newsfirstkannada.com

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಟ್ಟೆ ಇಲ್ಲದೇ ವೇದಿಕೆಗೆ ಎಂಟ್ರಿ ಕೊಟ್ಟ WWE ಸ್ಟಾರ್ ಜಾನ್ ಸೀನಾ..! Video

Share :

Published March 11, 2024 at 12:04pm

  ಜಾನ್ ಸೀನಾ ಹೇಗೆ ಬರಲು ಇದೆ ಒಂದು ಮುಖ್ಯ ಉದ್ದೇಶ

  ವೇದಿಕೆ ಮೇಲೆಯೇ ಜಾನ್ ಸೀನಾರ ನೋಡಿ ಮುಜುಗರಕ್ಕೆ ಒಳಗಾದ ಗಣ್ಯರು

  ನಿರೂಪಕ ಅಸಲಿ ವಿಚಾರ ಅರಿವು ಮಾಡಿಕೊಟ್ಟ ಮೇಲೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ

ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಕೋಲಾಹಲ ಸೃಷ್ಟಿಯಾಗಿದೆ. ಈ ವೇದಿಕೆ ಮೇಲೆ ಏನಾದರೂ ಒಂದು ಅನಿರೀಕ್ಷತ ಬೆಳವಣಿಗೆ ಸೃಷ್ಟಿಯಾಗೋದು ಮಾಮೂಲಿ. ಕಳೆದ ವರ್ಷ, ವಿಲ್ ಸ್ಮಿತ್, ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ್ದರು. ಈ ಸಲ WWE ಜನಪ್ರಿಯ ಸ್ಟಾರ್​ ಜಾನ್​ ಸೀನಾ ಅವರ ಸರದಿ.

ಆಸ್ಕರ್ ಅವಾರ್ಡ್ಸ್ (ಆಸ್ಕರ್ 2024) ವೇದಿಕೆಗೆ ಜಾನ್ ಸೀನಾ ಅವರು ‘ಬೆಸ್ಟ್​ ಕಾಸ್ಟ್ಯೂಮ್ ಅವಾರ್ಡ್’​ಗೆ ನಾಮಿನೇಟ್ ಆದವರ ಹೆಸರನ್ನು ಘೋಷಣೆ ಮಾಡಲು ಬಂದಿದ್ದರು. ಗಣ್ಯರು ತುಂಬಿದ್ದ ವೇದಿಕೆ ಮೇಲೆ ಜಾನ್​ ಸೀನಾ ಮೈಮೇಲೆ ಬಟ್ಟೆ ಇಲ್ಲದೇ ಬೆತ್ತಲಾಗಿ ಬಂದು ಅಚ್ಚರಿ ಮೂಡಿಸಿದ್ದಾರೆ. ಅತ್ಯುತ್ತಮ ಕಾಸ್ಟ್ಯೂಮ್ ಅವಾರ್ಡ್​​ ನಾಮನಿರ್ದೇಶಿತರ ಹೆಸರನ್ನು ವಿಭಿನ್ನವಾಗಿ ಹೇಳಲು ಪ್ರಯತ್ನಿಸಿ, ಟೀಕೆಗೆ ಗುರಿಯಾಗಿದ್ದಾರೆ.

ಬಟ್ಟೆ ಇಲ್ಲದೇ ವೇದಿಕೆ ಮೇಲೆ ಬಂದ ಜಾನ್ ಸೀನಾರನ್ನು ಕಂಡು ಗಣ್ಯರು ಮುಜುಗರಕ್ಕೆ ಒಳಗಾಗಿದ್ದಾರೆ. ಕೆಲವರು ನಾಚಿಕೆಯಿಂದ ಜೋರಾಗಿ ನಕ್ಕಿದ್ದಾರೆ. ಎಲ್ಲರೂ ನಗುತ್ತಿದ್ದಂತೆಯೇ ಕೊಂಚ ಸುಧಾರಿಸಿಕೊಂಡು ಸೀನಾ ಅವರು ಮಾತನಾಡಲು ಶುರು ಮಾಡಿದರು. ‘ಕಾಸ್ಟ್ಯೂಮ್ ತುಂಬಾನೇ ಮುಖ್ಯ. ಬಹುಶಃ ಅತ್ಯಂತ ಮುಖ್ಯವಾದದ್ದು’ ಎನ್ನುತ್ತಾರೆ.. ಆಗ ವೇದಿಕೆ ಮೇಲಿದ್ದವರು ಮತ್ತಷ್ಟು ಜೊರಾಗಿ ನಗುತ್ತಾರೆ.

ಆಗ ನಿರೂಪಕ ಜಿಮ್ಮಿ ಕಿಮ್ಮೆಲ್‌ ವೇದಿಕೆಗೆ ಆಗಮಿಸಿ, ‘ಪುರುಷ ದೇಹವು ಜೋಕ್ ಅಲ್ಲ. ಬಟ್ಟೆಯಿಲ್ಲದೇ ವೇದಿಕೆಯನ್ನು ತಲುಪಿದ ಜಾನ್ ಸೆನಾ ಅವರ ಉದ್ದೇಶ ಬಟ್ಟೆ ಎಷ್ಟು ಮುಖ್ಯ ಎಂದು ಜನರಿಗೆ ತಿಳಿಸುವುದಾಗಿದೆ ಎನ್ನುತ್ತಾರೆ. ಆಗ ಲೈಟ್​​ಗಳನ್ನು ಡಿಮ್ ಮಾಡಿ ಜಾನ್​ ಸೀನಾ ಅವರಿಗೆ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಜಾನ್ ಸೀನಾ ಬಟ್ಟೆ ಇಲ್ಲದೆ ಬಂದದ್ದು ಎಲ್ಲರಿಗೂ ಶಾಕ್ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಟ್ಟೆ ಇಲ್ಲದೇ ವೇದಿಕೆಗೆ ಎಂಟ್ರಿ ಕೊಟ್ಟ WWE ಸ್ಟಾರ್ ಜಾನ್ ಸೀನಾ..! Video

https://newsfirstlive.com/wp-content/uploads/2024/03/John-CEENA.jpg

Load More