/newsfirstlive-kannada/media/post_attachments/wp-content/uploads/2025/04/RAJAT.jpg)
ಐಪಿಎಲ್ನಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರಣ ರೋಚಕ ಪಂದ್ಯ ನಡೆಯಿತು. ಬಿಗ್ ಸ್ಕೋರಿಂಗ್ ಪಂದ್ಯದಲ್ಲಿ ಬೆಂಗಳೂರು ತಂಡವು 12 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸಿದರೂ ಗೆಲುವಿನ ನಂತರ RCB ಕ್ಯಾಪ್ಟನ್ ರಜತ್ ಪಾಟೀದಾರ್, ಬೌಲರ್‌ಗಳು ರಿಯಲ್ ಹೀರೋ ಎಂದು ಬಣ್ಣಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (67 ) ಮತ್ತು ರಜತ್ ಪಾಟೀದಾರ್ (64 ರನ್) ಅವರ ಅರ್ಧಶತಕಗಳ ನೆರವಿನಿಂದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್, 9 ವಿಕೆಟ್ ಕಳೆದುಕೊಂಡು 209 ರನ್‌ಗಳಿಸಿ ಸೋಲನ್ನು ಒಪ್ಪಿಕೊಳ್ತು.
ಇದನ್ನೂ ಓದಿ: ಕೊನೆ ಬಾಲ್ವರೆಗೆ ರಣರೋಚಕ ಐಪಿಎಲ್ ಮ್ಯಾಚ್.. ಮುಂಬೈ ವಿರುದ್ಧ RCB ಜಯಭೇರಿ
ಪಂದ್ಯ ಮುಗಿದ ಬಳಿಕ ‘ಪಂದ್ಯ ಶ್ರೇಷ್ಠ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿರುವ ಪಾಟೀದಾರ್, ನಮ್ಮ ಬೌಲರ್ಗಳ ಧೈರ್ಯ ಶ್ಲಾಘನೀಯ. ಈ ಪ್ರಶಸ್ತಿ (ಪಂದ್ಯಶ್ರೇಷ್ಠ)ಯು ಇಡೀ ಬೌಲಿಂಗ್ ಘಟಕಕ್ಕೆ ಸಲ್ಲುತ್ತದೆ. ನಿಜಕ್ಕೂ ಅದ್ಭುತ ಪಂದ್ಯವಾಗಿತ್ತು. ಬೌಲರ್‌ಗಳು ತೋರಿಸಿದ ಧೈರ್ಯ ಅದ್ಭುತ. ಈ ಮೈದಾನದಲ್ಲಿ ಬ್ಯಾಟಿಂಗ್ ಘಟಕವನ್ನು ಕಂಟ್ರೋಲ್ ಮಾಡೋದು ಸುಲಭ ಇಲ್ಲ. ಹಾಗಾಗಿ ಗೆಲುವಿನ ಶ್ರೇಯಸು ಬೌಲರ್ಗಳಿಗೆ ಸಲ್ಲುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ಮತ್ತೊಂದು ಶಾಕ್; ಇಂದಿನಿಂದ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ