VIDEO: ತುಂಬಿ ತುಳುಕುತ್ತಿರುವ ರೈಲುಗಳು.. ಪ್ರಯಾಗ್‌ರಾಜ್‌ಗೆ ತೆರಳುವ ರೈಲಿನ ಕಿಟಕಿ ಗಾಜು ಪುಡಿ, ಪುಡಿ!

author-image
admin
Updated On
VIDEO: ತುಂಬಿ ತುಳುಕುತ್ತಿರುವ ರೈಲುಗಳು.. ಪ್ರಯಾಗ್‌ರಾಜ್‌ಗೆ ತೆರಳುವ ರೈಲಿನ ಕಿಟಕಿ ಗಾಜು ಪುಡಿ, ಪುಡಿ!
Advertisment
  • ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಇಂದು ಕೂಡ ಕೋಟಿ ಭಕ್ತರು
  • ಲಕ್ಷ, ಲಕ್ಷ ಜನ ಲಗೇಜ್, ಬ್ಯಾಗ್ ಸಮೇತ ರೈಲು ನಿಲ್ದಾಣಕ್ಕೆ ಆಗಮನ
  • ರೈಲಿನಲ್ಲಿ ಜಾಗ ಸಿಗದೇ ರೊಚ್ಚಿಗೆದ್ದಿರುವ ಜನರಿಂದ ತೀವ್ರ ಆಕ್ರೋಶ

ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಇಂದು ಕೂಡ ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ದಾಖಲೆ ಸಂಖ್ಯೆಯ ಜನರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಆದರೆ ಮಹಾಕುಂಭಮೇಳಕ್ಕೆ ಹೋಗಲು, ವಾಪಸಾಗಲು ರೈಲು ಸಿಗದೇ ಜನರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರ ಪ್ರದೇಶದ ರೈಲು ನಿಲ್ದಾಣಗಳಲ್ಲಿ ಭಕ್ತಾದಿಗಳು ಕಾಲಿಡಲು ಸಹ ಜಾಗವಿಲ್ಲದ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ಪ್ರಯಾಣಿಕರು ಲಗೇಜ್, ಬ್ಯಾಗ್ ಸಮೇತ ರೈಲು ನಿಲ್ದಾಣಕ್ಕೆ ಬಂದು ಪರದಾಡುತ್ತಿದ್ದಾರೆ. ರೈಲುಗಳು ಮಹಾಕುಂಭಮೇಳದ ಭಕ್ತಾದಿಗಳಿಂದ ತುಂಬಿ ತುಳುಕುತ್ತಿವೆ.

ಇದನ್ನೂ ಓದಿ: 50 ಕೋಟಿ ಭಕ್ತರು.. ದೇಶದ ಜನಸಂಖ್ಯೆಯ 3ನೇ ಒಂದು ಭಾಗ; ಮಹಾಕುಂಭಮೇಳಕ್ಕೆ ದಾಖಲೆಗಳೇ ಹೊಸ ಮೈಲಿಗಲ್ಲು! 

ರೈಲು ನಿಲ್ದಾಣದಲ್ಲಿ ಜನರಿಗೆ ವಾಪಸ್ ಹೋಗಲು ಜಾಗವೇ ಸಿಗುತ್ತಿಲ್ಲ. ರೈಲಿನಲ್ಲಿ ಜಾಗ ಸಿಗದೇ ರೊಚ್ಚಿಗೆದ್ದಿರುವ ಜನರು ರೈಲಿನ ಕಿಟಕಿ ಗಾಜು ಪುಡಿ, ಪುಡಿ ಮಾಡಿ ಹತಾಶೆಗೊಂಡಿದ್ದಾರೆ.

publive-image

ಬಿಹಾರದಲ್ಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಕಿಟಕಿ ಗಾಜು ಪುಡಿ, ಪುಡಿ ಮಾಡಲಾಗಿದೆ. ರೈಲು ನಿಲ್ದಾಣದೊಳಕ್ಕೆ ಹೋಗಲು, ರೈಲಿನೊಳಗೆ ಪ್ರವೇಶಿಸಲು ಕೂಡ ತಳ್ಳಾಟ, ನೂಕಾಟದ ಸನ್ನಿವೇಶ ಎದುರಾಗಿದೆ. ಕಿಟಕಿ ಗಾಜು ಹೊಡೆದಿದ್ದರಿಂದ ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರು ಬೇಸರಗೊಂಡಿದ್ದಾರೆ.

ರೈಲು ನಿಲ್ದಾಣದಲ್ಲಿ ಆಗಿದ್ದೇನು?
ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಜನರು ರೈಲು ಹತ್ತಲಾಗದೇ ರೈಲಿನ ಕಿಟಕಿಯನ್ನು ಹೊಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೈಲು ಬಿಹಾರದ ಜೈನ್ ನಗರದಿಂದ ಪ್ರಯಾಗರಾಜ್ ಮೂಲಕ ದೆಹಲಿಗೆ ಹೊರಟಿತ್ತು.


">February 11, 2025

ರೈಲು ಹತ್ತಲು ಪ್ರಯಾಣಿಕರು ಮುಗಿಬಿದ್ದಿದ್ದು, ಏರ್ ಕಂಡೀಷನ್ ಕಂಪಾರ್ಟ್‌ಮೆಂಟ್‌ನ ಕಿಟಕಿ ಹೊಡೆದು ಹಾಕಿದ್ದಾರೆ. ಮಹಿಳಾ ಪ್ರಯಾಣಿಕರು ಕಿಟಕಿ ಗಾಜು ಹೊಡೆದು ಹಾಕಿದ್ದರಿಂದ ಭಯಭೀತಿಗೊಂಡಿದ್ದಾರೆ. ಕೊನೆಗೆ ರೈಲ್ವೇ ಪೊಲೀಸರು ರೈಲು ನಿಲ್ದಾಣದಲ್ಲಿ ಗಲಾಟೆ ಮಾಡಿದವರನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಕಳೆದ ಗುರುವಾರ ಇದೇ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment