Advertisment

ಔಟ್ ಆಫ್ ಸಿಲಬಸ್ ಇಂದು ಅದ್ಧೂರಿ ಬಿಡುಗಡೆ; ಕನ್ನಡ ಸಿನಿಪ್ರಿಯರಿಗೆ ಡಬಲ್ ಧಮಾಕ!

author-image
admin
Updated On
ಔಟ್ ಆಫ್ ಸಿಲಬಸ್ ಇಂದು ಅದ್ಧೂರಿ ಬಿಡುಗಡೆ; ಕನ್ನಡ ಸಿನಿಪ್ರಿಯರಿಗೆ ಡಬಲ್ ಧಮಾಕ!
Advertisment
  • ಒಂದೊಳ್ಳೆ ಕಾಲೇಜ್ ಲವ್ ಸ್ಟೋರಿಯ ಔಟ್ ಆಫ್ ಸಿಲಬಸ್!
  • ಯೋಗರಾಜ್ ಭಟ್ ಕಚಗುಳಿ, ಪ್ರದೀಪ್ ದೊಡ್ಡಯ್ಯ ನಿರ್ದೇಶನ
  • ನಟ ಅಚ್ಯುತ್ ಕುಮಾರ್ ಇಗೋ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಟ್!

ಈ ಪ್ಯಾನ್ ಇಂಡಿಯಾ ಅನ್ನೋ ರೇಸ್ ಮಧ್ಯೆ ಪಕ್ಕಾ ಯೂಥ್ ಫುಲ್ ಲವ್ ಸ್ಟೋರಿಗಳ ಸಂಖ್ಯೆ, ಕನ್ನಡದಲ್ಲಿ ಕಮ್ಮಿ ಆಗಿದ್ದವು. ಬರೀ ಮಾಫಿಯಾ, ಹೊಡಿ-ಬಡಿ ಸಿನಿಮಾಗಳೇ ಹೆಚ್ಚಾಗಿದ್ದವು. ಇದೀಗ, ಈ ಫ್ಯಾಂಟಸಿ ಸ್ಪೀಡ್‌ಗೆ ಬ್ರೇಕ್ ಹಾಕೋ ಒಂದೊಳ್ಳೆ ಕಾಲೇಜ್ ಲವ್ ಸ್ಟೋರಿ ಬರ್ತಿದೆ. ಇಂದು ಔಟ್ ಆಫ್ ಸಿಲಾಬಸ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ.

Advertisment

ಇಂಥದ್ದೊಂದು ಯಂಗ್ ಲವ್ ಪ್ರೇಮಕಥೆ ನೋಡಿ ಎಷ್ಟೋ ಗ್ಯಾಪ್ ಆಗಿತ್ತು.‌ ಈಗ ನೀವ್ ನೋಡ್ತಿರೋ ಸಿನಿಮಾದ ಟೈಟಲ್ ಔಟ್ ಆಫ್ ಸಿಲಾಬಸ್. ಹೆಸರಿಗೆ ತಕ್ಕಂತೆ ಇಲ್ಲಿ ಸಿಲಬಸ್ ಆಚೆಗಿನ ಜೀವನಾನ ತೋರಿಸೋ ಪ್ರಯತ್ನ ಆಗಿದೆ. ಇಲ್ಲಿ ತನಕ ಚಿತ್ರ ತಂಡ ಬಿಟ್ಟಿರೋ ಎಲ್ಲಾ ಕಂಟೆಂಟ್‌ಗಳು ಹಿಟ್ ಆಗಿದ್ದು, ಸಿನಿ ರಸಿಕರನ್ನು ಸೆಳೆಯೋ ಭರವಸೆ ಹುಟ್ಟಿಸಿದೆ. ಅದರಲ್ಲೂ ನಟ ಅಚ್ಯುತ್ ಇಗೋ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಟ್ ಆಗಿದ್ದು, ಸಿನಿಮಾದ ಗಂಭೀರತೆಯನ್ನ ಹೆಚ್ಚಿಸಿದೆ.

publive-image

ಮೋಟಿವೇಷನಲ್ ಸ್ಪೀಕರ್ ಆಗಿ ಕಾಲೇಜು ವಿದ್ಯಾರ್ಥಿಗಳಿಗೆ ತೀರ ಹತ್ತಿರವಾಗಿರೋ, ಪ್ರದೀಪ್ ದೊಡ್ಡಯ್ಯ ಈ ಸಿನಿಮಾದ ನಾಯಕ ಕಂ ಡೈರೆಕ್ಟರ್. ತಾವೇ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಹೊಣೆ ಹೊತ್ತು, ತಮ್ಮ ಕೆಲಸನಾ ಚೊಚ್ಚಲ ಸಿನಿಮಾದಲ್ಲೇ ಪ್ರೂವ್ ಮಾಡಿ ತೋರಿಸಿದ್ದಾರೆ‌. ಪ್ರದೀಪ್ ಮಾತು, ಬೆರವಣಿಗೆ ಮೆಚ್ಚಿರೋ, ಕಾರಣಕ್ಕಾಗಿಯೇ ನಟರಾದ ಅಚ್ಯುತ್ ಕುಮಾರ್, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಈ ಸಿನಿಮಾಗೆ ಕೈ ಜೋಡಿಸಿದ್ದಾರೆ.

publive-image

ಆ್ಯಡ್ 6 ಎಂಟರ್ಟೈನ್ಮೆಂಟ್ ನಿರ್ಮಾಣವಿರೋ ಔಟ್ ಆಫ್ ಸಿಲಾಬಸ್, ಮೇಕಿಂಗ್ ವಿಚಾರದಲ್ಲೂ ಇಂಡಸ್ಟ್ರಿಲಿ ದೊಡ್ಡ ಟಾಕ್ ಕ್ರಿಯೇಟ್ ಮಾಡಿದೆ. ಡಿಸೆಂಬರ್ ತಿಂಗಳೆಂದರೇ ಸಿನಿಮಾ ಇಂಡಿಸ್ಟ್ರಿಗೆ ಲಕ್ಕಿ ಮಂಥ್ ಇತ್ತೀಚೆಗೆ ಬಿಡುಗಡೆ ಆಗಿರೋ ಯುಐ, ಮ್ಯಾಕ್ಸ್ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಈ ಪಟ್ಟಿಗೀಗ ಔಟ್ ಆಫ್ ಸಿಲಾಬಸ್ ಸೇರ್ಪಡೆ ಆಗುತ್ತಿದೆ.

Advertisment

ಇದನ್ನೂ ಓದಿ: ಅಮೆರಿಕಾದಲ್ಲಿ ಶಿವಣ್ಣನ ಆಪರೇಷನ್ ಸಕ್ಸಸ್‌.. ಮಗಳು ನಿವೇದಿತಾ ಭಾವುಕ ಪೋಸ್ಟ್; ಅಭಿಮಾನಿಗಳಿಗೆ ಹೇಳಿದ್ದೇನು? 

publive-image

ಔಟ್ ಆಫ್ ಸಿಲಾಬಸ್ ಸಿನಿಮಾಗೆ ಈಗಾಗಲೇ ದೊಡ್ಡ ಗೆಲುವು ಸಿಕ್ಕಂತಾಗಿದೆ. ಸೌತ್ ಇಂಡಿಯಾದ ಖ್ಯಾತ ಡಿಸ್ಟ್ರಿಬ್ಯೂಟರ್ ಆಗಿರೋ ಗೋಕುಲ್ ಫಿಲಂಸ್ ಈ ಸಿನಿಮಾನ ವಿತರಣೆ ಮಾಡ್ತಿದ್ದು, ತುಂಬಾ ಕಾನ್ಫಿಡೆಂಟ್ ಆಗಿದ್ದಾರೆ. ಇಂದು ಔಟ್ ಆಫ್ ಸಿಲಾಬಸ್ ಸಿನಿಮಾ ರಿಲೀಸ್ ಆಗ್ತಿದ್ದು, ಸಿನಿ ಪ್ರೇಕ್ಷಕರನ್ನು ಸೆಳೆಯೋ ವಿಶ್ವಾಸದಲ್ಲಿದೆ ಚಿತ್ರತಂಡ.

ಜಾಲಿ ಡೇಸ್, ಕಿರಿಕ್ ಪಾರ್ಟಿಯಂತಹ ದಿನಗಳನ್ನು ನೆನಪಿಸೋ ಮಟ್ಟಿಗೆ ಔಟ್ ಆಫ್ ಸಿಲಾಬಸ್‌ ಸಿದ್ಧವಾಗಿದ್ದು, ಬಾಕ್ಸ್ ಆಫೀಸ್ ರೂಲ್ ಮಾಡಲಿ ಅನ್ನೋದು ಸಿನಿರಸಿಕರ ಆಶಯ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment