BBK11: 20 ಸ್ಪರ್ಧಿಗಳಲ್ಲಿ ಇಬ್ಬರು ಕಿಕ್ ​ಔಟ್, ಇನ್ನಿಬ್ಬರು ವಾಕೌಟ್! 117 ದಿನದಲ್ಲಿ ಏನೆಲ್ಲ ಆಯ್ತು?

author-image
Veena Gangani
Updated On
BBK11: ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡ್ತಿರೋದೇಕೆ ಬಿಗ್​ಬಾಸ್​ ಸ್ಪರ್ಧಿಗಳು; ಮತ್ತೇನು ಮಾಡಿದ್ರೂ ಗೊತ್ತಾ?
Advertisment
  • ಕನ್ನಡ ಬಿಗ್​ಬಾಸ್ ಸೀಸನ್ 11ರ ಸ್ವರ್ಗ, ನರಕದ ಕಾನ್ಸೆಪ್ಟ್ ಹೇಗಿತ್ತು?
  • ಬಿಗ್​ಬಾಸ್ ಸೀಸನ್ 11 ಮನೆಯ ಹೊಸ ಅಧ್ಯಾಯಕ್ಕೆ ನಾಳೆ ಮುಕ್ತಿ
  • ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಆಚೆ ಬಂದಿದ್ದ ಆ ಇಬ್ಬರು ಯಾರು?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11 ಗ್ರ್ಯಾಂಡ್​ ಫಿನಾಲೆ ಅಬ್ಬರ ಜೋರಾಗಿದೆ. ಇಂದು ಸಂಜೆ 6.00 ಗಂಟೆಯಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಯ ಎಪಿಸೋಡ್ ಪ್ರಸಾರವಾಗಲಿದೆ. 117 ದಿನಗಳ ಕಾಲ ಪ್ರಸಾರವಾಗುತ್ತಿದ್ದ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಇನ್ನೂ ಒಂದು ದಿನದಲ್ಲಿ ಮುಕ್ತಾಯಗೊಳ್ಳಲಿದೆ.

publive-image

ಬಿಗ್​ಬಾಸ್​ ಮನೆಯಲ್ಲಿ 6 ಫೈನಲಿಸ್ಟ್​ಗಳು ಉಳಿದುಕೊಂಡಿದ್ದಾರೆ. ಈ 6ರಲ್ಲಿ ಒಬ್ಬರಿಗೆ ಮಾತ್ರ ಬಿಗ್​ಬಾಸ್​ ಟ್ರೋಫಿ ಅವರ ಕೈ ಸೇರಲಿದೆ. ಕನ್ನಡದ ವೀಕ್ಷಕರ ನೆಚ್ಚಿನ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಇಂದಿಗೆ 117 ದಿನಗಳನ್ನು ಕಳೆದಿವೆ. ಈಗಾಗಲೇ ಬಿಗ್​ಬಾಸ್​ ಮನೆಗೆ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಆ 20 ಸ್ಪರ್ಧಿಗಳಲ್ಲಿ ಈಗ ಬಿಗ್​ಬಾಸ್​ ಮನೆಯಲ್ಲಿ 6 ಫೈನಲಿಸ್ಟ್​ಗಳು ಇದ್ದಾರೆ.

ಇದನ್ನೂ ಓದಿ:BiggBoss Finale! ಬಿಗ್​ಬಾಸ್​ ಮೊದಲ ಸೀಸನ್​​ನಿಂದ ಇಲ್ಲಿವರೆಗೆ ಕಪ್ ಗೆದ್ದಿರೋರ ಲಿಸ್ಟ್​

publive-image

ಮೊದಲು ಬಿಗ್​ಬಾಸ್​ ಮನೆಗೆ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳು ಮೊದಲ ಇಬ್ಬರು ಸ್ಪರ್ಧಿಗಳಾದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಗೌತಮಿ ಜಾದವ್​ ಎಮಟ್ರಿ ಕೊಟ್ಟಿದ್ದರು. ಇದಾದ ಬಳಿಕ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಇನ್ನೂ ಈ ಬಾರಿಯ ಬಿಗ್​ಬಾಸ್​ ಹೊಸ ಅಧ್ಯಾಯ ಎಂಬ ಟ್ಯಾಗ್​ ಲೈನ್​ನೊಂದಿಗೆ ಶುರುವಾಗಿತ್ತು.

publive-image

ಬಿಗ್​ಬಾಸ್​ ಶುರುವಿನ ಮೊದಲೇ ಕಿಚ್ಚ ಸುದೀಪ್​ ಸೀಸನ್ 11 ಹೊಸ ಅಧ್ಯಾಯ ಎಂದು ಅನೌನ್ಸ್ ಮಾಡಿದ್ದರು. ಹೊಸ ಅಧ್ಯಾಯ ಅನ್ನೋ ಮಾತಿಗೆ ಸ್ವರ್ಗ, ನರಕವೇ ಸಾಕ್ಷಿಯಾಗಿತ್ತು. ಬಿಗ್​ಬಾಸ್​ ಒಂದೇ ಮನೆಯಲ್ಲಿ ಈ ಬಾರಿ ಎರಡು ಬಾಗಿಲನ್ನು ಹಾಕಲಾಗಿತ್ತು. ಇಲ್ಲೇ ಸ್ವರ್ಗ, ಇಲ್ಲೇ ನರಕ ಅನ್ನೋ ರೀತಿಯಲ್ಲಿ ಬಿಗ್ ಬಾಸ್ ಸೀಸನ್ 11ರ ಮನೆಯನ್ನು ಸಿದ್ಧಪಡಿಸಲಾಗಿತ್ತು. ಬಿಗ್​ಬಾಸ್​ ಮನೆಯಲ್ಲಿ ರಾಜ ವೈಭೋಗದ ಸ್ವರ್ಗವೂ ಇದೆ. ಯಮಲೋಕವನ್ನೇ ಧರೆಗಿಳಿಸುವ ನರಕವೂ ಇಲ್ಲೇ ಇದೆ ಎಂದು ಹೇಳಿದ್ದರು ಕಿಚ್ಚ ಸುದೀಪ್​.

ಇನ್ನೂ, ಮೊದಲು ಬಿಗ್​ಬಾಸ್​ ಮನೆಯ ನರಕಕ್ಕೆ 7 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಸ್ವರ್ಗಕ್ಕೆ 10 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್​ನಲ್ಲಿಯೇ ಬಿಗ್​ಬಾಸ್​ ಹೊಸ ಅಧ್ಯಾಯ ಶುರುವಾಗಿತ್ತು. ಆದ್ರೆ ಇದಾದ ನಾಲ್ಕನೇ ವಾರಕ್ಕೆ ಬಿಗ್​ಬಾಸ್​ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್ ಅನ್ನು ನಿಲ್ಲಿಸಿದ್ದರು. ಅಚ್ಚರಿ ಎಂದರೆ ಈ ಹಿಂದಿನ ಸೀಸನ್​ಗಳಂತೆ ಈ ಬಾರಿಯಲ್ಲೂ ಇಬ್ಬರು ಸ್ಪರ್ಧಿಗಳನ್ನು ಕಿಕ್ ​ಔಟ್ ಮಾಡಲಾಗಿತ್ತು.

publive-image

ಬಿಗ್​ಬಾಸ್​ ಮನೆಗೆ ಸಖತ್​ ಸ್ಟ್ರಾಂಗ್ ಆಗಿ ಎಂಟ್ರಿ ಕೊಟ್ಟಿದ್ದ ಕಿರುತೆರೆ ನಟ ರಂಜಿತ್​ ಬಿಗ್​ಬಾಸ್​ ಮನೆಯಿಂದ ಮೂರನೇ ವಾರಕ್ಕೆ ಆಚೆ ಹಾಕಲಾಗಿತ್ತು. ಸಾಕಷ್ಟು ಕನಸ್ಸನ್ನು ಹೊತ್ತು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ರಂಜಿತ್​ ಲಾಯರ್​ ಜಗದೀಶ್ ಅವರನ್ನು ಜೋರಾಗಿ ತಳ್ಳಿದ್ದರು. ಹೀಗಾಗಿ ಬಿಗ್​ಬಾಸ್ ನಿರ್ಧಾರದ ಮೇಲೆ ​ಲಾಯರ್​ ಜಗದೀಶ್ ಅವರನ್ನು​ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಳಿಕ ಎಲ್ಲರನ್ನು ಮತ್ತೆ ಕರೆದ ಬಿಗ್​ಬಾಸ್​ ನಟ ರಂಜಿತ್ ಅವರನ್ನು ಕೂಡ ಆಚೆ ಕಳುಹಿಸಿದ್ದರು.

ಇದನ್ನೂ ಓದಿ: BBK11: ಶ್ರುತಿ ಬಿಟ್ಟರೆ ಯಾರೂ ಗೆಲ್ಲಲಿಲ್ಲ.. ಬಿಗ್ ಬಾಸ್ ಸೀಸನ್ 3 ರಿಸಲ್ಟ್ ರಿಪೀಟ್ ಆಗುತ್ತಾ?

publive-image

ಇದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಬಿಗ್​ಬಾಸ್ 50ನೇ ದಿನಕ್ಕೆ ಕಾಲಿಟ್ಟ ಬಳಿಕ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅರ್ಧಕ್ಕೆ ವಾಕೌಟ್ ಮಾಡಿದ್ದರು. ನನಗೆ ಇಲ್ಲಿ ಇರೋದಕ್ಕೆ ಆಗುತ್ತಿಲ್ಲ. ವೈಯಕ್ತಿಕ ಸಮಸ್ಯೆಗಳಿಂದ ನನಗೆ ಆಟ ಆಡೋದಕ್ಕೆ ಆಗುತ್ತಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೀಗಾಗಿ ಕಿಚ್ಚ ಸುದೀಪ್​ ಅವರು ಶೋಭಾ ಶೆಟ್ಟಿಯನ್ನು ಬಿಗ್​ಬಾಸ್​ ಮನೆಯಿಂದ ಆಚೆ ಕಳುಹಿಸಿದ್ದರು.

publive-image

ಇದಾದ ಬಳಿಕ ಅಚ್ಚರಿ ಎಂಬಂತೆ ಬಿಗ್​ಬಾಸ್​ ಮನೆಯಿಂದ ಗೋಲ್ಡ್​ ಸುರೇಶ್​ ಆಚೆ ಬಂದಿದ್ದರು. ಆದ್ರೆ ಗೋಲ್ಡ್​ ಸುರೇಶ್​ ಆಚೆ ಬಂದಿದ್ದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಅವರ ತಂದೆ ನಿಧನರಾಗಿದ್ದಾರೆ ಎನ್ನುವ ಮಾತುಗಳು ಹರಿದಾಡಿತ್ತು. ಇದಾದ ಬಳಿಕ ಖುದ್ದು ಗೋಲ್ಡ್​ ಸುರೇಶ್ ಅವರೇ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದರು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನನ್ನ ಪತ್ನಿಗೆ ನನ್ನ ಬ್ಯುಸಿನೆಸ್ ನೋಡಿಕೊಳ್ಳಲು ಹೇಳಿ ಹೋಗಿದ್ದೆ. ನಾನು ನನ್ನದೇ ಆದ ಬ್ಯುಸಿನೆಸ್ ಮಾಡುತ್ತಿದ್ದೇನೆ. ಅದನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆದರೆ ನನ್ನ ಪತ್ನಿಗೆ ಬ್ಯುಸಿನೆಸ್ ಹ್ಯಾಂಡಲ್ ಮಾಡಲು ಆಗಿಲ್ಲ. ಕೆಲಸ ಒತ್ತಡದಿಂದಾಗಿ ಅದು ಅವರಿಂದ ಸಾಧ್ಯವಾಗಿಲ್ಲ. ಅವರಿಗೆ ಗೊಂದಲ ಉಂಟಾಗಿತ್ತು. ಹಾಗಾಗಿ ನಾನು ಹೊರಗೆ ಬಂದು ಅದನ್ನು ನೋಡಿಕೊಳ್ಳಬೇಕಿತ್ತು. ಹಾಗಾಗಿ ಹೊರಗಡೆ ಬರಬೇಕಾಯಿತು ಎಂದು ಸುರೇಶ್ ಹೇಳಿ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದರು.

publive-image

ಇನ್ನುಳಿದಂತೆ 10 ಮಂದಿಯನ್ನು ವೋಟಿಂಗ್ ಆಧಾರದ ಮೇಲೆ ಔಟ್ ಆಗಿದ್ದರು. ಉಳಿದಿರುವ 6 ಸ್ಪರ್ಧಿಗಳಲ್ಲಿ ಯಾರು ಟೈಟಲ್ ಗೆಲ್ಲುತ್ತಾರೆ? ಯಾರು ರನ್ನರ್​ ಅಪ್​​ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಒಟ್ಟಿನಲ್ಲಿ ಇಂದು ಸಂಜೆ 6 ಗಂಟೆಯಿಂದ ಕಲರ್ಸ್​ ಕನ್ನಡದಲ್ಲಿ ಗ್ರ್ಯಾಂಡ್ ಫಿನಾಲೆ ಶುರುವಾಗಲಿದೆ. ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. ಟ್ರೋಫಿ ಗೆದ್ದವರಿಗೆ ಆಕರ್ಷಕ ಟೈಟಲ್​ ಜೊತೆಗೆ 50 ಲಕ್ಷ ನಗದು ಬಹುಮಾನ ಸಿಗಲಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment