/newsfirstlive-kannada/media/post_attachments/wp-content/uploads/2025/01/UDP_YAKSHAGANA_2.jpg)
ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಯಕ್ಷಗಾನಕ್ಕೆ ಪೊಲೀಸರ ತಡೆ ಪ್ರಕರಣ ಬಾರಿ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಸ್ಥಳೀಯ ನಾಯಕನ ಕುಮ್ಮಕ್ಕಿಗೆ ಪೊಲೀಸರು ಸೊಪ್ಪು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯಕ್ಷಗಾನ ಮಂಡಳಿಯ ಅಧ್ಯಕ್ಷನ ಮೇಲಿನ ಕೇಸ್ ವಾಪಸ್ ಪಡೆಯದಿದ್ದರೆ ಠಾಣೆಯ ಮುಂದೆ ಯಕ್ಷಗಾನ ಪ್ರದರ್ಶನ, ಭಜನೆ ಮಾಡೋದಾಗಿ ಹಿಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಯಕ್ಷಗಾನ ಕರಾವಳಿಯ ಕಲೆ, ಸಂಸ್ಕೃತಿ. ಅಲ್ಲಿನ ಜನರ ಆಚರಣೆ. ಆದ್ರೆ. ಕರಾವಳಿ ಜನರ ಭಾವನೆಗೆ ಪೊಲೀಸರು ದಕ್ಕೆ ತಂದಿರುವ ಆರೋಪ ಇದೀಗ ಕೇಳಿ ಬಂದಿದೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಯಕ್ಷಗಾನ ಮಂಡಳಿಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಶಿರ್ಲಾಲು ಪಂಚಾಯತ್‌ನ ಮುಂಡ್ಲಿಯಲ್ಲಿ ಸಾರ್ವಜನಿಕರು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು.
ರಾತ್ರಿ ಲವಕುಶ ಮತ್ತು ಜಾಂಬವತಿ ಕಲ್ಯಾಣ ಎಂಬ ಕಥಾಭಾಗದ ಯಕ್ಷಗಾನ ಆಯೋಜಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್‌ನ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಅಡ್ಡಿಪಡಿಸಿದ್ದು, ಪೊಲೀಸರು- ಗ್ರಾಮಸ್ಥರು- ಪೂಜಾ ಸಮಿತಿಯ ಭಕ್ತರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿ ಕಿಶೋರ್ ಆಚರಣೆ ಆಡಂಬರ ನಿಲ್ಲಿಸಿಬಿಡ್ತೇನೆ ಎಂದಂತೆ ಸೇಮ್ ಶಿರ್ಲಾಲಿನಲ್ಲೂ ನಡೆದಿದೆ.
ಶಾಲಾ ಮಕ್ಕಳಿಗೆ, ಕ್ರಿಕೆಟ್ ಆಡುವವರಿಗೆ ಅವಕಾಶ ಕೊಟ್ಟಂತೆ ನಮಗೆ ಕೊಡಿ ಎಂದು ಪೊಲೀಸರನ್ನು ಕೇಳಿದೆ. ಅವರಿಗೆ ಕೊಟ್ಟಂತೆ ನಮಗೂ ಅವಕಾಶ ಕೊಡಿ ಎಂದೆ. ಅದು ನಮಗೆ ಗೊತ್ತಿಲ್ಲದೇ ಕೊಟ್ಟಿದ್ದು ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ನಮಗೂ ಕೂಡ ಗೊತ್ತಿಲ್ಲದಂತೆ ಕೊಡಿ ನೀವು ಎಂದರೂ ಅವರು ನಮಗೆ ಅವಕಾಶ ಕೊಡಲಿಲ್ಲ.
ಸಂಜೀವ ಶೆಟ್ಟಿ, ಸತ್ಯನಾರಾಯಣ ಪೂಜಾ ಮಂಡಳಿ ಮುಖಂಡ
20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ತಂಡ ಕಳೆದ ಒಂದು ವರ್ಷದಿಂದ ಯಕ್ಷಗಾನದ ಹೆಜ್ಜೆ, ಪ್ರಸಂಗದ ತಯಾರಿಯನ್ನ ಮಾಡಿಕೊಂಡಿದ್ದರು. ಕಾರ್ಯಕ್ರಮಕ್ಕೆ ಪರವಾನಿಗೆ ಪಡೆಯಲು ಹೋದಾಗ ಪಿಡಿಒ 3 ದಿನ ರಜೆಯಲ್ಲಿದ್ದರು. ಪೊಲೀಸರು ಪಂಚಾಯತ್ ಪರವಾನಗಿಗೆ ಇಲ್ಲದೆ ಮೈಕ್ ಪರ್ಮಿಷನ್ ನಿರಾಕರಿಸಿದ್ದರು. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂಬುದು ಗ್ರಾಮಸ್ಥರ ಆರೋಪ.
‘ತುಳುನಾಡ ಆಚರಣೆಗೆ ಪೆಟ್ಟು’
ತುಳುನಾಡಿನ ಆಚರಣೆ ವಿರುದ್ಧ ಇದು ಬಲವಾದ ಪೆಟ್ಟು ಆಗಿದೆ. ಇದು ಕೇವಲ ಒಂದು ಗ್ರಾಮಕ್ಕೆ ಅಲ್ಲ, ಉಡುಪಿ ಹಾಗೂ ದಕ್ಷಿಣ ಕರ್ನಾಟಕ ಜನರಿಗೆ ಇದು ಪೆಟ್ಟಾಗಿದೆ. ಈ ರೀತಿ ಸಮಸ್ಯೆಗಳು ಉದ್ಭವಿಸುತ್ತಾವೆ.
ಸದಾನಂದ ಸಾಲ್ಯಾನ್, ಮೇಳದ ಅಧ್ಯಕ್ಷ
ಇದನ್ನೂ ಓದಿ: ಇನ್ಫೋಸಿಸ್ ಸಂಸ್ಥೆಯಿಂದ ಗುಡ್ನ್ಯೂಸ್.. 20,000ಕ್ಕೂ ಹೆಚ್ಚು ಹೊಸಬರ ನೇಮಕಾತಿ, ಯಾವಾಗ?
ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಅಧ್ಯಕ್ಷರು ಸೌಂಡ್ಸ್‌ನ ಮಾಲಿಕ ಅಪ್ಪು ಮೇಲೆ ಅನುಮತಿ ಇಲ್ಲದೇ ಕಾರ್ಯಕ್ರಮ ಆಯೋಜನೆ ಆರೋಪದಲ್ಲಿ ಕೇಸ್ ದಾಖಲಾಗಿದೆ. ಇದೀಗ ದಾಖಲಾಗಿರೋ ಕೇಸ್‌ನ ವಾಪಸ್ ಪಡೆಯದಿದ್ದರೆ ಅಜೆಕಾರು ಪೊಲೀಸ್ ಠಾಣೆ ಮುಂದೆ ಯಕ್ಷಗಾನ ಪ್ರದರ್ಶನ, ಭಜನೆಯ ಮೂಲಕ ಪ್ರತಿಭಟನೆ ಮಾಡುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ. ಇನ್ನು ಈ ಪ್ರಕರಣದ ಬಗ್ಗೆ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನಕ್ಕೆ ಆರಾಧನಾ ಕಲೆಯೆಂದು ಕರಾವಳಿಯಲ್ಲಿ ಮಾನ್ಯತೆಯಿದೆ. ಪರವಾನಿಗೆ ನೆಪದಲ್ಲಿ ಗ್ರಾಮಸ್ಥರನ್ನು ಒಡೆದು ಆಳುವುದು. ಕೆಟ್ಟ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಅನ್ನೋದು ಕರಾವಳಿ ಜನರ ಆರೋಪ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ