/newsfirstlive-kannada/media/post_attachments/wp-content/uploads/2025/07/WOMANS_AI.jpg)
ಮುಂಬೈ: ಯುವತಿ ಹಾಗೂ ಮಹಿಳೆಯರಿಗಾಗಿ ಇರುವ ಸರ್ಕಾರದ ಯೋಜನೆಯಡಿ 14 ಸಾವಿರ ಪುರುಷರು ಹೆಸರು ನೋಂದಾಯಿಸಿಕೊಂಡು ಮಾಸಿಕ 1500 ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.
ಮಹಾರಾಷ್ಟ್ರದಲ್ಲಿ ಲಡ್ಕಿ ಬಹಿನ ಯೋಜನೆ (Ladki Bahin Yojana) ಯನ್ನು 2024ರಲ್ಲಿ ಜಾರಿ ಮಾಡಲಾಗಿತ್ತು. ಈ ಯೋಜನೆ ಅಡಿ 21 ರಿಂದ 65 ವರ್ಷದ ಹೆಣ್ಣುಮಕ್ಕಳಿಗೆ ತಿಂಗಳಿಗೆ 1500 ರೂಪಾಯಿ ನೀಡಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದಂತಹ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಮಹಿಳೆಯರಿಗೆ ಈ ಯೋಜನೆಯಡಿ ಸರ್ಕಾರ ಮಾಸಿಕವಾಗಿ ಹಣ ನೀಡುತ್ತದೆ. ಇದೇ ಯೋಜನೆ ಎಲೆಕ್ಷನ್ನಲ್ಲಿ ಗೆಲುವು ಪಡೆಯಲು ಸಹಾಯಕವಾಗಿತ್ತು ಎನ್ನಲಾಗಿತ್ತು.
ಆದರೆ ಈ ಯೋಜನೆಯಡಿ ಸುಮಾರು 14 ಸಾವಿರ ಪುರುಷರು ತಮ್ಮ ಹೆಸರು ನೋಂದಣಿ ಮಾಡಿಕೊಂಡು ಸರ್ಕಾರದಿಂದ ತಿಂಗಳ..ತಿಂಗಳ 1500 ರೂಪಾಯಿ ಪಡೆದಿದ್ದಾರೆ. ಸರ್ಕಾರ ಈ ಯೋಜನೆ ಪ್ರಾರಂಭ ಮಾಡಿದ ಮೇಲೆ 10 ತಿಂಗಳ ನಂತರ ಪುರುಷರು ಆನ್ಲೈನ್ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 14,298 ಪುರುಷರು ತಮ್ಮ ಹೆಸರನ್ನು ಮಹಿಳಾ ಫಲಾನುಭವಿಗಳಾಗಿ ನೋಂದಾಯಿಸಿಕೊಂಡು 21.44 ಕೋಟಿ ರೂಪಾಯಿ ಮೋಸದಿಂದ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:‘ನಾನಂತೂ ಯಾವ ನನ್ಮಗನಿಗೂ ಹೆದರಲ್ಲ’.. ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಕಿಡಿ..ಕಿಡಿ!
ಯೋಜನೆಯಲ್ಲಿ ಪುರುಷರು ಸೇರಿರುವುದು ಸಮಸ್ಯೆ ಸೃಷ್ಟಿಸಿರುವುದು ಒಂದು ಭಾಗವಾದರೆ, ಇರದಲ್ಲಿ ಅನರ್ಹರು ಕೂಡ ಸೇರಿಕೊಂಡು ಹಣ ಪಡೆದುಕೊಂಡಿದ್ದಾರೆ. ಇದರಿಂದ ಒಂದೇ ವರ್ಷದಲ್ಲಿ ಸುಮಾರು 1,640 ಕೋಟಿ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಬಡ ಮಹಿಳೆಯರಿಗಾಗಿ ಇರುವ ಯೋಜನೆ ಫಲವನ್ನು ಪುರುಷರು ಪಡೆದುಕೊಂಡಿರುವುದು ಯಾಕೆ ಎಂದು ತಿಳಿದು ಬಂದಿಲ್ಲ. ಆದರೆ ಯಾರು ಯಾರು ಈ ಯೋಜನೆಯಿಂದ ಹಣ ಪಡೆದಿದ್ದರೋ ಆ ಹಣ ವಾಪಸ್ ಪಡೆಯಲಾಗುವುದು. ಅಲ್ಲದೇ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವರ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ