಟಿಯಂತೆ 3,014 ಕೋಟಿ ರೂ ಟಿಡಿಆರ್ ಕೊಡಬೇಕಾಗಿದೆ
- ದೊಡ್ಡ ಆರ್ಥಿಕ ಹೊರೆ ಉಂಟಾಗಿ ಅಭಿವೃದ್ಧಿಗೆ ಮಾರಕವಾಗಿರುತ್ತದೆ
- 1996ರ ಕಾಯ್ದೆಗೆ ಪೂರಕವಾದ ಸುಗ್ರಿವಾಜ್ಞೆ ರಾಜ್ಯಪಾಲರಿಗೆ ಮಂಡಿಸಲು ತೀರ್ಮಾನ
ಬೆಂಗಳೂರು ಅರಮನೆಯ ವ್ಯಾಜ್ಯ ಮತ್ತು ವರ್ಗಾವಣೆ ಅಧಿನಿಯಮ 96ಕ್ಕೆ ಸಂಬಂಧಿಸಿದಂತೆ ಸಿವಿಲ್ ಅಪಿಲ್ಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುತ್ತವೆ. ಇದರಿಂದ ಟಿಡಿಆರ್ ವಿತರಿಸಿದರೆ, ಸದರಿ ಟಿಡಿಆರ್ಗಳನ್ನು ಹಿಂದಕ್ಕೆ ಪಡೆಯಲು ಆಗಲ್ಲ. ಇದರಿಂದ ರಾಜ್ಯದ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ. ಆದ್ದರಿಂದ ನಾವು ಟಿಡಿಆರ್ ಕೊಡುವುದಿಲ್ಲ. ಯಾವುದಾದರೂ ಒಂದು ಭಾಗ ತೆಗೆದುಕೊಳ್ಳಬೇಕು ಎಂದರೆ ರಾಜ್ಯ ಸರ್ಕಾರಕ್ಕೆ ಅಧಿಕಾರ ವಿದೆ. ಟಿಡಿಆರ್ ಕೊಡುವುದು ಸ್ಟಾಪ್ ಮಾಡುತ್ತೇವೆ.
ಹೆಚ್.ಕೆ.ಪಾಟೀಲ್, ಕಾನೂನು ಸಚಿವ
ಇದನ್ನೂ ಓದಿ: ವಿವೇಕಾ ವಿದ್ಯಾಸಂಸ್ಥೆ ವಾರ್ಷಿಕೋತ್ಸವ; ಶಿಕ್ಷಣದ ಮಹತ್ವ ತಿಳಿಸಿಕೊಟ್ಟ ನ್ಯೂಸ್ ಫಸ್ಟ್ ಸಿಇಓ S ರವಿಕುಮಾರ್
/newsfirstlive-kannada/media/post_attachments/wp-content/uploads/2025/01/MYS_PRAMODA_DEVI.jpg)
ಕಾನೂನು ಹೋರಾಟ ಮುಂದುವರಿಕೆಗೆ ರಾಜಮಾತೆ ನಿರ್ಧಾರ
ಸದ್ಯ ಸರ್ಕಾರದ ನಡೆಯ ವಿರುದ್ಧ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ಒಂದೊಂದು ಆರೋಪಕ್ಕೂ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ. ನಮಗೆ ಅನ್ಯಾಯ ಆದ್ರೆ ಕಾನೂನು ಸಮರ ಮಾಡೇ ಮಾಡ್ತೀವಿ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅರಮನೆಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮತ್ತೆ ತೀವ್ರಗೊಂಡಿದ್ದು, ಮುಂದೆ ಇದು ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us