/newsfirstlive-kannada/media/post_attachments/wp-content/uploads/2024/12/AYYAPPA_TEMPLE.jpg)
ತಿರುವನಂತಪುರ: ಪ್ರಸಿದ್ಧ ಧಾರ್ಮಿಕ ಸ್ಥಳ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಯಲಕ್ಕೆ ಕೇವಲ 29 ದಿನಗಳಲ್ಲಿ 163.89 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಮಂಡಳಿಯ ಅಧ್ಯಕ್ಷ ಪಿ.ಎಸ್ ಪ್ರಶಾಂತ್ ತಿಳಿಸಿದ್ದಾರೆ.
ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಯಲಕ್ಕೆ ಡಿಸೆಂಬರ್ 14ರವರೆಗೆ 22 ಲಕ್ಷ ಅಯ್ಯಪ್ಪ ಸ್ವಾಮಿ ಭಕ್ತರು ಭೇಟಿ ನೀಡಿದ್ದಾರೆ. ಕೇವಲ 29 ದಿನಗಳಲ್ಲಿ ಇಷ್ಟೊಂದು ಭಕ್ತರು ಭೇಟಿ ನೀಡಿದ್ದಾರೆ. ಇದು ಕಳೆದ ಬಾರಿಗೆ ಹೋಲಿಸಿದರೆ 4.51 ಲಕ್ಷ ಅಧಿಕ ಭಕ್ತರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಮಿಸೆಸ್ ಅರ್ಥ್ ಕಿರೀಟ ಮುಡಿಗೇರಿಸಿಕೊಂಡ ಡಾ.ಶೃತಿ ಬಲ್ಲಾಳ್.. ಉಡುಪಿಯ ವೈದ್ಯೆಗೆ ಪ್ರತಿಷ್ಠಿತ ಗರಿ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ತಿರುವಾಂಕೂರು ದೇವಾಲಯ ಮಂಡಳಿಯ ಅಧ್ಯಕ್ಷ ಪಿ.ಎಸ್ ಪ್ರಶಾಂತ್ ಅವರು, ದೇವಾಸ್ಥಾನದ ವರಮಾನವನ್ನು ಕಳೆದ ಬಾರಿಗೆ ಹೋಲಿಸಿದರೆ 22.76 ಕೋಟಿ ರೂಪಾಯಿಗಳು ಹೆಚ್ಚಾಗಿದೆ. ಕೇವಲ 29 ದಿನಗಳಲ್ಲಿ ಒಟ್ಟು 22,67,956 ಭಕ್ತರು ಭೇಟಿ ನೀಡಿದ್ದಾರೆ. ಈ ಭಕ್ತರಿಂದ ಒಟ್ಟು 163.89 ಕೋಟಿ ಆದಾಯ ದೇವಾಲಯಕ್ಕೆ ಬಂದಿದೆ. ಇದರಲ್ಲಿ ಪ್ರಸಾದ ಮಾರಾಟದಿಂದಲೇ 82.67 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅವರು ಹೇಳಿದ್ದಾರೆ.
ಯಾತ್ರಾರ್ಥಿಗಳಿಗೆ ಸುಗಮ ದರ್ಶನವಾಗಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿತ್ತು. ದೇವಸ್ವಂ ಮಂಡಳಿಯೊಂದಿಗೆ ಸಹಕರಿಸಿದ ಪೊಲೀಸರು ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಶಾಂತ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ