/newsfirstlive-kannada/media/post_attachments/wp-content/uploads/2025/06/PURI_JAGANNATH.jpg)
ಐತಿಹಾಸಿಕ ಒಡಿಶಾದ ಪುರಿ ಜಗನ್ನಾಥ ಯಾತ್ರೆಯ ಸಂಭ್ರಮ ಮನೆ ಮಾಡಿದೆ. 1878ರಿಂದಲೂ ಪ್ರತಿವರ್ಷ ಜರುಗುತ್ತಿರುವ ರಥೋತ್ಸವ ನಿನ್ನೆಯಿಂದ ಆರಂಭವಾಗಿದೆ. ಲಕ್ಷಾಂತರ ಭಕ್ತರು ಸೇರುವ ರಥಯಾತ್ರೆಯಲ್ಲಿ ಹಲವಾರು ಭಕ್ತರಿಗೆ ತೊಂದರೆ ಆಗಿದೆ. 600ಕ್ಕೂ ಹೆಚ್ಚು ಪುರಿ ಜಗನ್ನಾಥನ ಭಕ್ತರು ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಒಡಿಶಾದ ಪುರಾಣಪ್ರಸಿದ್ಧ ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಸಂಭವಿಸಿರುವ ಭೀಕರ ಕಾಲ್ತುಳಿತದಿಂದ ಹಲವಾರು ಜನರು ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಜಗನ್ನಾಥ ಯಾತ್ರೆಯ ಮೊದಲ ದಿನದ ರಥಯಾತ್ರೆ ಕಣ್ತುಂಬಿಕೊಳ್ಳಲು ದೇಶ- ವಿದೇಶಗಳ ಲಕ್ಷಾಂತರ ಭಕ್ತರು ಸೇರಿದ್ದ ವೇಳೆ ಕಾಲ್ತುಳಿತ ಸಂಭವಿಸಿದೆ.
/newsfirstlive-kannada/media/post_attachments/wp-content/uploads/2025/06/PURI_JAGANNATH_1.jpg)
ತಾಳಧ್ವಜ ರಥ ಎಳೆಯುವ ಕಾಲ್ತುಳಿತ
- ಗಜಪತಿ ದೊರೆಯ ಅರಮನೆ ಶ್ರೀ ನಹರ್ ಬಳಿ ಕಾಲ್ತುಳಿತ
- ಭಗವಾನ್ ಬಲಭದ್ರನ ರಥ ಎಳೆಯಲು ಮುಂದಾದ ಭಕ್ತರು
- ತಾಳಧ್ವಜ ರಥದ ಪವಿತ್ರ ಹಗ್ಗಗಳನ್ನು ಹಿಡಿಯಲು ಜನದಟ್ಟಣೆ
- ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತ
- ಭಕ್ತರು ಏಕಾಏಕಿ ನುಗ್ಗಿ ಬಂದಿದ್ದರಿಂದ ಸಂಭವಿಸಿದ ಕಾಲ್ತುಳಿತ
- 600ಕ್ಕೂ ಅಧಿಕ ಭಕ್ತರು ಅಸ್ವಸ್ಥ, 50ಕ್ಕೂ ಹೆಚ್ಚು ಭಕ್ತರು ಗಂಭೀರ
- ಹಲವು ಭಕ್ತರಿಗೆ ಸಣ್ಣಪುಟ್ಟ ಗಾಯ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಇನ್ನು ರಥಯಾತ್ರೆಯಲ್ಲಿ ಗಾಯಗೊಂಡ 600ಕ್ಕೂ ಹೆಚ್ಚು ಭಕ್ತರನ್ನು ಚಿಕಿತ್ಸೆಗಾಗಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 173 ಜನರನ್ನು ಹೈ ಡಿಪೆಂಡೆನ್ಸಿ ಯೂನಿಟ್​​ಗೆ ದಾಖಲಿಸಲಾಗಿದ್ದು, 68 ಜನರಿಗೆ ಒಪಿಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಿತಿ ಗಂಭೀರವಾಗಿದ್ದ 10 ಭಕ್ತರನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಾರ ಜನಸಂದಣಿ ನಿರ್ವಹಿಸಲು ಹಾಗೂ ಭದ್ರತೆ ವಹಿಸಲು CAPF ಸೇರಿದಂತೆ 10 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಉಸಿರು ಚೆಲ್ಲಿದ ಬೆನ್ನಲ್ಲೇ ಕಣ್ಮುಚ್ಚಿದ ಮತ್ತೊಂದು ಹುಲಿ
/newsfirstlive-kannada/media/post_attachments/wp-content/uploads/2025/06/PURI_JAGANNATH_2.jpg)
ತಪ್ಪಿದ ದೊಡ್ಡ ಅನಾಹುತ
ಇತ್ತ ಗುಜರಾತ್‌ನ ಪುರಿಜಗನ್ನಾಥ ಯಾತ್ರೆ ವೇಳೆಯೂ ಅವಘಡ ಸಂಭವಿಸಿದೆ. ರಥಯಾತ್ರೆ ವೇಳೆ ಕಂಟ್ರೋಲ್ ತಪ್ಪಿದ ಆನೆಗಳು ಜನರತ್ತ ಅಡ್ಡಾದಿಡ್ಡಿ ಓಡಿವೆ. ಇದ್ರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಹರಸಾಹಸ ಪಟ್ಟು ಮಾವುತರು ಆನೆಗಳನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ದೊಡ್ಡ ಅನಾಹುತ ತಪ್ಪಿದೆ.
ಒಡಿಶಾದ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಒಟ್ಟು 9 ದಿನಗಳ ಕಾಲ ಉತ್ಸವ ನಡೆಯಲಿದೆ. ಸಾಮಾನ್ಯವಾಗಿ ವಾರ್ಷಿಕ ರಥಯಾತ್ರೆ ಸಂದರ್ಭದಲ್ಲಿ ಊಹೆಗೂ ನಿಲುಕದಂತೆ ಭಕ್ತಸಮೂಹ ಸೇರಲಿದ್ದು ಭಕ್ತರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಪ್ರತಿ ವರ್ಷವೂ ಅವಘಡಗಳು ನಡೆಯುತ್ತಲೇ ಇದ್ದು ಕಳವಳ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us