ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳಕ್ಕೆ ಭಕ್ತಕೋಟಿ; ಹೇಗಿದೆ ವಿಶೇಷ ರೈಲುಗಳ ವ್ಯವಸ್ಥೆ?

author-image
Gopal Kulkarni
Updated On
ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳಕ್ಕೆ ಭಕ್ತಕೋಟಿ; ಹೇಗಿದೆ ವಿಶೇಷ ರೈಲುಗಳ ವ್ಯವಸ್ಥೆ?
Advertisment
  • ಅಮಾವಾಸ್ಯೆ ದಿನ ಪ್ರಯಾಗರಾಜ್​ಗೆ ಎಷ್ಟು ವಿಶೇಷ ರೈಲುಗಳ ವ್ಯವಸ್ಥೆ ಇದೆ?
  • ಪ್ರತಿ 4 ನಿಮಿಷಕ್ಕೊಂದರಂತೆ ಪ್ರಯಾಗ್​ರಾಜ್​ನಿಂದ ವಿಶೇಷ ರೈಲು
  • ಪ್ರಯಾಗರಾಜ್ ರೈಲ್ವೆ ಡಿವಿಜನ್ ಮಾಡಿಕೊಂಡ ವ್ಯವಸ್ಥೆ ಹೇಗಿದೆ ಗೊತ್ತಾ?

ಜನವರಿ 29 ರಂದು ಮೌನಿ ಅಮವಾಸ್ಯೆ ಇದೆ. ಈ ಅಮಾವಾಸ್ಯೆಯಂದು ಗಂಗಾಸ್ನಾನ ಅಂತ್ಯಂತ ಪವಿತ್ರ ಎಂದೇ ಹೇಳಲಾಗುತ್ತದೆ. ಈಗಾಗಲೇ ಪ್ರಯಾಗರಾಜ್​​ನಲ್ಲಿ ಕುಂಭಮೇಳದ ಮಹೋತ್ಸವ ಜೋರಾಗಿಯೇ ನಡೆಯುತ್ತಿದೆ ನಿತ್ಯವೂ ಕೋಟ್ಯಾಂತರ ಭಕ್ತರು ಗಂಗೆಯಲ್ಲಿ ಮಿಂದೆದ್ದು ಪಾವನರಾಗುತ್ತಿದ್ದಾರೆ. ಭಕ್ತರಿಗಾಗಿಯೇ ಸಾಕಷ್ಟು ಟ್ರೇನ್​ಗಳ ವ್ಯವಸ್ಥೆ ಮಾಡಲಾಗಿದೆ.

ಇಷ್ಟು ದಿನ ಮೌನಿ ಅಮವಾಸ್ಯೆಯಂದು ಹೆಚ್ಚವರಿಯಾಗಿ ಸುಮಾರು 5 ಕೋಟಿ ಭಕ್ತರ ದೇಶಾದ್ಯಂತದಿಂದ ಬರುವ ನಿರೀಕ್ಷೆಯಿತ್ತು. ಆದ್ರೆ ಮಹಾಕುಂಭಮೇಳಕ್ಕೆ ಹರಿದು ಬರುತ್ತಿರುವ ಜನಸಾಗರವನ್ನು ನೋಡಿದರೆ ಮೌನಿ ಅಮವಾಸ್ಯೆಯಂದು ಪ್ರಯಾಗ್​ರಾಜ್​ಗೆ ಸುಮಾರು 10 ಕೋಟಿ ಭಕ್ತರು ಬರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಈ 10 ಕೋಟಿ ಭಕ್ತರದಲ್ಲಿ ಶೇಕಡಾ 10 ರಿಂದ 20 ರಷ್ಟು ಭಕ್ತಾದಿಗಳು ರೈಲು ಮಾರ್ಗದ ಮೂಲಕವೇ ಬರಲಿದ್ದಾರೆ ಹೀಗಾಗಿಯೇ ರೈಲ್ವೆ ಇಲಾಖೆ ಪ್ರಯಾಗ್​ರಾಜ್​ಗೆ 150 ಹೆಚ್ಚುವರಿ ವಿಶೇಷ ರೈಲುಗಳನ್ನು ಬಿಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಇದನ್ನೂ ಓದಿ:ವೈರಲ್ ಹುಡುಗಿಯ ಬಡತನದ ಬದುಕು.. ಒಂದೇ ಕೋಣೆಯ ಮನೆ.. ಹೇಗಿದೆ ಜೀವನ..?

ಪ್ರಯಾಗರಾಜ್​​ನ ರೈಲ್ವೆ ಡಿವಿಜನ್​​ನ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಮಾಳವಿಯಾ ಅವರು ಹೇಳುವ ಪ್ರಕಾರ ಒಟ್ಟು 150 ವಿಶೇಷ ರೈಲುಗಳು ಮೌನಿ ಅಮವಾಸ್ಯೆಯ ದಿನದಂದು ಸಂಚರಿಸಲಿವೆ. ಅವುಗಳು ಅತಿಹೆಚ್ಚು ಪ್ರಯಾಗರಾಜ್ ಜಂಕ್ಷನ್​ಗೆ ಪ್ರಯಾಣ ಬೆಳೆಸುತ್ತವೆ ಎಂದು ಹೇಳಿದ್ದಾರೆ. ದಿನನಿತ್ಯದ ರೈಲು ಓಡಾಟಗಳ ಜೊತೆಗೆಯೇ ಈ ವಿಶೇಷ ರೈಲುಗಳನ್ನು ಸಹ ಓಡಿಸಲಾಗುವುದು ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.

ಇನ್ನು ಅಮಿತ್ ಹೇಳುವ ಪ್ರಕಾರ ಒಂದೇ ದಿನದಂದು ಸುಮಾರು 150 ವಿಶೇಷ ರೈಲುಗಳ ಓಡಾಟು ನಡೆಸುತ್ತಿರುವುದು ಇದೊಂದು ಹೊಸ ಮೈಲಿಗಲ್ಲು 2019ರಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ ಮೌನಿ ಅಮವಾಸ್ಯೆ ದಿನದಂದು ಸುಮಾರು 85 ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಬಾರಿ ಅದರ ಸಂಖ್ಯೆ ದ್ವಿಗುಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಯಾಗ್‌ರಾಜ್‌ನಲ್ಲಿ ಕ್ಯಾಬಿನೆಟ್ ಸಭೆ; ಸಿಎಂ ಯೋಗಿ ಮೇಲೆ ಇವತ್ತು ಇಡೀ ದೇಶದ ಕಣ್ಣು!

ಪ್ರಯಾಗರಾಜ್ ಜಂಕ್ಷನ್​ನಿಂದ ಪ್ರತಿ 4 ನಿಮಿಷಕ್ಕೊಂದು ರೈಲು ಓಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ದಾಖಲೆ ಮಟ್ಟದ ಭಕ್ತಾದಿಗಳನ್ನು ಸ್ವಾಗತಿಸಲು ರೈಲ್ವೆ ಇಲಾಖೆ ಸಂಪೂರ್ಣ ಸಜ್ಜಾಗಿದೆ. ಮಕರ ಸಂಕ್ರಾಂತಿ ದಿನದಂದ 101 ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಂದು ಕೂಡು ಕೋಟ್ಯಾಂತರ ಭಕ್ತರು ರೈಲು ವ್ಯವಸ್ಥೆಯ ಅನುಕೂಲ ಪಡೆದಿದ್ದರು. ಮೌನಿ ಅಮವಾಸ್ಯೆ ಆ ಎಲ್ಲಾ ದಾಖಲೆಗಳನ್ನು ಮುರಿದು ಹಾಕಲಿದೆ ಎಂದು ಮಾಳವಿಯಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment