/newsfirstlive-kannada/media/post_attachments/wp-content/uploads/2024/10/OVIYA-VIDEO-LEAK-1.jpg)
ನಟಿ ಓವಿಯಾ ಹೆಲೆನ್, ಕಿರಾತಕ ಸಿನಿಮಾದಲ್ಲಿ ಯಶ್ ಜೊತೆಗೆ ನಟಿಸಿದ್ದ ದಕ್ಷಿಣ ಭಾರತದ ಈ ನಟಿ ಬಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಓವಿಯಾದು ಎನ್ನಲಾದ 16 ಸೆಕೆಂಡ್ಗಳ ಖಾಸಗಿ ವಿಡಿಯೋ ಹಲ್ ಚಲ್ ಎಬ್ಬಿಸಿದೆ. ಆದ್ರೆ ಈ ವಿಡಿಯೋ ಹಿಂದಿರೋದು ಆತನೇ ಅಂತಾ ಕಿರಾತಕ ಬೆಡಗಿ ಆರೋಪಿಸಿದ್ದಾರೆ.
ಹೀಗೆ ಯಶ್ ಜೊತೆಗೆ ಕಿರಾತಕ ಸಿನಿಮಾದಲ್ಲಿ ಚುಕ್ಕಿಚುಕ್ಕಿ ಅಂತಾ ಹೆಜ್ಜೆ ಹಾಕಿದ್ದ ನಟಿ ಓವಿಯಾ ಹೆಲೆನ್ ಬಗ್ಗೆ ದೇಶಾದ್ಯಂತ ಚರ್ಚೆ ನಡೀತಿದೆ. ಅದಕ್ಕೆ ಕಾರಣ ಆಕೆಯದ್ದು ಎನ್ನಲಾಗ್ತಿರೋ ಖಾಸಗಿ ವಿಡಿಯೋ ವೈರಲ್ ಆಗಿರೋದು.
ಇದನ್ನೂ ಓದಿ:ತಮನ್ನಾ ಭಾಟಿಯಾಗೆ ED ಮಾಸ್ಟರ್ ಸ್ಟ್ರೋಕ್; ನಿರಂತರ ವಿಚಾರಣೆ..? ವಿಷಯ ಏನು?
ಮಾಜಿ ಬಿಗ್ ಬಾಸ್ ಸ್ಪರ್ಧಿ ಕೂಡ ಆಗಿರೋ ಓವಿಯಾದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ. ಸದ್ಯ, ಈ ಬಗ್ಗೆ ಕೇರಳದ ತ್ರಿಶೂರ್ನ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ನೀಡಿರೋ ನಟಿ, ಮಾಜಿ ಬಾಯ್ ಫ್ರೆಂಡ್ ಈ ವಿಡಿಯೋಗಳ ಹಿಂದಿದ್ದಾನೆ ಅಂತಾ ಆರೋಪಿಸಿದ್ದಾರೆ.
ಓವಿಯಾ ವಿರುದ್ಧ ಮಾಜಿ ಗೆಳೆಯ ತಾರಿಖ್ನ ಸೇಡು!
ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ, ಮಾಜಿ ಗೆಳೆಯ ತಾರಿಖ್ ವಿರುದ್ಧ ನಟಿ ಓವಿಯಾ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಆತನ ಕೆಟ್ಟ ನಡುವಳಿಕೆಗಳಿಂದ ನಾನು ಇತ್ತೀಚೆಗೆ ನಾನು ಆತನಿಂದ ದೂರವಾಗಿದ್ದೆ. ಹೀಗಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾನೆ ಅಂತಾ ನಟಿ ಆರೋಪಿಸಿದ್ದಾರೆ. ಮಾರ್ಫ್ ಮಾಡಿರೋ ವಿಡಿಯೋ ಹರಿಬಿಟ್ಟು ಕೋಪ ತೀರಿಸಿಕೊಳ್ತಿರೋದಾಗಿ ದೂರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಆತ ಹಲವು ಮಹಿಳೆಯರ ಇಂಥಾ ವಿಡಿಯೋ ಹೊಂದಿದ್ದಾನೆ ಅನ್ನೋ ಆರೋಪವನ್ನೂ ಓವಿಯಾ ಮಾಡಿದ್ದಾರೆ.
ಇದನ್ನೂ ಓದಿ:ಸುದೀಪ್ ನಟನೆ ಮೇಲೆ ಭಾರೀ ಪ್ರಭಾವ ಬೀರಿದ್ದ ತಾಯಿ ಸರೋಜಾ; ಆ ಘಟನೆ ನೆನೆದ ಪವನ್ ಕಲ್ಯಾಣ್
ವೈರಲ್ ವಿಡಿಯೋ ಸಂಬಂಧ ಕಿರಾತಕ ಕ್ವೀನ್ ಕಾನೂನು ಸಮರ ಸಾರಿದ್ದಾರೆ. ಈ ನಡುವೆ ಸಾಕಷ್ಟು ಕಮೆಂಟ್ಸ್ಗಳು ನಟಿ ಬಗ್ಗೆ ಜಾಲತಾಣದಲ್ಲಿ ಕಾಣಸಿಕ್ತಿವೆ. ಇದಕ್ಕೆ ಬೋಲ್ಡ್ ಆಗಿ ಉತ್ತರಿಸ್ತಿರೋ ಓವಿಯಾ, ಎಂಜಾಯ್ ಮಾಡಿ ಅಂತ ಉತ್ತರಿಸ್ತಿದ್ದಾರೆ.
ಒಟ್ಟಾರೆ ಈ ಪ್ರಕರಣ ಸಂಬಂಧ ಪೊಲೀಸರ ತನಿಖೆ ಶುರುವಾಗಿದ್ದು, ವಿಡಿಯೋ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ. ಆದ್ರೆ ಓವಿಯಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಸುನಾಮಿ ಎದ್ದಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ