/newsfirstlive-kannada/media/post_attachments/wp-content/uploads/2024/06/Marriage.jpg)
ಮದುವೆ ಎಂದರೆ ಜೀವನದ ಪ್ರಮುಖ ಕಾಲಘಟ್ಟ. ತಮ್ಮ ಹೊಸ ಜೀವನಕ್ಕೆ ಎರಡು ಜೀವಗಳು ಕಾಲಿಟ್ಟು ಹೊಸ ಬದುಕು ಕಟ್ಟಿಕೊಳ್ಳುವ ಒಂದು ಸಂಭ್ರಮೋತ್ಸವ. ಇಂತಹ ಸಂಭ್ರಮದಲ್ಲಿ ವ್ಯವಸ್ಥೆಗಳು ಒಂದೊಂದು ಸಾರಿ ಕೈಕೊಡತ್ತುವೆ. ಒಂದು ಹೆಚ್ಚು ಒಂದು ಕಡಿಮೆ ಆಗೋದು ಸಾಮಾನ್ಯ. ಅದನ್ನು ಹೆಣ್ಣಿನ ಕಡೆಯವರು, ಗಂಡಿನ ಕಡೆಯವರು ಹೊಂದಾಣಿಕೆ ಮಾಡಿಕೊಂಡು ಮದುವೆಯೊಂದು ಸಾಂಗವಾಗಿ ನೇರವೇರಿದರೆ ಸಾಕು ಎಂಬ ಮನಸ್ಥಿತಿಯಲ್ಲಿಯೇ ಮುಗಿಸಿ ಬಿಡುತ್ತಾರೆ. ಆದ್ರೆ ಯುಪಿಯಲ್ಲೊಬ್ಬ ವರ ಊಟ ಬಡಿಸುವುದು ಲೇಟಾಗಿದ್ದಕ್ಕೆ ಮದುವೆಯನ್ನೇ ನಿಲ್ಲಿಸಿ, ಮದುವೆಯಾಗಲು ಸಜ್ಜಾಗಿದ್ದ ಯುವತಿಯನ್ನು ಬಿಟ್ಟು ಅದೇ ದಿನ ಸೋದರ ಸಂಬಂಧಿಯೊಬ್ಬಳ ಕೈ ಹಿಡಿದ್ದಾನೆ
ವರನ ಈ ಹುಚ್ಚಾಟಕ್ಕೆ ನೊಂದ ವಧು ಹಾಗೂ ಮನೆಯವರು ನಮಗೆ ನ್ಯಾಯ ಬೇಕು ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಅದು ಅಲ್ಲದೇ ವರನಿಗೆ ನಾವು ಮದುವೆಗೂ ಮುನ್ನವೇ 1.5 ಲಕ್ಷ ರೂಪಾಯಿ ನೀಡಿದ್ದಾಗಿ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ವಧು. ನನ್ನ ಮದುವೆ ಮೆಹ್ತಾಬ್ ಎಂಬ ವ್ಯಕ್ತಿಯ ಜೊತೆ ಏಳು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಡಿಸೆಂಬರ್ 22 ರಂದು ಮದುವೆ ನಡೆಯುತ್ತಿತ್ತು. ಡಿಸೆಂಬರ್ 22ರಂದು ನನ್ನ ಊರಾದ ಹಮಿದ್​​ಪುರದಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳು ಆರಂಭಗೊಂಡಿದ್ದವು ಮೆಹ್ತಾಬ್ ಮತ್ತು ಅವರ ಮನೆಯವರನ್ನು ತುಂಬು ಹೃದಯದಿಂದ ಸ್ವಾಗತಿಸಲಾಗಿತ್ತು
ನಾನು ಬೆಳಗ್ಗೆಯಿಂದ ಮದುವೆಗಾಗಿ ರೆಡಿಯಾಗಿ ಕುಳಿತಿದ್ದೆ, ವರ ಮತ್ತು ಅವನ ಕುಟುಂಬ ಮನೆಗೆ ಬಂದ ಬಳಿಕ ನನ್ನ ಪೋಷಕರನ್ನು ಹಾಗೂ ಸಂಬಂಧಿಕರನ್ನು ದೂಷಿಸಲು ಆರಂಭಿಸಿದರು. ಕೆಟ್ಟ ಪದಗಳಿಂದ ನಿಂದಿಸಿದರು ಹೀಗಾಗಿ ನಾವು ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯ್ತು ಎಂದು ವಧು ಹೇಳಿದ್ದಾಳೆ.
ಅಸಲಿಗೆ ಆಗಿದ್ದು ಮದುವೆಯ ದಿನ ಊಟಕ್ಕೆ ಅಂತ ಮೆಹ್ತಾಬ್ ಹಾಗೂ ಆತನ ಕುಟುಂಬ ಕುಳಿತಿದೆ. ಈ ವೇಳೆ ಊಟ ಬಡಿಸುವುದು ಕೊಂಚ ಲೇಟಾಗಿದೆ. ಈ ವೇಳೆ ಮೆಹ್ತಾಬ್​ನನ್ನು ಅವನ ಸ್ನೇಹಿತರು ಕಾಡಿಸಲು ಆರಂಭಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಮೆಹ್ತಾಬ್​ ವಧುವಿನ ಪೋಷಕರು ಹಾಗೂ ಸಂಬಂಧಿಕರೊಂದಿಗೆ ಜಗಳ ಶುರು ಮಾಡಿದ್ದಾನೆ. ಮಾತು ಅತಿರೇಕಕ್ಕೆ ಹೋಗಿ ಅದು ವಾಗ್ವಾದಕ್ಕೂ ತಲುಪಿದೆ. ಊರಿನ ಹಿರಿಯರು ಕುಳಿತು ಮಾತನಾಡಿಕೊಂಡು ಬಗೆಹರಿಸಿಕೊಳ್ಳಿ ಎಂದು ಹೇಳಿದರು ಕೂಡ ಮದುವೆಯನ್ನು ರದ್ಧುಗೊಳಿಸಿ ವಾಪಸ್ ತಮ್ಮ ಮನೆಗೆ ಹೋಗಿದೆ ಮೆಹ್ತಾಬ್ ಹಾಗೂ ಕುಟುಂಬ. ಅದರೇ ಅದಕ್ಕಿಂತ ಶಾಕಿಂಗ್ ಸುದ್ದಿಯಂದ್ರೆ ಮೆಹ್ತಾಬ್ ಮದುವೆ ಕ್ಯಾನ್ಸಲ್ ಮಾಡಿಕೊಂಡು ಹೋದ ದಿನವೇ ತನ್ನದೇ ಸೋದರ ಸಂಬಂಧಿಯನ್ನು ಮದುವೆಯಾಗಿದ್ದಾನೆ.
ಇದನ್ನೂ ಓದಿ:ನಿಶ್ಚಿತಾರ್ಥ ಆಗಿದ್ದ ಕೊಡಗಿನ ವೀರಯೋಧ ಹುತಾತ್ಮ; ಮದುವೆಗೆ ಇನ್ನೂ 2 ತಿಂಗಳು ಬಾಕಿ ಇತ್ತು
ಇನ್ನು ಈ ಬಗ್ಗೆ ಮಾತನಾಡಿರುವ ಹುಡುಗಿಯ ತಾಯಿ ನಾವು ಮದುವೆಗೆ ಅಂತಲೇ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ.200 ಜನರಿಗೆ ಊಟದ ವ್ಯವಸ್ಥೆ ಸೇರಿ ಹಲವು ರೀತಿಯ ಖರ್ಚುಗಳನ್ನು ಮಾಡಿದ್ದೇವೆ. ಗಂಡಿನ ಕಡೆಯವರಿಗೆ 1.5 ಲಕ್ಷ ರೂಪಾಯಿ ನೀಡಿದ್ದೇವೆ. ಇಷ್ಟೆಲ್ಲಾ ಮಾಡಿದರು ಕೂಡ ಕ್ಷುಲ್ಲಕ ಕಾರಣಕ್ಕಾಗಿ ಅವರು ಮದುವೆ ಮುರಿದುಕೊಂಡು ಹೋದರು ಎಂದು ದೂರಿದ್ದಾರೆ.
ಸದ್ಯ ಹುಡುಗ ಹಾಗೂ ಆತನ ಕುಟುಂಬದ ವಿರುದ್ಧ ಕೇಸ್ ದಾಖಲಾಗಿದ್ದು. ಹುಡುಗಿಯ ಕುಟುಂಬಕ್ಕೆ 1.6 ಲಕ್ಷ ರೂಪಾಯಿ ವಾಪಸ್ ಕೊಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದೆ ಮೆಹ್ತಾಬ್ ಕುಟುಂಬ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us