newsfirstkannada.com

×

ತಂದೆಯ ಸಾವಿನ ಪ್ರತೀಕಾರಕ್ಕೆ ಪ್ಲಾನ್​​​; ಬಿನ್ ಲಾಡೆನ್ ಮಗ ಇನ್ನೂ ಬದುಕಿದ್ದಾನೆ ಎಂದರೆ ನಂಬಲೇಬೇಕು!

Share :

Published September 14, 2024 at 6:28am

    ಇನ್ನೂ ಬದುಕಿದ್ದಾನೆ ಉಗ್ರ ಒಸಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಖಾನ್​

    ಪಾಶ್ಚಿಮಾತ್ಯ ದೇಶಗಳ ಮೇಲೆ ಮರಳಿ ದಾಳಿ ನಡೆಸಲು ಶುರುವಾಗಿದೆ ಸಿದ್ಧತೆ

    ಬ್ರಿಟನ್​​ ಮಾಜಿ ಸೇನಾ ಮುಖ್ಯಸ್ಥ ಪಾಶ್ಚಾತ್ಯ ರಾಷ್ಟ್ರಗಳಿಗೆ ಕೊಟ್ರು ಎಚ್ಚರಿಕೆ!

2019ರ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಯಲಾಗಿದ್ದ ಒಸಾಮಾ ಬಿನ್ ಲಾಡೆನ್ ಪುತ್ರ ಸದ್ಯ ಅಲ್​ ಖೈದಾ ಭಯೋತ್ಪಾದಕ ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಜೋರಾದ ಸಿದ್ಧತೆ ನಡೆಸಿದ್ದಾನೆ ಎನ್ನಲಾಗಿದೆ.

ಬ್ರಿಟನ್​ ಮಾಧ್ಯಮಗಳು ಹೇಳುವ ಪ್ರಕಾರ ರಕ್ಷಣಾ ತಜ್ಞರು ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಇನ್ನೂ ಜೀವಂತವಾಗಿಯೇ ಇದ್ದಾನೆ. ರಹಸ್ಯವಾಗಿ ತನ್ನ ಭಯೋತ್ಪಾದನಾ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ, ಹಲವು ಮೂಲಗಳ ಪ್ರಕಾರ ಹಮ್ಜಾ ಬಿನ್ ಲಾಡೆನ್ ಸಹೋದರ ಅಬ್ದುಲ್ಲಾ ಕೂಡ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನಂತೆ.

ಇದನ್ನೂ ಓದಿ: ಮಿಸ್ ಸ್ವಿಟ್ಜರ್ಲೆಂಡ್ ಫೈನಲಿಸ್ಟ್ ಕ್ರಿಸ್ಟೀನಾ ಜೋಕ್ಸಿಮೊವಿಕ್ ನಿಗೂಢ ಸಾವು.. ದುರಂತಕ್ಕೆ ಬೆಚ್ಚಿ ಬಿದ್ದ ಜನರು!

ಈಗಾಗಲೇ ಭಯೋತ್ಪಾದನಾ ಸಂಘಟನೆಯಾಗಿರುವ ಅಲ್​ಖೈದಾ ಮತ್ತೆ ಗುಂಪು ಕಟ್ಟಿಕೊಳ್ಳುತ್ತಿದ್ದು, ಮುಂದಿನ ದಾಳಿಯ ಬಗ್ಗೆ ದೊಡ್ಡ ಸ್ಕೆಚ್ ಹಾಕಿಕೊಳ್ಳುತ್ತಿದೆ ಎಂದು ಬ್ರಿಟನ್​ನ ರಕ್ಷಣಾ ತಜ್ಞರು ಹೇಳಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಹಮ್ಜಾ ಬಿನ್ ಲಾಡೆನ್ ಅಲ್​ ಖೈದಾ ನಾಯಕತ್ವವನ್ನು ವಹಿಸಿಕೊಂಡಿದ್ದು, ಇರಾಕ್ ಯುದ್ಧದ ಬಳಿಕ ಮತ್ತೆ ಅದನ್ನು ಪುನರುತ್ಥಾನದ ಕಡೆಗೆ ಒಯ್ಯುವ ಉದ್ದೇಶ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮೊಟ್ಟೆ ಹಗರಣದಲ್ಲಿ ಶಶಿಕಲಾ ಜೊಲ್ಲೆಗೆ ಭಾರೀ ಮುಖಭಂಗ; ನ್ಯೂಸ್​ಫಸ್ಟ್​ ‘ನಿರ್ಭೀತಿ’ಯ ಹೋರಾಟಕ್ಕೆ ಜಯ

ಬ್ರಿಟನ್​ ಸೇನೆಯ ಮಾಜಿ ಮುಖ್ಯಸ್ಥ ಕರ್ನಲ್ ರಿಚರ್ಡ್ ಕೆಂಪ್ ಈಗಾಗಲೇ ಹಮ್ಜಾ ಮುಂದೆ ಪಾಶ್ಚಿಮಾತ್ಯ ದೇಶಗಳಿಗೆ ಬಹುದೊಡ್ಡ ಅಪಾಯಕಾರಿಯಾಗಲಿದ್ದಾನೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈಗಾಗಲೇ ಹಮ್ಜಾ ಬಿನ್ ಲಾಡೆನ್ ಅಫ್ಘಾನಿಸ್ತಾನದ ನೆಲದಲ್ಲಿ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಮಾಡಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾನೆ. ಹಮ್ಜಾ ಬಿನ್ ಲಾಡೇನ್​ ಜೀವಂತವಾಗಿಯೇ ಇದ್ದಾನೆ ಅದರ ಜೊತೆಗೆ ಅಲ್​ಖೈದಾವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಸಾಗಿದ್ದಾನೆ. ಇದೆಲ್ಲವೂ ಸದ್ಯ ತಾಲಿಬಾನ್​ನ ಎಲ್ಲಾ ಉಗ್ರ ಸಂಘಟನೆಯ ಮುಖಂಡರಿಗೆ ತಿಳಿದ ಸತ್ಯವಾಗಿದೆ ಎಂದು ಹೇಳಿದ್ದಾರೆ.

ಲಾಡೆನ್ ಮಗನನ್ನು ಕಾಪಾಡುತ್ತಿರುವ ತಾಲಿಬಾನ್

ಮೂಲಗಳ ಪ್ರಕಾರ ತಾಲಿಬಾನ್ ಮುಖಂಡರೇ ಈ ಒಸಾಮಾ ಬಿನ್ ಲಾಡೆನ್ ಪುತ್ರನನ್ನು ಸಂರಕ್ಷಿಸುತ್ತಿದೆ. ಅವನೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅವರು ಸತತ ಸಭೆಗಳನ್ನು ನಡೆಸುತ್ತಿದ್ದಾರೆ, ಅವನೊಂದಿಗೆ ಅವನ ಕುಟುಂಬಕ್ಕೂ ಕೂಡ ರಕ್ಷಣೆಯಾಗಿ ನಿಂತಿದ್ದಾರೆ ತಾಲಿಬಾನಿಗಳು ಎಂದು ವರದಿಗಳು ಹೇಳುತ್ತಿವೆ. ಇದು ಹಮ್ಜಾ ಮತ್ತು ತಾಲಿಬಾನಿಗಳ ನಡುವಿನ ನಂಟನ್ನು ತೆರೆದಿಡುತ್ತಿದೆ. ಪರಿಸ್ಥಿತಿ ಬಿಗಡಾಯಿಸುವ ಮೊದಲೆ ಪಾಶ್ಚಿಮಾತ್ಯ ದೇಶಗಳು ಎಚ್ಚೆತ್ತುಕೊಳ್ಳಬೇಕು ಎಂದು ರಿಚರ್ಡ್ ಕೆಂಪ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆಯ ಸಾವಿನ ಪ್ರತೀಕಾರಕ್ಕೆ ಪ್ಲಾನ್​​​; ಬಿನ್ ಲಾಡೆನ್ ಮಗ ಇನ್ನೂ ಬದುಕಿದ್ದಾನೆ ಎಂದರೆ ನಂಬಲೇಬೇಕು!

https://newsfirstlive.com/wp-content/uploads/2024/09/BIN-LADEN-SON.jpg

Load More