newsfirstkannada.com

Breaking News: ಬೆಂಗಳೂರಲ್ಲಿ ಘೋರ ದುರಂತ; 4 ಅಂತಸ್ತಿನ ಮೇಲಿದ್ದ ವಾಟರ್​ ಟ್ಯಾಂಕ್ ಬಿದ್ದು ಇಬ್ಬರು ಸಾವು

Share :

Published August 3, 2023 at 7:00am

Update August 3, 2023 at 7:01am

    ತಳ್ಳುಗಾಡಿಯಲ್ಲಿ ಎಗ್​ರೈಸ್ ಮಾರ್ತಿದ್ದ ಬಡಪಾಯಿ ಮೇಲೆ ಬಿದ್ದ ಟ್ಯಾಂಕ್

    ಘಟನಾ ಸ್ಥಳಕ್ಕೆ ಡಿಸಿಪಿ ಭೀಮಾಶಂಕರ್ ಗುಳೇದ್ ಭೇಟಿ, ಪರಿಶೀಲನೆ

    ಮನೆ ಮಾಲೀಕನ ವಿರುದ್ಧ ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ

ಬೆಂಗಳೂರು: ಎಗ್​​ರೈಸ್ ಅಂಗಡಿ ಮೇಲೆ ಓವರ್ ಟ್ಯಾಂಕ್ ಗೋಡೆ ಬಿದ್ದು ಇಬ್ಬರು ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಾಜಿನಗರ ಬಸ್​ಸ್ಟ್ಯಾಂಡ್​ ಬಳಿ ನಡೆದಿದೆ.

ಎಗ್​ರೈಸ್ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿ ಹಾಗೂ ಮತ್ತೊಬ್ಬ ಗ್ರಾಹಕ ಸಾವನ್ನಪ್ಪಿದ್ದಾನೆ. ನಾಲ್ಕು ಅಂತಸ್ತಿನ ಮೇಲಿದ್ದ ವಾಟರ್ ​ಟ್ಯಾಂಕ್​​ನ ಗೋಡೆ ಶಿಥಿಲಗೊಂಡು ಟ್ಯಾಂಕ್​ ಜೊತೆಗೆ ನೆಲಕ್ಕೆ ಉರುಳಿ ಬಿದ್ದಿದೆ. ಅದು ಬಿಲ್ಡಿಂಗ್ ಕೆಳಗಡೆ ತಳ್ಳು ಗಾಡಿಯಲ್ಲಿ ಎಗ್​ರೈಸ್ ಮಾರುತ್ತಿದ್ದ ವ್ಯಕ್ತಿ ಹಾಗೂ ಇನ್ನಿಬ್ಬರು ಗ್ರಾಹಕರ ತಲೆ ಮೇಲೆ ಬಿದ್ದು ಅನಾಹುತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ಭೀಮಾಶಂಕರ್ ಗುಳೇದ್ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ರಾತ್ರಿ 10:30ರ ಸಮಯದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಶಿವಾಜಿನಗರ ಬಸ್ ಸ್ಟಾಂಡ್​​ನಲ್ಲಿರುವ ‘ಓಕ್ ಫರ್ನೀಚರ್’ ಓವರ್ ಟ್ಯಾಂಕ್ ಬಿದ್ದಿದೆ. ಫುಟ್​ಪಾತ್ ಮೇಲಿದ್ದ ಎಗ್ ರೈಸ್ ಅಂಗಡಿ ಮೇಲೆ ಬಿದ್ದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಓವರ್ ಟ್ಯಾಂಕ್​ನ ಗೋಡೆ ಬಿದ್ದು ಸಂಭವಿಸಿದ ಅನಾಹುತ

ಅರುಳ್ (40) ಸಾವನ್ನಪ್ಪಿರುವ ವ್ಯಕ್ತಿ. ಓರ್ವ ವ್ಯಕ್ತಿಯ ಗುರುತು ಮಾತ್ರ ನಮಗೆ ಸಿಕ್ಕಿದೆ. ಮತ್ತೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ. ಕಮಲ್ ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣದ ಓವರ್ ಟ್ಯಾಂಕ್ ಅವೈಜ್ಞಾನಿಕದಿಂದ ಕೂಡಿದೆ. ಬಿಡಿಎ ಬಳಿ ಪರೀಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗತ್ತದೆ ಎಂದು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಬೆಂಗಳೂರಲ್ಲಿ ಘೋರ ದುರಂತ; 4 ಅಂತಸ್ತಿನ ಮೇಲಿದ್ದ ವಾಟರ್​ ಟ್ಯಾಂಕ್ ಬಿದ್ದು ಇಬ್ಬರು ಸಾವು

https://newsfirstlive.com/wp-content/uploads/2023/08/BNG_TANK.jpg

Load More