/newsfirstlive-kannada/media/post_attachments/wp-content/uploads/2024/12/SUZUKI.jpg)
ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಒಂದು ಕ್ರಾಂತಿ ತಂದ ವ್ಯಕ್ತಿ ಇವರು.. ಮಧ್ಯಮ ವರ್ಗದ ಜನರಿಗೆ, ನೀವೂ ಕೂಡ ಕಾರ್ ಖರೀದಿ ಮಾಡಬಹುದು ಅಂತ ತೋರಿಸಿಕೊಟ್ಟ ಧೀಮಂತ. ಭಾರತದ ಜನರಿಗೆ ಆಟೋ ಮೊಬೈಲ್ ಕ್ಷೆತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಿದಾತ. ಹಾಗಂತ ಇವರು ನಮ್ಮ ದೇಶದವರಲ್ಲ. ಬದಲಿಗೆ ಜಪಾನ್ನವರು. ಆದರೂ ನಮ್ಮ ದೇಶದ ಬಗ್ಗೆ ವಿಶೇಷ ಕಾಳಜಿ, ಮುತುವರ್ಜಿ ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಿತಿ. ಅವರೇ ಮಾರುತಿ ಸುಜುಕಿಯ ಮಾಜಿ ಛೇರ್ಮೇನ್ ಆದ ಒಸಾಮು ಸುಜುಕಿ.. (Osamu Suzuki).
1958ರಲ್ಲಿ ಸುಜುಕಿ ಕಂಪನಿಗೆ ಸೇರಿಕೊಂಡು 1978ರಲ್ಲಿ ಅದೇ ಕಂಪನಿಗೆ ಅಧ್ಯಕ್ಷರಾಗುತ್ತಾರೆ. ನಂತರ ಅವರಿಗೆ ಒಂದು ಕನಸು ಚಿಗುರೊಡೆಯುತ್ತೆ. ಸುಜುಕಿ ಕಂಪನಿಯನ್ನು ವಿಶ್ವದ ಮಾರುಕಟ್ಟೆಯಲ್ಲಿ ವಿಸ್ತರಿಸಬೇಕು ಅನ್ನೋ ಆಸೆ. ಆಗ ಆಯ್ಕೆ ಮಾಡಿಕೊಂಡಿದ್ದೇ ಭಾರತ. ಆ ಕಾಲದಲ್ಲಿ ಭಾರತದಲ್ಲಿ ಶ್ರೀಮಂತರಿಗೆ ಮಾತ್ರವೇ ಕಾರುಗಳು ಸೀಮಿತವಾಗಿದ್ದವು. ಅದನ್ನು ಸುಳ್ಳು ಮಾಡಿದ್ದೇ ಈ ಒಸಾಮು ಸುಜುಕಿ.
ಇದನ್ನೂ ಓದಿ:ಈ ಸ್ಮಾರ್ಟ್ ಗ್ಲಾಸ್ ಧರಿಸಿದ್ರೆ ಫೋನ್ ಟಚ್ ಮಾಡುವ ಅವಶ್ಯಕತೆ ಇಲ್ಲ.. ಮೆಟಾ ಹೊಸ ಸಂಚಲನ..!
ಭಾರತದ ಸರ್ಕಾರದ ಜೊತೆ ಪಾಟ್ನರ್ಶಿಪ್ನೊಂದಿಗೆ ಕೆಲಸ ಮಾಡೋಕೆ ಶುರು ಮಾಡ್ತಾರೆ. ಹಾಗೇ ಮಾರುತಿ ಉದ್ಯೋಗ್ ಸ್ಥಾಪನೆ ಮಾಡಿ 1982ರಂದು ಮಾರುಕಟ್ಟೆಗೆ ಪರಿಚಯಿಸಿದರು. ಮಾರುತಿ 800.. ಈ ಚಿಕ್ಕ ಕಾರ್ ಅದೆಷ್ಟರ ಮಟ್ಟಿಗೆ ಹಿಟ್ ಆಯ್ತು ಅಂದ್ರೆ, ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕಾರ್ ಅಂತಾನೇ ಫೇಮಸ್ ಆಯ್ತು. ಫಿಲ್ಮ್ನಲ್ಲೂ ಇದೇ ಕಾರ್, ಫಂಕ್ಷನ್ಗಳಲ್ಲೂ ಇದೇ ಕಾರ್. ಎಲ್ಲಿ ನೋಡಿದ್ರೂ ಕೂಡ ಮಾರುತಿ 800ದ್ದೇ ಹವಾ. ಜೊತೆಗೆ ಇಡೀ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನು ಮಾಡಿದರು.
ಜಂಟಿಯಾಗಿ ಮಾರುತಿ ಉದ್ಯೋಗ್ (Maruti Udyog) ಕಂಪನಿ ಅನೇಕ ಕಾರುಗಳನ್ನು ಪರಿಚಯಿಸ್ತು. 2007ರಲ್ಲಿ ಸರ್ಕಾರ ಪಾಲುದಾರಿಕೆಯಿಂದ ಹಿಂದೆ ಸರಿದಾಗ ಇದೇ ಮಾರುತಿ ಉದ್ಯೋಗ್ ಅಂತ ಇದ್ದ ಕಂಪನಿ ತನ್ನ ಹೆಸರನ್ನು ಮಾರುತಿ ಸುಜುಕಿ ಆಗಿ ಬದಲಾಯಿಸಿಕೊಂಡಿತು. ಆಗಲೂ ಸುಜುಕಿ ಅವರಿಗೆ ಭಾರತದ ಮೇಲಿನ ಪ್ರೀತಿ ಕಡಿಮೆ ಆಗಲಿಲ್ಲ. ಅವರ ಪ್ರಕಾರ ಭಾರತ ಇಡೀ ಜಗತ್ತಿನಲ್ಲೇ ಆಟೋ ಮೊಬೈಲ್ ಕ್ಷೇತ್ರದಲ್ಲಿ ಶ್ರೇಷ್ಟ ಸಾಧನೆ ಮಾಡುತ್ತೆ, ಮುಂಚೂಣಿಯಲ್ಲಿರುತ್ತೆ ಅನ್ನೋದನ್ನು ಅರಿತಿದ್ದರು. ಆಗ ನಮ್ಮ ದೇಶದಲ್ಲಿ ಈಗಿರೋ ಹಾಗೇ ಓಪನ್ ಮಾರ್ಕೆಟ್ ಇರಲಿಲ್ಲ. ಅಂತಹ ಕಾಲದಲ್ಲಿ ಸುಜುಕಿಯವರು ಅಂತಹ ನಿರ್ಧಾರ ತೆಗೆದುಕೊಂಡಿದ್ರು.
ಇದನ್ನೂ ಓದಿ:ಗುಡ್ ನ್ಯೂಸ್.. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ 590 ವಿದ್ಯಾರ್ಥಿಗಳು ಆಯ್ಕೆ
ಅದಕ್ಕೆ ಕಾರಣ.. ಅವರಿಗೆ ಭಾರತದ ಮೇಲಿದ್ದ ಪ್ರೀತಿ.. ಹೀಗೆ ಜಪಾನ್ನಲ್ಲಿ ನಮ್ಮ ದೇಶದಲ್ಲಿ ಹಾಗೂ ವಿಶ್ವದ ಅನೇಕ ದೇಶಗಳಲ್ಲಿ ಮಾರುತಿ ಸುಜುಕಿ ಕಂಪನಿ ತನ್ನ ಛಾಪನ್ನು ಮೂಡಿಸಿದೆ. ಆದ್ರೆ ಇವತ್ತು 4 ದಶಕಗಳ ಕಾಲ ಈ ಬೃಹತ್ ಹಾಗೂ ದೈತ್ಯ ಕಂಪನಿಯನ್ನು ಕಟ್ಟಿ, ಬೆಳೆಸಿ, ಮುನ್ನಡೆಸಿದ ಒಸಾಮು ಸುಜುಕಿ ಇಹಲೋಕ ತ್ಯಜಿಸಿದ್ದಾರೆ. LYMPHOMA ಕಾಯಿಲೆಯಿಂದ ಅವರು ಸಾವನ್ನಪ್ಪಿದ್ದಾರೆ. ಮಾರುತಿ ಸುಜುಕಿ ಒಂದು ಪ್ರತಿಷ್ಟಿತ ಕಾರ್ ಕಂಪನಿಯಾಗೋದ್ಕಕೆ ಅವರ ಕೊಡುಗೆ ನಿಜಕ್ಕೂ ಶ್ಲಾಘನೀಯ. ಅದರ ಜೊತೆಗೆ ನಿಜಕ್ಕೂ ನಮ್ಮ ದೇಶದ ಬಡವನ ಹಾಗೂ ಮರ್ಧಯಮ ವರ್ಗದ ಜನರ ನಾಲ್ಕು ಚಕ್ರದ ಆಸೆ, ಈಡೇರೋ ಹಾಗೇ ಮಾಡಿದ ಒಸಾಮು ಸುಜುಕಿಗೆ ನಿಜಕ್ಕೂ ಗ್ರೇಟ್!
ಇದನ್ನೂ ಓದಿ:IND vs AUS ಸಿರಾಜ್ ಸುತ್ತ ಮತ್ತೊಂದು ವಿವಾದ.. ಥರ್ಡ್ ಅಂಪೈರ್ ವಿರುದ್ಧ ರೊಚ್ಚಿಗೆದ್ದ ಪ್ಯಾಟ್ ಕಮ್ಮಿನ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ