ಆಸ್ಕರ್​​ ಅವಾರ್ಡ್ 2025.. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಿನಿಮಾ ಯಾವುದು? ಇಲ್ಲಿದೆ ಸಂಪೂರ್ಣ ಪಟ್ಟಿ!

author-image
Gopal Kulkarni
Updated On
ಆಸ್ಕರ್​​ ಅವಾರ್ಡ್ 2025.. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಿನಿಮಾ ಯಾವುದು? ಇಲ್ಲಿದೆ ಸಂಪೂರ್ಣ ಪಟ್ಟಿ!
Advertisment
  • 2025ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಸಮಾರಂಭ ಇಂದು ಮುಕ್ತಾಯ
  • ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅನೋರಾ
  • ಯಾರಿಗೆಲ್ಲಾ ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿ ದೊರಕಿವೆ ಗೊತ್ತಾ?

97ನೇ ಅಕಾಡೆಮಿ ಆಸ್ಕರ್ ಅವಾರ್ಡ್​ ಮಾರ್ಚ್​ 3, ಅಂದ್ರೆ ಇವತ್ತು ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ಮುಕ್ತಾಯಗೊಂಡಿದೆ. ಆಡ್ರಿಯನ್ ಬ್ರಾಡಿ ಮತ್ತು ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸೀಯನ್ ಬೇಕರ್​ ಅವರ ಅನೋರಾ ಸಿನಿಮಾ ಅತ್ಯುತ್ತಮ ಸಿನಿಮಾ ಎಂಬ ಆಸ್ಕರ್​ ಪ್ರಶಸ್ತಿಯನ್ನು ಬಾಚಿಕೊಂಡಿದೆ.
2025ರ ಆಸ್ಕರ್ ಅವಾರ್ಡ್​ ಕಾರ್ಯಕ್ರಮದಲ್ಲಿ ಕಳೆದ ವರ್ಷದ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಎಮಿಲಿಯಾ ಪ್ರೀಜ್, ದಿ ಬ್ರೂಟಲಿಸ್ಟ್ ಹಾಗೂ ಅನೋರಾ ಸೇರಿ ಅನೇಕ ಹೆಸರುಗಳು ನಾಮಿನೇಟ್ ಆಗಿದ್ದವು. ಕೊನೆಗೆ ಆಸ್ಕರ್ ಪ್ರಶಸ್ತಿಯೂ ಅನೋರಾ ಪಾಲಿಗೆ ಸೇರಿತು. ಯಾವ ಸಿನಿಮಾ ಹಾಗೂ ಯಾವ ನಟರು ಮತ್ತು ಇನ್ನೂಳಿದವರು ಯಾವೆಲ್ಲಾ ಪ್ರಶಸ್ತಿ ಗಳಿಸಿದ್ದಾರೆ ಅನ್ನುವ ಲಿಸ್ಟ್ ನೋಡುವುದಾದ್ರೆ.

publive-image

ಆಸ್ಕರ್​ ವಿಜೇತರ ಪಟ್ಟಿ

  • ಅತ್ಯುತ್ತಮ ಸಿನಿಮಾ- ಅನೋರಾ
  • ಅತ್ಯುತ್ತಮ ನಟ -ಆಡ್ರಿಯನ್ ಬ್ರಾಡಿ, ಬ್ರ್ಯೂಟಲಿಸ್ಟ್ ಸಿನಿಮಾ
  • ಅತ್ಯುತ್ತಮ ನಟಿ- ಮೈಕಿ ಮ್ಯಾಡಿಸನ್, ಅನೋರಾ ಸಿನಿಮಾ
  • ಅತ್ಯುತ್ತಮ ಪೋಷಕ ನಟ- ಕೈರನ್ ಕಲ್ಕಿನ್, ರಿಯಲ್ ಪೇನ್
  • ಅತ್ಯುತ್ತಮ ಪೋಷಕ ನಟಿ-ಜೊಯೊ ಸಲ್ಡಾನಾ, ಎಮಿಲಿಯಾ ಪೆರೆಜ್
  • ಅತ್ಯುತ್ತಮ ನಿರ್ದೇಶಕ ಸೀಯನ್ ಬೇಕರ್, ಅನೋರಾ
  • ಅತ್ಯುತ್ತಮ ಸಿನಿಮಾಟೊಗ್ರಾಫಿ- ಲೊಲ್ ಕ್ರೌವ್ಲೇ, ಬ್ರ್ಯೂಟಲಿಸ್ಟ್
  • ಅತ್ಯುತ್ತಮ ಮೂಲ ಚಿತ್ರಕಥೆ- ಸೀಯನ್ ಬೇಕರ್, ಅನೋರಾ
  • ಅತ್ಯುತ್ತಮ ಅಳವಡಿಕೆ ಚಿತ್ರಕಥೆ- ಕಾನ್​ಕ್ಲೇವ್​
  • ಬೆಸ್ಟ್ ಒರಿಜಿನಲ್ ಸ್ಕೋರ್- ಡೆನಿಯಲ್ ಬ್ಲೂಮ್​ಬರ್ಗ್​, ಬ್ರ್ಯೂಟಲಿಸ್ಟ್
  • ಬೆಸ್ಟ್ ಸೌಂಡ್- ಡ್ಯುನೆ ಪಾರ್ಟ್​ 2
  • ಬೆಸ್ಟ್ ವಿಸ್ಯೂವಲ್ ಎಫೆಕ್ಟ್​- ಡ್ಯುನ್ ಪಾರ್ಟ್​ 2
  • ಬೆಸ್ಟ್ ಒರಿಜಿನಲ್ ಸಾಂಗ್- ಇಎಲ್ ಮಲ್ ಎಮಿಲಿಯಾ ಪೆರೆಜ್
  • ಬೆಸ್ಟ್​ ಡಾಕ್ಯೂಮೆಂಟರಿ ಶಾರ್ಟ್​ ಫಿಲ್ಮ್- ದಿ ಒನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
  • ಬೆಸ್ಟ್ ಎಡಿಟಿಂಗ್- ಅನೋರಾ
  • ಬೆಸ್ಟ್ ಡಾಕ್ಯುಮೆಂಟರಿ ಪೀಚರ್ ಫಿಲ್ಮ್​- ನೋ ಅದರ್ ಲ್ಯಾಂಡ್​
  • ಬೆಸ್ಟ್​ ಅನಿಮೆಟೆಡ್ ಫಿಲ್ಮ್​- ಫ್ಲೋವ್
  • ಬೆಸ್ಟ್ ಎನಿಮೆಟೆಡ್ ಶಾರ್ಟ್​ ಫಿಲ್ಮ್- ಇನ್​ ದಿ ಶಾಡೊವ್ ಆಪ್​ ದಿ ಸಿಪ್ರೆಸ್​
  • ಬೆಸ್ಟ್ ಕಾಸ್ಟ್ಯೂಮ್ ಡಿಸೈನ್- ಪೌಲ್ ತಾಜ್​ವೆಲ್​, ವಿಕೆಡ್ ಮೂವಿ
  • ಬೆಸ್ಟ್ ಪ್ರೊಡಕ್ಷನ್​ ಡಿಸೈನ್- ವಿಕೆಡ್​
  • ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್​ ಫಿಲ್ಮ್- ಐ ಆ್ಯಮ್ ನಾಟ್ ರೊಬೋಟ್​

publive-image

ಹೀಗೆ ಹಲವು ವಿಭಾಗಗಳಲ್ಲಿ ಹಲವು ಸಿನಿಮಾ ಸಾಧಕರು 2024ರ ಸಾಲಿನಲ್ಲಿ ತೆರೆಕಂಡ ಸಿನಿಮಾಗಳ ಮೂಲಕ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಲವು ಸಿನಿಮಾಗಳ ಅನೇಕ ಪ್ರತಿಭೆಗಳು ಈ ಬಾರಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಇನ್ನು ಭಾರತದ ಅನುಜಾ ಸಿನಿಮಾ ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್​ ಮೂವಿಯ ಪಟ್ಟಿಯಲ್ಲಿ ನಾಮಿನೇಟ್ ಆಗಿತ್ತು ಆದ್ರೆ ಐ ಆ್ಯಮ್ ನಾಟ್ ರೊಬೋಟ್​ ಸಿನಿಮಾದ ಎದುರು ಕೂದಲೆಳೆ ಅಂತರದಲ್ಲಿ ಪ್ರಶಸ್ತಿಯನ್ನು ತಪ್ಪಿಸಿಕೊಂಡಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment