ಆಸ್ಕರ್​ ಅವಾರ್ಡ್​ 2025; ಲಾಸ್​ ಏಂಜಲಿಸ್​ನಲ್ಲಿ ಅದ್ಧೂರಿ ಆರಂಭ! ಯಾರಿಗೆಲ್ಲಾ ಒಲಿದಿದೆ ಪ್ರಶಸ್ತಿ?

author-image
Gopal Kulkarni
Updated On
ಆಸ್ಕರ್​ ಅವಾರ್ಡ್​ 2025; ಲಾಸ್​ ಏಂಜಲಿಸ್​ನಲ್ಲಿ ಅದ್ಧೂರಿ ಆರಂಭ! ಯಾರಿಗೆಲ್ಲಾ ಒಲಿದಿದೆ ಪ್ರಶಸ್ತಿ?
Advertisment
  • ಲಾಸ್​ ಎಂಜೆಲಿಸ್​ನಲ್ಲಿ ಇಂದಿನಿಂದ ನಡೆಯಲಿದೆ ಆಸ್ಕರ್ 2025 ಕಾರ್ಯಕ್ರಮ
  • ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿರುವ ನಟ, ನಟಿಯರ ಹೆಸರುಗಳು
  • ಬೆಸ್ಟ್​ ಸಪೋರ್ಟಿಂಗ್ ಆ್ಯಕ್ಟರ್ ಪ್ರಶಸ್ತಿ ಗೆದ್ದ ಸಾಲ್ಡಾನಾ ಮತ್ತು ಕೈರೇನ್ ಕಲ್ಕಿನ್

ಇಂದು ಅಂದ್ರೆ ಮಾರ್ಚ್​ 3 ರಂದು ಲಾಸ್ ಎಂಜೇಲಿಸ್​​ನಲ್ಲಿ 97ನೇ ಆಸ್ಕರ್ ಅಕಾಡೆಮಿ ಅವಾರ್ಡ್ ನಡೆಯಲಿದೆ. ಈ ಹಿಂದೆ ಆತಿಥ್ಯವಹಿಸಿದ್ದ ಕೊನನ್ ಒ ಬ್ರೈನ್​ ಈ ಬಾರಿಯೂ ಕೂಡ ಹೊಸ್ಟ್ ಮಾಡಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ ಎಮಿಲಿಯಾ ಪರೇಜ್ ಸುಮಾರು 13 ನಾಮಿನೇಷನ್​ಗಳಲ್ಲಿದ್ದಾರೆ. ಇನ್ನು ವಿಕೆಡ್​್ ಸಿನಿಮಾದ ನಟಿ ಅರೈನಾ ಗ್ರಾಂಡೆ ವಿವಿಧ ಬಗೆಯ ವಿಭಾಗದಲ್ಲಿ 10 ನಾಮಿನೇಷನ್​ಗಳಲ್ಲಿ ಹೆಸರನ್ನು ಹೊಂದಿದ್ದಾರೆ.

ಇದರೊಂದಿಗೆ 2024ರಲ್ಲಿ ಬಿಡುಗಡೆಯಾದ ಬ್ರ್ಯೂಟಾಲಿಸ್ಟ್​ ಮತ್ತು ವಿಕೆಡ್​ ಸಿನಿಮಾಗಳು 10 ವಿಭಾಗಗಳಲ್ಲಿ ನಾಮಿನೇಷನ್​ಗೊಂಡಿವೆ. ಇನ್ನು ನಟನೆಯ ವಿಚಾರದಲ್ಲಿ ಟಿಮೊಥಿ ಚಲಾಮೇಟ್​, ಆ್ಯಂಡ್ರಯನ್ ಬಾಡಿ, ಅರೈನಾ ಗ್ರಾಂಡೇ, ಸೆಬಾಸ್ಟಿಯನ್ ಸ್ಟಾನ್ ಮತ್ತು ಜೆರೆಮಿ ಸ್ಟ್ರಾಂಗ್, ಕೈರನ್ ಕಲ್ಕಿನ್, ಡೆಮಿ ಮೋರ್​ ಇವರೆಲ್ಲರೂ ಕೂಡ ಬೆಸ್ಟ್ ಆ್ಯಕ್ಟರ್ ಹಾಗೂ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

publive-image

ಇದನ್ನೂ ಓದಿ: ತಮನ್ನಾ, ಕಾಜಲ್ ಅಗರ್ವಾಲ್‌ ಇಬ್ಬರಿಗೂ ಭಾರೀ ಸಂಕಷ್ಟ; ಕೋಟಿ, ಕೋಟಿ ವಂಚನೆಯಲ್ಲಿ ನಟಿಯರು ಭಾಗಿ?

ಇನ್ನು ಪ್ರಶಸ್ತಿ ಬಾಚಿಕೊಂಡವರು ಯಾರು ಯಾರು ಎಂಬುದನ್ನು ನೋಡುತ್ತಾ ಹೋಗುವುದಾದ್ರೆ. ಬೆಸ್ಟ್ ಎಡಿಟಿಂಗ್ ವಿಭಾಗದಲ್ಲಿ ಅನೋರಾ ದಿ ಬ್ರ್ಯೂಟಲಿಸ್ಟ್​ ಸಿನಿಮಾಗೆ ಆಸ್ಕರ್ ಅವಾರ್ಡ್ ಪಡೆದಿದ್ದಾರೆ. ಇನ್ನು ಬೆಸ್ಟ್ ಮೇಕಪ್ ಮತ್ತು ಬೆಸ್ಟ್​ ಹೇರ್​​ಸ್ಟೈಲ್​​ಗೆ ದಿ ಸಬ್​ಸ್ಟ್ಯಾನ್ಸ್​ ಸಿನಿಮಾದ ಡೆಮಿ ಮೂರೆಗೆ ಪ್ರಶಸ್ತಿ ಒಲಿದಿದೆ.

publive-image

ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಕಾನ್​ಕ್ಲೇವ್​ ಸಿನಿಮಾಗಾಗಿ ಪೀಟರ್​ ಸ್ಟ್ರಾಗನ್​ಗೆ ಪ್ರಶಸ್ತಿ ನೀಡಲಾಗಿದೆ. ವಿಕೆಡ್ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ ಪೌಲ್ ತಜ್​ವೆಲ್​ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇನ್ನು ಕೈರೇನ್ ಕಲ್ಕಿನ್ ರಿಯಲ್ ಪೇನ್​ ಸಿನಿಮಾದ ನಟನೆಗಾಗಿ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಪ್ರಶಸ್ತಿ ಬಾಚಿಕೊಂಡಿದ್ದರೆ. ನಟಿಯರಲ್ಲಿ ಈ ಪ್ರಶಸ್ತಿಯನ್ನು ಜಿಯೋ ಸಾಲ್ಡಾನಾ ಬಾಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment