ಶ್ರೀಮಾತಾ ಆಸ್ಪತ್ರೆಯ ಮಾಲೀಕ, ಡಾ ಸತೀಶ್ ಪೂಜಾರಿ ಹೃದಯಘಾತಕ್ಕೆ ಬಲಿ

author-image
AS Harshith
Updated On
ಶ್ರೀಮಾತಾ ಆಸ್ಪತ್ರೆಯ ಮಾಲೀಕ, ಡಾ ಸತೀಶ್ ಪೂಜಾರಿ ಹೃದಯಘಾತಕ್ಕೆ ಬಲಿ
Advertisment
  • ಖಾಸಗಿ ಆಸ್ಪತ್ರೆಯ ವೈದ್ಯ ಹೃದಯಘಾತದಿಂದ ನಿಧನ
  • ಇಂದು ಮುಂಜಾನೆ ಮನೆಯಲ್ಲಿಯೇ ಸಾವನ್ನಪ್ಪಿದ ವೈದ್ಯ
  • ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಗುರುತಿಸಿಕೊಂಡಿದ್ದ ವೈದ್ಯ

ಉಡುಪಿ: ಕುಂದಾಪುರ ಖಾಸಗಿ ಆಸ್ಪತ್ರೆಯ ವೈದ್ಯ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಶ್ರೀಮಾತಾ ಅಸ್ಪತ್ರೆಯ ಡಾ.ಸತೀಶ ಪೂಜಾರಿ (54) ಮೃತಪಟ್ಟವರು ಎಂದು ಗುರುತಿಸಲಾಗಿದೆ.

publive-image

ಡಾ. ಸತೀಶ್ ಪೂಜಾರಿಯವರು ಶ್ರೀಮಾತಾ ಆಸ್ಪತ್ರೆಯ ಮಾಲೀಕರು ಆಗಿದ್ದು, ಇಂದು ಮುಂಜಾನೆ ಕೋಟತಟ್ಟುವಿನ ಮನೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

publive-image

ಇದನ್ನೂ ಓದಿ: KRS Dam: ಕಾವೇರಿ ಜಲಧಾರೆಗೆ ತುಂಬುತ್ತಿದೆ ಅಣೆಕಟ್ಟು.. ಇಂದು ಕೆಆರ್​ಎಸ್​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಡಾ. ಸತೀಶ್ ಪೂಜಾರಿಯವರು ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದರು. ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಿದ್ದರು.

publive-image

ಇದನ್ನೂ ಓದಿ: 10 ಲಕ್ಷ ಭಾರತದ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಶನಿ ದೇವರ ವಾಹನವನ್ನೇ ಹತ್ಯೆ ಮಾಡ್ತಿದ್ದಾರೆ ಇಲ್ಲಿ!

ಡಾ.ಸತೀಶ್ ಪೂಜಾರಿ ಫಿಟ್ನೆಸ್ ಕುರಿತು ಅತಿ ಹೆಚ್ಚು ಒಲವು ಹೊಂದಿದ್ದರು. ಆದರಿಂದು ಹೃದಯಾಘಾತಕ್ಕೆ ನಿಧನರಾಗಿದ್ದಾರೆ. ಮೃತರು ಪತ್ನಿ ಮತ್ತು ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment