ಸ್ಪಷ್ಟನೆ ಕೊಟ್ಟು ಮತ್ತೆ ಕಿಡಿ ಹೆಚ್ಚಿಸಿದ್ರಾ ಸ್ಟಾರ್​ ಸಿಂಗರ್​.. ಸೋನು ನಿಗಮ್ ವಿರುದ್ಧ ಮುಂದುವರೆದ ಆಕ್ರೋಶ!

author-image
Veena Gangani
Updated On
ಸ್ಪಷ್ಟನೆ ಕೊಟ್ಟು ಮತ್ತೆ ಕಿಡಿ ಹೆಚ್ಚಿಸಿದ್ರಾ ಸ್ಟಾರ್​ ಸಿಂಗರ್​.. ಸೋನು ನಿಗಮ್ ವಿರುದ್ಧ ಮುಂದುವರೆದ ಆಕ್ರೋಶ!
Advertisment
  • ಗಾಯಕ ಸೋನು ನಿಗಮ್ ವಿರುದ್ಧ ಎಫ್​ಐಆರ್​ ದಾಖಲು
  • ಸೋನು ನಿಗಮ್ ಬಂಧನಕ್ಕೆ ಒತ್ತಾಯಿಸಿ ನಾಳೆ ಪ್ರತಿಭಟನೆ
  • ಸ್ಪಷ್ಟನೆ ಕೊಟ್ಟು ಮತ್ತೆ ಕಿಡಿ ಹೆಚ್ಚಿಸಿದ್ರಾ ಬಾಲಿವುಡ್ ಗಾಯಕ?

ಬೆಂಗಳೂರು: ಯಾರೇ ಆಗಲಿ ಕನ್ನಡ ನಾಡು, ನುಡಿ ವಿಚಾರಕ್ಕೆ ಬಂದರೇ ಕನ್ನಡಿಗರು ಸುಮ್ಮನೆ ಇರೋದಿಲ್ಲ. ಅವರಿಗೆ ತಕ್ಕ ಪಾಠ ಕಲಿಸದೇ ಬಿಡೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಖ್ಯಾತ ಗಾಯಕ ಸೋನು ನಿಗಮ್ ಕನ್ನಡ ಹಾಡುಗಳ ಬಗ್ಗೆ, ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಲೇ ವಿವಾದಾತ್ಮಕವಾಗಿ ಹೇಳಿಕೆ ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ.

ಇದನ್ನೂ ಓದಿ:ಕನ್ನಡ.. ಕನ್ನಡ.. ಕನ್ನಡಿಗರ ಆಕ್ರೋಶದ ಬಳಿಕ ಸ್ಪಷ್ಟನೆ ಕೊಟ್ಟ ಗಾಯಕ ಸೋನು ನಿಗಮ್‌; ಹೇಳಿದ್ದೇನು?

ಹೀಗಾಗಿ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸೋನು ನಿಗಮ್ ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ​ ಪ್ರತಿಕ್ರಿಯಿಸಿ ನಾನು ಭಾಷೆಗೆ ಅವಮಾನ ಮಾಡಿಲ್ಲ ಎಂದು ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಂಡಿದ್ದಾರೆ. ಆದ್ರೆ ಸೋನು ನಿಗಮ್ ಕೊಟ್ಟ ಸ್ಪಷ್ಟೀಕರಣವನ್ನು ಕನ್ನಡಿಗರು ಒಪ್ಪುತ್ತಿಲ್ಲ. ಪೆಹಲ್ಗಾಮ್ ದಾಳಿಗೂ ಕನ್ನಡಾಭಿಮಾನಕ್ಕೂ ಏನ್ ಸಂಬಂಧ ಅಂತ ಅಂತ ಸೋಷಿಯಲ್​ ಮೀಡಿಯಾದಲ್ಲಿ ಕನ್ನಡಿಗರು ಕೆಂಡ ಕಾರುತ್ತಿದ್ದಾರೆ.

ಇದನ್ನೂ ಓದಿ: ಹೆರಿಗೆ ಬಳಿಕ ಕೂದಲು ಉದುರುತ್ತಿದೆಯೇ? ಹಾಗಾದ್ರೆ ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿ!

publive-image

ಜನ ಅಗ್ರೆಸ್ಸಿವ್ ಆಗಿ ನಡೆದುಕೊಂಡ್ರು ಅನ್ನೋದಾದರೇ ಇಡೀ ಕನ್ನಡಿಗರನ್ನ ಎಳೆದು ತಂದಿದ್ದು ಯಾಕೆ? ಪಹಲ್ಗಾಮ್​ನಲ್ಲಿ ಭಯೋತ್ಪಾದಕರ ದಾಳಿಗೂ... ಇಲ್ಲಿ ಕನ್ನಡ...‌ ಕನ್ನಡ ಎಂದು ಕೂಗಿದ್ದಕ್ಕೂ ಏನು ಸಂಬಂಧ? ಸೋನು ನಿಗಮ್​ಗೆ ತಲೆ ಕೆಟ್ಟಿದೆ, ಹಾಡು ಹಾಡಿ ಎಂದವರನ್ನ ಗೂಂಡಾಗಳು ಅಂತೀರಾ? ಎಂದು ಕಾಮೆಂಟ್ಸ್​ ಹಾಕುವ ಮೂಲಕ ಕೆಂಡ ಕಾರುತ್ತಿದ್ದಾರೆ.

publive-image

ಸೋನು ನಿಗಮ್ ವಿರುದ್ಧ ಎಫ್​ಐಆರ್​ ದಾಖಲು

ಅಷ್ಟೇ ಅಲ್ಲದೇ, ಈಗಾಗಲೇ​ ಕನ್ನಡಕ್ಕೆ ಅವಮಾನ ವಿಚಾರಕ್ಕೆ ಸಂಬಂಧಿಸಿದಂತೆ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ನೊಟೀಸ್ ಕೊಡೋದಕ್ಕೆ ಪೊಲೀಸರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೆ ಆ ಮಾತನ್ನು ಹೇಳಿದ್ದೀರಿ? ಪಹಲ್ಗಾಮ್ ದಾಳಿಗೂ, ಕನ್ನಡಕ್ಕೂ ಏನು ಸಂಬಂಧ? ಕನ್ನಡಕ್ಕೆ ಧಕ್ಕೆ ಬರುವ‌ ರೀತಿ ಮಾತನಾಡೋದಕ್ಕೆ ಯಾರಾದ್ರೂ ಪ್ರಚೋದನೆ ನೀಡಿದ್ರಾ? ಹೀಗೆ‌ ಅನೇಕ‌ ಪ್ರಶ್ನೆಗಳನ್ನು ಕೇಳಲು ಪೊಲೀಸರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

publive-image

ಸೋನು ನಿಗಮ್ ಬಂಧನಕ್ಕೆ ಒತ್ತಾಯಿಸಿ ನಾಳೆ ಪ್ರತಿಭಟನೆ

ಶೀಘ್ರವೇ ಸೋನು ನಿಗಮ್ ಬಂಧಿಸುವಂತೆ ಒತ್ತಾಯಿಸಿ ನಾಳೆ ನೂರಾರು ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡೋದಕ್ಕೆ ಮುಂದಾಗಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಕರವೇ ನಾರಾಯಣ ಗೌಡ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment